More

    ಶೋಷಿತರ ಅಕ್ಷರ ಅವ್ವ ಫುಲೆ

    ಭೀಮಸಮುದ್ರ: ಹೆಣ್ಣು ಮಕ್ಕಳಿಗಾಗಿ ದೇಶದಲ್ಲಿ ಮೊಟ್ಟಮೊದಲ ಶಾಲೆ ತೆರೆದು ಶೋಷಿತರ ಪ್ರಜ್ಞೆ ಜಾಗೃತಿಗೊಳಿಸಿದ ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ ಎಂದು ಶಿಕ್ಷಕಿ ಸುಲೋಚನಾ ತಿಳಿಸಿದರು.

    ಸಮೀಪದ ಕಡ್ಲೇಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ದೇಶದ ಸಾಮಾಜಿಕ, ಶೈಕ್ಷಣಿಕ ಚರಿತ್ರೆಯಲ್ಲಿ ಸಾವಿತ್ರಿಬಾಯಿ ಫುಲೆ ಹೆಸರು ಅಜರಾಮರ. ಕೆಳ ವರ್ಗದ ಜನರಲ್ಲಿ ಅಕ್ಷರ ಬೀಜ ಬಿತ್ತಿದ ಅವ್ವ ಎಂದು ಬಣ್ಣಿಸಿದರು.

    ಮುಖ್ಯಶಿಕ್ಷಕ ಮಹೇಶ್, ಫುಲೆ ಅವರ ಜೀವನಾದರ್ಶ ಎಲ್ಲರಿಗೂ ಪ್ರೇರಣದಾಯಕವಾದುದು ಎಂದರು.

    ಶಿಕ್ಷಕ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಚಿತ್ರಲಿಂಗಪ್ಪ, ಮಂಜುನಾಥ, ಸಿದ್ದಪ್ಪ, ನಟರಾಜ್, ಮಹಾಂತೇಶ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts