More

    ಬೆಳೆ ನಷ್ಟವಾದ್ರೂ ಮತ್ತೆ ಹೊಸ ಸಾಲ

    ಚಿತ್ರದುರ್ಗ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರವೂ ದೇಶಾದ್ಯಂತ ಫೆ.24ರಂದು ಕೋಟಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ವಿತರಿಸುವಂತೆ ಬ್ಯಾಂಕ್‌ಗಳಿಗೆ ನಿರ್ದೇಶಿಸಿದೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ಹೇಳಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ 9.22 ಕೋಟಿ ರೈತರು ಯೋಜನೆಗೆ ನೋಂದಾಯಿಸಿದ್ದು, 6.76 ಕೋಟಿ ಮಂದಿ ಕೆಸಿಸಿ ಮೂಲಕ ಬೆಳೆ ಸಾಲ ಪಡೆದಿದ್ದಾರೆ. 2.46 ಕೋಟಿ ರೈತರು ಸಾಲ ಪಡೆಯ ಬೇಕಿದೆ ಎಂದರು.

    ಚಿತ್ರದುರ್ಗ ಜಿಲ್ಲೆಯಲ್ಲಿ 1,84,730 ರೈತರು ಯೋಜನೆಗೆ ನೋಂದಾಯಿಸಿದ್ದು, 1,57,167 ರೈತರು ಕೆಸಿಸಿ ಮೂಲಕ ಸಾಲ ಪಡೆದಿದ್ದಾರೆ. ಒಂದು ಲಕ್ಷದಿಂದ ಮೂರು ಲಕ್ಷ ರೂ. ವರೆಗೆ 15ರಿಂದ ಒಂದು ತಿಂಗಳ ಅವಧಿಯೊಳಗೆ ಸಾಲ ಮಂಜೂರಾಗಲಿದೆ. ಬರದಿಂದ ಬೆಳೆ ಬಾರದೇ ಇದ್ದರೆ ಕೆಸಿಸಿ ಸಾಲವನ್ನು ಮಧ್ಯಮಾವಧಿಗೆ ಪರಿಗಣಿಸಿ, ಹೊಸ ಸಾಲ ಕೊಡಲಾಗುತ್ತದೆ ಎಂದು ತಿಳಿಸಿದರು.

    13 ಗ್ರಾಮಗಳಲ್ಲಿ ಆರ್ಥಿಕ ಸಾಕ್ಷರತೆ: ಜಿಲ್ಲೆಯ 13 ಗ್ರಾಮಗಳಲ್ಲಿ ಆರ್ಥಿಕ ಸಾಕ್ಷರತೆ ಮೂಲಕ ಗ್ರಾಮಸ್ಥರನ್ನು ಬ್ಯಾಂಕಿಂಗ್ ವಹಿವಾಟಿಗೆ ಪ್ರೋತ್ಸಾಹಿಸಲಾಗುವುದು ಹಾಗೂ ಅನುದಾನ ಲಭ್ಯತೆ ಆಧರಿಸಿ ಆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಆರಂಭದಲ್ಲಿ 13 ಗ್ರಾಮಗಳಲ್ಲಿ ಕೈಗೊಂಡಿರುವ ಆರ್ಥಿಕ ಸಾಕ್ಷರತೆ ಹಾಗೂ ಅಭಿವೃದ್ಧಿ ಕೆಲಸಗಳನ್ನು ಹಂತ, ಹಂತವಾಗಿ ಜಿಲ್ಲೆಯ ಉಳಿದ ಗ್ರಾಮಗಳಿಗೂ ವಿಸ್ತರಿಸುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts