More

    ಕಡಲೆಗೆ ಬೆಂಬಲ ಬೆಲೆಗೆ ಪಟ್ಟು

    ಚಿತ್ರದುರ್ಗ: ಕಡಲೆಗೆ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ಚಿತ್ರದುರ್ಗ ತಾಲೂಕಿನ ತುರುವನೂರು ನಾಡಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

    ಮುಂಗಾರು ಕೈ ಕೊಟ್ಟಿದ್ದರಿಂದಾಗಿ ಹಾಗೂ ಹಿಂಗಾರು ಅತಿವೃಷ್ಟಿಯಿಂದಾಗಿ ಶೇ.40 ಪ್ರಮಾಣದಲ್ಲಿ ಬೆಳೆ ಹಾಳಾಗಿದ್ದು, ಕೇಂದ್ರ ಘೋಷಿಸಿರುವ ದರ ಕ್ವಿಂ.ಗೆ 4.600 ರೂ. ಇದ್ದರೂ ಪ್ರಸ್ತುತ ಬೆಲೆ ಕುಸಿದು ಪರಿಸ್ಥಿತಿ ಶೋಚನೀಯಕ್ಕೆ ಸಿಲುಕಿದೆ.

    ಪ್ರಸ್ತುತ ಕಡಲೆ ಧಾರಣೆ ಕ್ವಿಂ.ಗೆ 3 ಸಾವಿರ ರೂ. ಗಳಿಂದ 3 600 ರೂ. ವರೆಗಿದೆ. ಆದರೆ, ಒಂದು ಕ್ವಿಂ.ಗೆ ಕಡಲೆ ಬೆಳೆಯಲು 5 ಸಾವಿರ ರೂ. ವರೆಗೆ ವೆಚ್ಚವಾಗುತ್ತದೆ ಎಂದು ಅಳಲು ತೋಡಿಕೊಂಡರು.

    ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಿ, ಪ್ರತಿ ರೈತನಿಗೆ ಕನಿಷ್ಠ 50 ಕ್ವಿಂ. ಕಡಲೆ ಮಾರಾಟಕ್ಕೆ ಅವಕಾಶ ಕೊಡುವಂತೆ ಒತ್ತಾಯಿಸಿ ಉಪ ತಹಸೀಲ್ದಾರ್ ನಾಗರಾಜ್‌ಗೆ ಮನವಿ ಸಲ್ಲಿಸಿದರು.

    ಮುಖಂಡರಾದ ಕಾಕಿ ಹನುಮಂತರೆಡ್ಡಿ, ಆರ್.ಮಂಜುನಾಥ, ಶಶಿಧರ ರೆಡ್ಡಿ, ಕೆ.ಆರ್.ಚಿನ್ನಪ್ಪ, ಕೆ.ವಿ.ಕಾರ್ತಿಕ್, ನಾಗೇಂದ್ರಪ್ಪ, ಉಮೇಶ, ಗ್ರಾಪಂ ಸದಸ್ಯ ಗುರುಮೂರ್ತಿ, ತಾಪಂ ಸದಸ್ಯ ಬೋರಣ್ಣ, ಮಹಾಂತಣ್ಣ, ಏಕಣ್ಣ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts