More

    ಅಶಕ್ತರ ಸಂಕಷ್ಟಕ್ಕೆ ಮಿಡಿದ ಜನತೆ

    ಚಿತ್ರದುರ್ಗ: ನಗರದ ಜೆಎಂಐಟಿ ವೃತ್ತದ ಬಳಿ ಟೆಂಟ್‌ಗಳಲ್ಲಿ ವಾಸವಿರುವ ಉತ್ತರ ಪ್ರದೇಶದ ಅಲೆಮಾರಿ ಜನರಿಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಗುರುವಾರ ಮಧ್ಯಾಹ್ನ ಆಹಾರ ವಿತರಿಸಿದರು.

    ಟೆಂಟ್‌ಗಳಲ್ಲಿ ಹುಬ್ಬಳ್ಳಿಯ 20 ಜನರು ಸೇರಿ ಉತ್ತರ ಪ್ರದೇಶದ 150 ಜನರಿದ್ದಾರೆ. ಎಲ್ಲರಿಗೂ ಲಾಕ್‌ಡೌನ್ ಮುಗಿವವವರೆಗೆ ಶಾಸಕ ತಿಪ್ಪಾರೆಡ್ಡಿ ಅಭಿಮಾನಿಗಳು ಆಹಾರ ಒದಗಿಸಲಿದ್ದಾರೆ. ಸರ್ಕಾರದಿಂದ ಎರಡು ತಿಂಗಳ ಪಡಿತರ ವಿತರಿಸುವ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ.

    ಇದಕ್ಕೂ ಮುನ್ನ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಬಳಿ ದಕ್ಕೂ ಪೊಲೀಸರು, ನಗರಸಭೆ ನೌಕರರು, ಸಂಘ ಪರಿವಾರದ ಕಾರ್ಯಕರ್ತರು ಹಾಗೂ ಪತ್ರಕರ್ತರಿಗೆ ಶಾಸಕರು ಮಾಸ್ಕ್, ಸ್ಯಾನಿಟೈಸರ್ ನೀಡಿದರು.

    ಈ ವೇಳೆ ಮಾತನಾಡಿ, ಲಾಕ್‌ಡೌನ್‌ನ ಈ ಸಂಕಷ್ಟದ ಸಮಯದಲ್ಲಿ ಇದ್ದವರು ಇಲ್ಲದವರಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆಯಬೇಕು.ಶ್ರೀಮಂತರು ಪ್ರಧಾನಿ ಹಾಗೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಮನವಿ ಮಾಡಿದರು.

    ಡಿವೈಎಸ್ಪಿ ಪಾಂಡುರಂಗ, ನಗರಸಭೆ ಆಯುಕ್ತ ಜಿ.ಟಿ.ಹನುಮಂತರಾಜು, ವಾರ್ತಾಧಿಕಾರಿ ಧನಂಜಯಪ್ಪ, ಡಾ.ಜಿ.ಟಿ.ಸಿದ್ದಾರ್ಥ, ಬಿಜೆಪಿ ಪ್ರಮುಖರಾದ ಚಾಲುಕ್ಯ ನವೀನ್, ಆನಂದ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts