More

    ಪೌರತ್ವ ಕಾಯ್ದೆ ವಿರುದ್ಧ ಕೈ ಷಡ್ಯಂತ್ರ

    ಚಿತ್ರದುರ್ಗ: ಪೌರತ್ವ ಕಾಯ್ದೆ ವಿಷಯದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದ್ದು, ಇದರಲ್ಲಿ ಕಾಂಗ್ರೆಸ್ ಷಡ್ಯಂತ್ರ ಅಡಗಿದೆ ಎಂದು ಸಚಿವ ಸಿ.ಟಿ.ರವಿ ಆರೋಪಿಸಿದರು.

    ನಗರದ ಕಬೀರಾನಂದ ಮಠಕ್ಕೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ, ಬಾಂಗ್ಲಾದಿಂದ ಭಾರತಕ್ಕೆ ಬಂದವರು ಭಯಪಡಬೇಕು. ಇಲ್ಲಿ ಹುಟ್ಟಿದವರು ಆತಂಕ ಯಾಕೆ ಪಡಬೇಕು. ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ದೇಶದಲ್ಲಿ ಅಶಾಂತಿ ನಿರ್ಮಾಣ ಮಾಡುವುದು ಕಾಂಗ್ರೆಸ್ ಪಕ್ಷದ ಉದ್ದೇಶ ಆಗಿದೆ ಎಂದು ದೂರಿದರು.

    ನಮ್ಮನ್ನು ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದು ಹೇಳಿದ ಕಾಂಗ್ರೆಸ್ ಪಕ್ಷದ ಹಿರಿತಲೆಗಳು ಮಣ್ಣಾಗಿ ಹೋಗಿದ್ದಾರೆ. ಜನಸಂಘವನ್ನು ಇಲ್ಲದಂತೆ ಮಾಡುತ್ತೇನೆ ಎಂದು ನೆಹರೂ ಹೇಳಿದ್ದರು. ಆದರೆ, ನೆಹರೂ ಈಗ ಉಳಿದಿಲ್ಲ, ಜನಸಂಘ ದೊಡ್ಡ ಪಕ್ಷವಾಗಿ ಬೆಳೆದಿದೆ ಎಂದರು.

    ಸಿದ್ದರಾಮಯ್ಯ ವೀರ ವೇಷದಿಂದ ಮಾತನಾಡುತ್ತಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ದೌರ್ಜನ್ಯ ನಡೆಸಿದ್ದನ್ನು ಮರೆತಿದ್ದಾರೆ. ಬಹಳಷ್ಟು ಜನರ ವಿರುದ್ಧ ಸುಳ್ಳು ಕೇಸ್ ದಾಖಲಿಸಿದರು. ಪಟ್ಟಿ ಬೇಕಾದರೆ ಕೊಡುತ್ತೇನೆ ಎಂದು ಹೇಳಿದರು.

    ನಾವು ದೌರ್ಜನ್ಯ, ದ್ವೇಷದ ರಾಜಕಾರಣ ಮಾಡುವುದಿಲ್ಲ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

    ಅಪಘಾತ ಪ್ರಕರಣದಲ್ಲಿ ಸಚಿವ ಆರ್.ಅಶೋಕ್ ಪುತ್ರ ಇದ್ದಾನೆ ಎಂದು ಆರೋಪ ಮಾಡುವವರು ಮೊದಲು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

    ಎಚ್.ಡಿ.ಕುಮಾರಸ್ವಾಮಿ ದೊಡ್ಡ ವ್ಯಕ್ತಿ. ಅವರ ಕುರಿತು ಮಾತನಾಡುವುದಿಲ್ಲ. ಅನುದಾನ ಹಂಚಿಕೆಯಲ್ಲಿ ಎಚ್‌ಡಿಕೆ ಅವಧಿಯಲ್ಲಿ ತಾರತಮ್ಯ ಆಗಿತ್ತು. ಇದನ್ನು ನಮ್ಮ ಸರ್ಕಾರ ಪರಿಶೀಲನೆ ನಡೆಸಿ ಮರು ಹಂಚಿಕೆ ಮಾಡಿದೆ ಎಂದರು.

    ಅಸ್ಪಶ್ಯತೆ ಇರುವವರೆಗೂ ಮೀಸಲಾತಿ: ಬಿಜೆಪಿ ಸರ್ಕಾರ ಮೀಸಲಾತಿ ಕಿತ್ತುಕೊಳ್ಳಲಿದೆ ಎಂದು ಪ್ರತಿಪಕ್ಷಗಳು ಸುಳ್ಳು ಸುದ್ದಿ ಹರಡುತ್ತಿವೆ. ಮೋದಿ ಸರ್ಕಾರ ಮೀಸಲಾತಿ ಪರ ಇದೆ. ಎಲ್ಲಿಯವರೆಗೂ ಅಸ್ಪಶ್ಯತೆ ಇರುತ್ತದೆಯೋ, ಅಲ್ಲಿಯವರೆಗೂ ಮೀಸಲಾತಿ ಇರಲಿದೆ. ಅಸಹಾಯಕರು, ಶೋಷಿತರಿಗೆ ಮೀಸಲಾತಿ ನೀಡುವುದು ಸರ್ಕಾರದ ಕರ್ತವ್ಯ ಎಂದು ಸಿ.ಟಿ.ರವಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts