More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸಲ್ಲ

    ಚಿತ್ರದುರ್ಗ: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಹಾಗೂ ರೈತ ಸಂಘದ ಕಾರ್ಯಕರ್ತರು ಡಿಸಿ ಕಚೇರಿ ಬಳಿ ಬುಧವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

    ಎಸ್‌ಯುಸಿಐ ಯುವ ಮುಖಂಡ ನಿಂಗರಾಜು ಮಾತನಾಡಿ, ಕಾಯ್ದೆ ತಿದ್ದುಪಡಿ ಜಾರಿಗೊಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರದ ಕ್ರಮವನ್ನು ಖಂಡಿಸಿದರು.

    ವ್ಯವಸಾಯಕ್ಕೆ ಆಸಕ್ತಿ ಇರುವವರು ಭೂಮಿ ಖರೀದಿಸಲು ಅನುಕೂಲವಾಗುವಂತೆ ತಿದ್ದುಪಡಿ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ, ಈಗಾಗಲೇ ರೈತರು ಯಾಕೆ ಕೃಷಿ ತ್ಯಜಿಸುತ್ತಿದ್ದಾರೆ, ಆತ್ಮಹತ್ಯೆಗೆ ಕಾರಣವೇನು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗದೆ, ಬಂಡವಾಳ ಶಾಹಿಗಳಿಗೆ ಮಣೆ ಹಾಕುತ್ತಿದೆ ಎಂದು ಆರೋಪಿಸಿದರು.

    ಎಸ್‌ಯುಸಿಐ ಸದಸ್ಯ ಎಚ್.ರವಿಕುಮಾರ್ ಮಾತನಾಡಿ, 1960ರ ದಶಕದ ಮೂಲ ಭೂ ಸುಧಾರಣಾ ಕಾಯ್ದೆಯಲ್ಲಿ ರೈತ, ಸಣ್ಣ ರೈತರ ಭೂ ರಕ್ಷಣೆಗಾಗಿ ಕಾನೂನಿನ ಬೆಂಬಲವಿತ್ತು. ಕುಟುಂಬಗಳು ವಿಘಟನೆಗೊಂಡು ಭೂಮಿ ಎಷ್ಟೇ ಸಣ್ಣ ಪ್ರಮಾಣದಲ್ಲಿ ವಿಘಟನೆಗೊಂಡರೂ ಸರ್ಕಾರ ಅಂಥವರ ನೆರವಿಗೆ ನಿಂತು ಸಣ್ಣ ಹಿಡುವಳಿಗಳಲ್ಲೇ ಕೃಷಿಗೆ ಪ್ರೋತ್ಸಾಹವನ್ನು ಕೊಡುತ್ತಿತ್ತು. ಆದರೆ, ಈಗ ಪರಿಸ್ಥಿತಿ ಕೃಷಿ ಮತ್ತು ಕೃಷಿಕರ ವಿರುದ್ಧವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಪ್ರಮುಖರಾದ ತ್ರಿವೇಣಿ, ಮೇಘನಾ, ಸೈಫುದ್ದೀನ್, ವಿನಯ್, ಕುಮುದಾ, ತಿಮ್ಮಣ್ಣ ಮತ್ತಿತರರು ಇದ್ದರು.

    ರೈತ ಸಂಘದ ಪ್ರತಿಭಟನೆ: ಭೂ ಸುಧಾರಣೆ, ಎಪಿಸಿಎಂಸಿ ಕಾಯ್ದೆಗಳ ತಿದ್ದುಪಡಿ ಹಾಗೂ ವಿದ್ಯುತ್ ವಿತರಣೆ ಖಾಸಗಿ ಕಾರಣ ವಿರೋಧಿಸಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್‌ಬಾಬು ಬಸ್ತಿಹಳ್ಳಿ, ತಾಲೂಕಾಧ್ಯಕ್ಷ ಧನಂಜಯ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಮುಖಂಡರಾದ ಕಲ್ಪನಾ, ಹೊರಕೇರಪ್ಪ, ಬೇಡರಹಳ್ಳಿ ಬಸವಂತಪ್ಪ, ಪುಟ್ಟಸ್ವಾಮಿ, ಪಿ.ಆರ್.ತಿಮ್ಮಣ್ಣ, ಕೊಟ್ರಬಸಪ್ಪ, ಕೆ.ಟಿ.ತಿಪ್ಪೇಸ್ವಾಮಿ, ಈಶ್ವರಯ್ಯಸ್ವಾಮಿ, ಕೃಷ್ಣಸ್ವಾಮಿ, ಗೋವಿಂದರಾಜ್, ರವಿಕುಮಾರ್, ಪ್ರವೀಣ್‌ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts