More

    ಚಂಚಲತೆ ತರಲಿದೆ ಅಪಾಯ

    ಚಿತ್ರದುರ್ಗ: ಸತತ ಅಭ್ಯಾಸದೊಂದಿಗೆ ಮನಸ್ಸಿನ ಮೇಲೆ ಹತೋಟಿ ಸಾಧಿಸಬಹುದು ಎಂದು ಭದ್ರಾವತಿ ಮನಶಾಸ್ತ್ರಜ್ಞ ವಿ.ಸಂತೋಷ್‌ಕುಮಾರ್ ಹೇಳಿದರು.

    ನಗರದ ಶ್ರೀ ಕಬೀರಾನಂದಾಶ್ರಮದಲ್ಲಿ ಬುಧವಾರ ಮಹಾಶಿವರಾತ್ರಿ ಮಹೋತ್ಸವದಲ್ಲಿ ಮನಸ್ಸಿ ಏಕಾಗ್ರತೆ ಕುರಿತು ಉಪನ್ಯಾಸ ನೀಡಿದ ಅವರು, ದುರ್ಬಲ ಮನಸ್ಸಿಗೆ ಆತಂಕ ಸಹಜ. ಆತ್ಮವಿಶ್ವಾಸ ಕುಂದಿದರೆ ಮನಸ್ಸಿನಲ್ಲಿ ಮೂಡುವ ಪ್ರತಿ ಆಲೋಚನೆಗಳಿಗೂ ಪ್ರತಿ ಸ್ಪಂದಿಸುವಂತಾಗುತ್ತದೆ ಎಂದರು.

    ಇದರಿಂದ ಒಳಿತಗಿಂತ ಕೆಡುಕೆ ಅಧಿಕ. ಆದ್ದರಿಂದ ಏಕಾಗ್ರತೆಯಿಂದ ಚಂಚಲತೆ ಹೋಗಲಾಡಿಸಿ ಮನಸ್ಸನ್ನು ಕಟ್ಟಿ ಹಾಕಬೇಕು. ಆಗ ಮಾತ್ರ ನಮ್ಮ ಗುರಿ ಸಾಧನೆ ಹಾದಿ ಸುಗಮವಾಗಲಿದೆ. ಲೌಕಿಕ, ಪಾರಮಾರ್ಥಿಕ ಸಿದ್ಧಿಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

    ಮನೋ ನಿಗ್ರಹಕ್ಕಾಗಿ ಪ್ರಾಣಾಯಾಮ, ಧ್ಯಾನ ಮಾಡಬೇಕು. ಮನೋಬಲವಿದ್ದರೆ, ಗುರು ಹಾಗೂ ದೈವ ಬಲ ಒಲಿಯುತ್ತದೆ. ಬೆಳಕಿಗಿಂತ ಮನಸ್ಸಿನ ವೇಗ ಹೆಚ್ಚು. ಚಂಚಲ ಮನಸ್ಸಿನಿಂದ ಅಪಾಯ ಹೆಚ್ಚು ಎಂದು ಎಚ್ಚರಿಸಿದರು.

    ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ಬುದ್ಧ ,ಬಸವ, ಗಾಂಧಿ, ಅಂಬೇಡ್ಕರ್ ಮೊದಲಾದ ಮಹಾನ್ ದಾರ್ಶನಿಕರು ನಾಡಿಗೆ ಆನೇಕ ಆದರ್ಶ, ಸಂಸ್ಕಾರ, ಸಂಸ್ಕೃತಿಗಳನ್ನು ಕೊಟ್ಟಿದ್ದಾರೆ ಎಂದರು.

    ಏಕತೆ ಸಾರುವ ಭಾರತದ ಸಂಸ್ಕೃತಿ ಅತ್ಯಂತ ಹಿರಿದು. ಋಷಿ, ಮುನಿ, ಶರಣರು, ಹರಗುರು ಚರಮೂರ್ತಿಗಳು ಹಾಗೂ ದಾಸವರಣ್ಯೇರು, ವಚನ, ದಾಸ ಸಾಹಿತ್ಯ, ಅನುಭವ ಮಂಟಪದ ಪರಿಕಲ್ಪನೆ ಸಾಮಾಜಿಕ ಸುಧಾರಣೆ, ನಾಡಿನ ಸಂಸ್ಕೃತಿ ಹಿರಿಮೆ ಹೆಚ್ಚಿಸಿದೆ ಎಂದು ತಿಳಿಸಿದರು.

    ಬಾಗಲಕೋಟೆ ಅರಿಕೆರೆ ಶ್ರೀ ಕೌದೀಶ್ವರ ಮಠದ ಶ್ರೀ ಮಾಧವಾನಂದ ಸ್ವಾಮೀಜಿ, ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

    ಜಾದುಗಾರ ಕುದ್ರೋಳಿ ಗಣೇಶ್, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಜೆ.ಬೆನಕಪ್ಪ, ಬಿ.ದಿವಾಕರ ಶೆಟ್ಟಿ, ವಾಗೀಶ್, ಕೆ.ಎಸ್.ವಿಜಯಕುಮಾರ್, ರಂಗನಾಥಗಿರಿ, ಬಿ.ಟಿ.ಪುಟ್ಟಣ್ಣ, ನಗರಸಭೆ ಸದಸ್ಯೆ ಪೂಜಾ ಮಂಜುನಾಥ್, ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ರಮೇಶ್ ಇತರರು ಉಪಸ್ಥಿತರಿದ್ದರು.

    ಮಂಜುನಾಥ ಗುಪ್ತ ಸ್ವಾಗತಿಸಿದರು. ಹುರುಳಿ ಬಸವರಾಜ ನಿರೂಪಿಸಿದರು. ಅಂಜನಾ ನೃತ್ಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts