More

    ಪಾಸ್ ವಿತರಣೆಗೆ ಅಗತ್ಯವಿರುವ ಸೇವಾಸಿಂಧು ಸರ್ವರ್ ಡೌನ್?

    ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಅಂತರ ಜಿಲ್ಲೆ, ಹೊರ ರಾಜ್ಯಗಳಿಗೆ ಹೋಗಿ ಬರಬೇಕಿರುವ ನಾಗರಿಕರು, ವಲಸೆ ಕಾರ್ಮಿಕರು, ಸ್ವ ಸ್ಥಳಗಳಿಗೆ ತೆರಳಲು ಅಗತ್ಯವಾದ ಪಾಸ್ ಪಡೆಯಲು ಡಿಸಿ, ಎಸ್ಪಿ, ತಾಲೂಕು ಕಚೇರಿ, ಪೊಲೀಸ್ ಠಾಣೆಗೆ ಅಲೆದಾಡುತ್ತಿದ್ದಾರೆ.

    ಈ ನಡುವೆ ಹೊರ ರಾಜ್ಯಗಳಿಗೆ ತೆರಳಲು ಅರ್ಜಿ ಸಲ್ಲಿಸಲು‘ಸೇವಾಸಿಂಧು’ (ಛಿಜ್ಞಿಜ್ಠ. ಚ್ಟ್ಞಠಿ.ಜಟ.ಜ್ಞಿ) ಫೋರ್ಟಲ್ ಸರ್ವರ್ ಡೌನ್ ಆಗಿದೆ ಎಂದು ಡಿಸಿ ಕಚೇರಿ ಮೂಲಗಳು ತಿಳಿಸಿದ್ದರೆ, ಇನ್ನೊಂದು ಮೂಲದ ಪ್ರಕಾರ ಮಂಗಳವಾರದಿಂದ ಕೆಲ ದಿನಗಳ ಮಟ್ಟಿಗೆ ಸರ್ಕಾರವೇ ಫೋರ್ಟಲ್ ಸೇವೆ ಸ್ಥಗಿತಗೊಳಿಸಿದೆ ಎನ್ನಲಾಗಿದೆ.

    ಲಾಕ್‌ಡೌನ್ ಆರಂಭದಿಂದಲೂ ಇದ್ದ ಪಾಸ್ ಗೊಂದಲಗಳು ಈಗಲೂ ಮುಂದುವರಿದಿವೆ. ಪಾಸ್‌ಗೆ ನಾಗರಿಕರು ಪರದಾಡುತ್ತಿದ್ದರೂ ವಿತರಣೆ ಕುರಿತಂತೆ ಡಿಸಿ, ಎಸ್ಪಿ ಭಿನ್ನ ಹೇಳಿಕೆ ಕೊಡುತ್ತಿದ್ದಾರೆ.

    ಅಂತರ ಜಿಲ್ಲೆಗಳಿಗೆ ಹೋಗಿ ಬರಲು ಪಾಸ್ ಕೊಡಲಾಗುತ್ತದೆ. ಇದಕ್ಕಾಗಿ ಡಿಸಿ ಕಚೇರಿಗೆ ಬರಬೇಕಿಲ್ಲ. ಪ್ರಸ್ತುತ ತಾಲೂಕು, ಗ್ರಾಪಂ ಅಥವಾ ಹತ್ತಿರದ ಪೊಲೀಸ್ ಠಾಣೆಗಳಿಗೆ ಹೋಗಿ ಅರ್ಜಿ ಸಲ್ಲಿಸಿದರೆ ಪರಿಶೀಲಿಸಿ ಪಾಸ್ ಮಂಜೂರು ಮಾಡಲಾಗುತ್ತದೆ ಎಂದು ಡಿಸಿ ಹೇಳಿದ್ದಾರೆ.

    ಎಸ್ಪಿ ಭಿನ್ನ ಹೇಳಿಕೆ: ಜಿಲ್ಲಾಧಿಕಾರಿ ಪೊಲೀಸ್ ಠಾಣೆಗಳಿಗೂ ತೆರಳಿ ಅರ್ಜಿ ಸಲ್ಲಿಸಬಹುದು ಎಂದರೆ, ಠಾಣೆಗಳಲ್ಲಿ ಅರ್ಜಿ ಸ್ವೀಕರಿಸಿ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲು ಸೌಕರ್ಯದ ಕೊರತೆ ಇದೆ ಎಂದು ಎಸ್ಪಿ ಜಿ.ರಾಧಿಕಾ ಹೇಳಿದ್ದಾರೆ.

    ಪಂಚಾಯತ್ ರಾಜ್ ಅಧಿಕಾರಿಗಳು ತಾಲೂಕು ಕಚೇರಿ, ಡಿಸಿ ಕಚೇರಿ ಎಂದು ಕೈ ತೋರಿಸುತ್ತಾರೆ. ಈ ವ್ಯತಿರಿಕ್ತ ಹೇಳಿಕೆಗಳಿಂದ ಜನ ಹೈರಾಣಾಗಿದ್ದಾರೆ.

    ಮದುವೆ, ವೈದ್ಯಕೀಯ ತುರ್ತು, ಅಂತ್ಯಕ್ರಿಯೆ ಹೀಗೆ ನಾನಾ ಕಾರಣಗಳಿಗೆ ಅನ್ಯ ಜಿಲ್ಲೆಗಳಿಗೆ ತೆರಳುವಂಥವರು, ವಿದ್ಯಾರ್ಥಿಗಳು, ಪ್ರವಾಸಿಗರು, ಉದ್ಯೋಗ ನಿಮಿತ್ತ ಅನ್ಯ ಸ್ಥಳಗಳಿಗೆ ತೆರಳ ಬೇಕಾದವರು, ವಲಸೆ ಕಾರ್ಮಿಕರು ಸಹಿತ ಸಾವಿರಾರು ಜನರಿಗೆ ಪಾಸ್ ಬೇಗುದಿ ತಟ್ಟುತ್ತಿದೆ.

    31 ರಾಜಸ್ತಾನ ಮೂಲದವರು ಡಿಸಿ ಕಚೇರಿಗೆ ತೆರಳಿ ಊರಿಗೆ ಕಳಿಸುವಂತೆ ಕೇಳಿಕೊಂಡಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಅನ್ಯರಾಜ್ಯದ 135 ಕಾರ್ಮಿಕರನ್ನು ಕಳಿಸಿಕೊಟ್ಟಿದೆ. ಇನ್ನು 275 ಜನರು ಅನ್ಯ ರಾಜ್ಯಗಳಿಗೆ ತೆರಳ ಬೇಕಿದೆ. ಬೇರೆ ರಾಜ್ಯಗಳಿಂದ ದುರ್ಗಕ್ಕೆ ಬರಲು 108 ಅಧಿಕ ಜನರು ಕಾದಿದ್ದಾರೆ.

    ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಹೇಳಿಕೆ: ಚಿತ್ರದುರ್ಗದ ತಾಲೂಕು ಕಚೇರಿಗೆ ನಿತ್ಯ ನೂರಾರು ಜನ ಪಾಸ್‌ಗೆಂದೇ ಬರುತ್ತಿದ್ದು,ದಾಖಲೆ ಸಹಿತ ಅರ್ಜಿ ಸಲ್ಲಿದವರಿಗೆ, ಡಿಸಿ ಕಚೇರಿಯಿಂದ ಮಂಜೂರಾತಿ ಪಡೆದು ಪಾಸ್ ವಿತರಿಸಲಾಗುತ್ತಿದೆ.

    ನಗರ ಠಾಣೆ ಪಿಐ ನಯೀಂ ಅಹಮದ್ ಹೇಳಿಕೆ: ಅಂತರ ಜಿಲ್ಲಾ ಪ್ರಯಾಣಕ್ಕಾಗಿ ಪೊಲೀಸರು ಕೊಡುವ ಇ-ಪಾಸ್‌ಗಾಗಿ ನಾಗರಿಕರು ಆನ್‌ಲೈನ್ ಮೂಲಕ ಮೊಬೈಲ್‌ನಲ್ಲೇ ಟ್ಚ್ಝಛಿಚ್ಟ.ಜಿ.ಞಜಠಿಛಿ.್ಚಟಞ.ಗೆ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಪೊಲೀಸ್ ಠಾಣೆಗೆ ಬರುವ ಅಗತ್ಯವಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts