More

    ದುರ್ಬಲರ ರಕ್ಷಣೆಗೆ ಮುಂದಾದ ವೇದಾಂತ

    ಚಿತ್ರದುರ್ಗ: ಕರೊನಾ ಭೀತಿಯಿಂದ ದುರ್ಬಲ ಸಮುದಾಯಗಳ ಜೀವನೋಪಾಯ ರಕ್ಷಣೆಗಾಗಿ ನಮ್ಮ ಕಂಪನಿ 100 ಕೋಟಿ ರೂ. ಮೊತ್ತದ ನಿಧಿ ಸ್ಥಾಪಿಸಿದೆ ಎಂದು ಗಣಿಕಂಪನಿ ವೇದಾಂತ ರಿಸೋರ್ಸಸ್ ಲಿಮಿಟೆಡ್ ಕಾರ್ಯನಿರ್ವಾಹಕ ಅಧ್ಯಕ್ಷ ಅನಿಲ್ ಅಗರ್ವಾಲ್ ತಿಳಿಸಿದ್ದಾರೆ.

    ದಿನಗೂಲಿಗಳು, ಗುತ್ತಿಗೆ ಕಾರ್ಮಿಕರ ಜೀವನೋಪಾಯಕ್ಕಾಗಿ ಹಾಗೂ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳಿಗೆ, ಗಣಿಗಾರಿಕೆ ಸ್ಥಳ ಮತ್ತು ಸುತ್ತಲಿನ ಪ್ರದೇಶದಲ್ಲಿರುವ ಸಮುದಾಯಗಳಿಗೆ ಸಹಾಯ ನೀಡುವ ಸಲುವಾಗಿ ನಿಧಿ ಸ್ಥಾಪಿಸಿದ್ದು, ಕರೊನಾ ತಡೆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ನಮ್ಮ ಕಂಪನಿ ಕೈ ಜೋಡಿಸಿದೆ ಎಂದಿದ್ದಾರೆ.

    ವೈರಸ್ ಹರಡುವಿಕೆ ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಈವರೆಗಿನ ಕಾರ್ಯಗಳು ಸ್ವಾಗತಾರ್ಹ. ಕರೊನಾ ವಿರುದ್ಧ ಹೋರಾಟದಲ್ಲಿ ಕಾರ್ಪೋರೇಟ್ ಕಂಪನಿಗಳು ಸಹಾಯ ಹಸ್ತ ಚಾಚಬೇಕಿದ್ದು, ಅಗತ್ಯವೆನಿಸಿದರೆ ಪ್ರಸ್ತುತ ಘೋಷಿಸಿರುವ ನಿಧಿ ಮೊತ್ತವನ್ನು ಹೆಚ್ಚಿಸುವುದಾಗಿ ತಿಳಿಸಿದ್ದಾರೆ.

    ಇಂಥ ಕಠಿಣ ಸನ್ನಿವೇಶದಲ್ಲಿ ಕಂಪನಿ ತನ್ನ ಕಾರ್ಮಿಕರ ಸಂಬಳ ಕಡಿತಗೊಳಿಸುವುದಿಲ್ಲ. ತಾತ್ಕಾಲಿಕ ಕೆಲಸಗಾರರ ಸಹಿತ ಯಾವುದೇ ಸಿಬ್ಬಂದಿಯನ್ನು ವಜಾ ಮಾಡುವುದಿಲ್ಲ. ಕರೊನಾ ವಿರುದ್ಧ ಕಂಪನಿ ನೌಕರರು ಮತ್ತವರ ಕುಟುಂಬ ಸದಸ್ಯರಿಗೆ ವಿಮೆ ಸೌಲಭ್ಯ ಕೊಡಲಾಗುವುದು. ಗಣಿಗಾರಿಕೆ ಪ್ರದೇಶಗಳಲ್ಲಿ ಸಂಚಾರಿ ಆರೋಗ್ಯ ವ್ಯಾನ್‌ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts