'ಟಾಲಿವುಡ್​ ಸ್ಟಾರ್​ ನಟನೊಬ್ಬ ಕಾಲು ಮುಟ್ಟಿ, ಅಸಹ್ಯವಾಗಿ ವರ್ತಿಸಿದ್ದರು'; South India ಸಿನಿ ಲೋಕದ ಬಗ್ಗೆ ರಾಧಿಕಾ ಆಪ್ಟೆ ಮಾತು

'ಟಾಲಿವುಡ್​ ಸ್ಟಾರ್​ ನಟನೊಬ್ಬ ಕಾಲು ಮುಟ್ಟಿ, ಅಸಹ್ಯವಾಗಿ ವರ್ತಿಸಿದ್ದರು'; South India ಸಿನಿ ಲೋಕದ ಬಗ್ಗೆ ರಾಧಿಕಾ ಆಪ್ಟೆ ಮಾತು
Published on: 
  • ದಕ್ಷಿಣ ಭಾರತದ ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಮತ್ತು ನಟರ ಹವಾ ಹೆಚ್ಚಿದೆ ಎಂದು ರಾಧಿಕಾ ಆಪ್ಟೆ ಮಾತು

  • ಶೂಟಿಂಗ್​ ವೇಳೆ ಸ್ಟಾರ್​ ನಟ ತನ್ನೊಂದಿಗೆ ಅಸಹ್ಯವಾಗಿ ನಡೆದುಕೊಂಡ ಬಗ್ಗೆ ಮಾತನಾಡಿದ ರಾಧಿಕಾ

  • ರಜನೀಕಾಂತ್ ಮತ್ತು ಪ್ರಕಾಶ್ ರಾಜ್‌ ಅವರ ಉತ್ತಮ ಗುಣ, ಒಡನಾಟವನ್ನು ಕೊಂಡಾಡಿದ ರಾಧಿಕಾ.

Radhika Apte about Telugu star hero misbehaving: ಸಿನಿಮಾದಲ್ಲಿ ಅನಾವಶ್ಯಕವಾಗಿ ಮಹಿಳಾ ನಟಿಯರನ್ನು ಗ್ಲಾಮರಸ್​​ಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯವೇ ಇಲ್ಲದ ಕಡೆಗಳಲ್ಲಿ ಬೋಲ್ಡ್​ ದೃಶ್ಯಕ್ಕೆ ಬೇಡಿಕೆ ಇಡಲಾಗುತ್ತದೆ ಎಂದು ಇತ್ತೀಚೆಗೆ ಬಾಲಿವುಡ್​ ನಟಿ ರಾಧಿಕಾ ಆಪ್ಟೆ ಅವರು ಮಾತನಾಡಿದ್ದರು. ಸದ್ಯ ಅವರು ಸೌತ್​ ಇಂಡಿಯಾ ಸ್ಟಾರ್​ ಬಾಲಯ್ಯ ಎಂದೇ ಫೇಮಸ್​ ಆಗಿರುವ ಸ್ಟಾರ್​ ನಟ ಬಾಲಕೃಷ್ಣ ವಿರುದ್ಧ ಫಿಲ್ಟರ್​ ಇಲ್ಲದೆ ಮಾತನಾಡಿರುವುದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಲಿಂಗ ತಾರತಮ್ಯ ಹೆಚ್ಚಿದೆ. ಆದರೆ, ಎಲ್ಲ ನಟರು ಹಾಗೆಲ್ಲ ವರ್ತನೆ ಮಾಡೋದಿಲ್ಲ. ಆದರೆ ಕೆಲವರು ಕಿರುಕುಳ ನೀಡುತ್ತಾರೆ. ನಾನು ಕೆಲಸ ಮಾಡಿದ ಕೆಲವು ಸಿನಿಮಾಗಳ ನಾಯಕರಿಂದ ನಾನು ಆ ಕಿರುಕುಳವನ್ನು ಅನುಭವಿಸಿದ್ದೇನೆ ಎಂದು ಬಾಲಯ್ಯ ಜೊತೆಗೆ ನಟಿಸಿದ ಮೊದಲ ಸಿನಿಮಾದಲ್ಲಾದ ಅನುಭವವನ್ನು ಲಸ್ಟ್​ ಸ್ಟೋರಿಸ್ ನಟಿ ರಾಧಿಕಾ ಆಪ್ಟೆ ಮಾತನಾಡಿದರು.

ಏನಾಗಿತ್ತು?

ದಕ್ಷಿಣ ಭಾರತದಲ್ಲಿರುವ ಸಿನಿಮಾ ನಾಯಕರು ಹೆಚ್ಚು ಖ್ಯಾತಿ ಪಡೆದ ಪ್ರಬಲ ನಟರು. ನಾಯಕಿಯರನ್ನು ಎರಡು ಗಂಟೆಗೂ ಮುನ್ನವೇ ಸೆಟ್​ಗೆ ಕರೆಸಿಕೊಳ್ಳುತ್ತಾರೆ. ನಾವು ನಾಯಕರು ಬರುವವರೆಗೂ ಕಾಯವೇಕು. ನಾಯಕಿಯರನ್ನು ವಿಭಿನ್ನವಾಗಿ ನಡೆಸಿಕೊಳ್ಳುತ್ತಾರೆ ಎನ್ನುವುದನ್ನು ರಾಧಿಕಾ ಆಪ್ಟೆ ಮಾತನಾಡಿದರು.

ಅಸಹ್ಯವಾಗಿ ವರ್ತಿಸಿದರು

ಮುಂದುವರೆದು, 'ತೆಲುಗು ಸಿನಿಮಾರಂಗದಲ್ಲಿ ನಾನು ಆಕ್ಟ್​ ಮಾಡಿದ ಮೊದಲ ಸಿನಿಮಾ ಬಗ್ಗೆ ಮಾತನಾಡಲೇ ಬೇಕು. ಅಲ್ಲೊಂದು ಘಟನೆ ನಡೆದಿತ್ತು ಒಂದು ದೃಶ್ಯದಲ್ಲಿ ನಾನು ಮಲಗಿರಬೇಕಿತ್ತು. ಸುತ್ತಲೂ ಸಿಬ್ಬಂದಿ ಇದ್ದರು, ಶಾಟ್ ರೆಡಿ ಆಗಿತ್ತು. ಆಗ ಸ್ಟಾರ್ ನಟನೊಬ್ಬ ನಡೆದುಕೊಂಡು ಬಂದರು. ನಾವು ರಿಹರ್ಸಲ್ ಮಾಡುತ್ತಿದ್ದಾಗ, ಆ ನಟ ನನ್ನೊಂದಿಗೆ ಅಸಭ್ಯವಾಗಿ ವರ್ತಿಸುತ್ತಾ ನನ್ನ ಪಾದವನ್ನು ಮುಟ್ಟಿದ. ನಂತರ ಅಸಹ್ಯಕರ ರೀತಿಯಲ್ಲಿ ನನ್ನನ್ನು ನೋಡಿದನು. ಆತ ದೊಡ್ಡ ಸ್ಟಾರ್ ಮತ್ತು ಪವರ್‌ಫುಲ್ ನಟ ಎಂದು ನನಗೆ ತಿಳಿಸಿದರು' ಎಂದು ರಾಧಿಕಾ ವಿವರಿಸಿದ್ದಾರೆ.

'ಆಗ ಆ ಸಮಯದಲ್ಲಿ ನನ್ನ ಮುಂದೆ ಸಿನಿಮಾ ಸದಸ್ಯರು ಹಾಗೂ ಜೂನಿಯರ್​ ಆರ್ಟಿಸ್ಟ್​ಗಳು ಇದ್ದರು.ಅವರ ವರ್ತನೆ ಹಾಗೂ ನನ್ನ ಕೋಪವನ್ನು ಗಮನಿಸಿದರು. ನಾನು ಆತನನ್ನೇ ದಿಟ್ಟಿಸಿ ನೋಡಿ, ಇನ್ನೊಮ್ಮೆ ನನ್ನೊಂದಿಗೆ ಹಾಗೆ ವರ್ತಿಸಬೇಡಿ. ಮತ್ತೆ ಇಂತದ್ದನ್ನು ನನಗೆ ಮಾಡಬೇಡಿ ಎಂದು ಎರಡು ಬಾರಿ ಹೇಳಿದೆ'. 'ಅವನು ನನ್ನನ್ನು ನೋಡಿ ಹೊರಟುಹೋದನು. ಅಂದಿನಿಂದ ಯಾವತ್ತೂ ಹಾಗೆ ನನ್ನೊಂದಿಗೆ ವರ್ತಿಸಿಲ್ಲ.

ಬಾಲಯ್ಯ ಎಂದ ನೆಟ್ಟಿಗರು

ಬಾಲಯ್ಯ ಅವರೇ ರಾಧಿಕಾ ಆಪ್ಟೆ ಜೊತೆಗೆ ಅಸಭ್ಯವಾಗಿ ವರ್ತಿಸಿರೋದು. ಅವರ ಮೊದಲ ಸಿನಿಮಾ ಲೆಜೆಂಡ್ ಚಿತ್ರದಲ್ಲಿ ಅವರಿಗೆ ಈ ಕಹಿ ಅನುಭವವಾಗಿದೆ. ಆನಂತರ ಅವರೊಟ್ಟಿಗೆ ಲಯನ್​ ಸಿನಿಮಾದಲ್ಲಿಯೂ ನಟಿಸಿದ್ದಾರೆ ಎನ್ನಲಾಗಿದೆ.

ಪ್ರಕಾಶ್ ರಾಜ್-ರಜನೀಕಾಂತ್ ಅದ್ಭುತ ನಟರು

'ಸಿನಿಮಾ ರಂಗದಲ್ಲಿ ಎಲ್ಲ ನಟರು ಹಾಗೆ ನಡೆದುಕೊಂಡಿಲ್ಲ. ರಜನೀಕಾಂತ್ ಅವರು ನಟಿಯರನ್ನು ಅತ್ಯಂತ ಗೌರವದಿಂದ ಕಾಣುತ್ತಾರೆ. ಅವರು ಬಹಳ ಒಳ್ಳೆಯ ವ್ಯಕ್ತಿ ಮತ್ತು ಮಾನವೀಯತೆ ಇರುವ ಅದ್ಭುತ ಮನುಷ್ಯ. ಇನ್ನೂ ಪ್ರಕಾಶ್​ ರಾಜ್​ ಅವರೂ ಅಷ್ಟೇ' ಎಂದು ಹೇಳಿದರು.

ರಾಧಿಕಾ ಆಪ್ಟೆ ಅವರು ರಕ್ಷಾ ಚರಿತ್ರೆ, ಲೆಜೆಂಡ್ ಮತ್ತು ಲಯನ್, ಕಬಾಲಿ, ಧೋನಿ ಸೇರಿದಂತೆ ಹಲವು ಸೌತ್​ ಇಂಡಿಯಾ ಸಿನಿಮಾಗಳಲ್ಲಿ ನಟಿಸಿದ್ದಾರೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net