More

    ಬೈಕ್ ಸವಾರನಿಗೆ ಬಿತ್ತು 18,000 ರೂ.ದಂಡ !

    ಚಿತ್ರದುರ್ಗ: ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ಬೈಕ್ ಸವಾರನಿಗೆ ನ್ಯಾಯಾಲಯ ಬರೋಬ್ಬರಿ 18000 ರೂ.ದಂಡ ವಿಧಿಸಿದೆ.
    ನಗರದ ಭರತ್, ನ್ಯಾಯಾಲಯದ ಶಿಕ್ಷೆಗೆ ಗುರಿಯಾದ ಸವಾರ. ನಗರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟೊಂದು ಮೊತ್ತದ ದಂಡ ವಿಧಿಸಿದ ಪ್ರಕರಣ ಇದಾಗಿದೆ.

    ಏನಿದು ಪ್ರಕರಣ?: ನಗರದ ಭರತ್ ಎಂಬಾತ ಜು.29ರಂದು ಇಬ್ಬರು ಹಿಂಬದಿ ಪ್ರಯಾಣಿಕರೊಂದಿಗೆ ಗಾಂಧಿ ವೃತ್ತದ ಬಳಿ ತೆರಳುತ್ತಿದ್ದರು. ಈ ವೇಳೆ ಸಂಚಾರಿ ಪೊಲೀಸರು ತಡೆದು ದಾಖಲೆ ಪರಿಶೀಲಿಸಿದ್ದರು. ಸವಾರ ಮದ್ಯ ಸೇವಿಸಿದ್ದ. ಡ್ರೈವಿಂಗ್ ಲೈಸನ್ಸ್, ಹೆಲ್ಮೆಟ್ ಧರಿಸಿರಲಿಲ್ಲ. ಪರಿಶೀಲನೆ ವೇಳೆ ಪೊಲೀಸರೊಂದಿಗೆ ಅಸಭ್ಯ ವರ್ತನೆ ತೋರಿದ್ದನೆಂದು ಸಂಚಾರಿ ಠಾಣೆ ಪಿಎಸ್‌ಐ ರಘುನಾಥ್ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

    ಆ.3ರಂದು ಪ್ರಕರಣದ ವಿಚಾರಣೆ ನಡೆಸಿದ ಸಿಜೆಎಂ ಕೋರ್ಟಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಪರಾಜು ಅವರು ಭ ರತ್‌ಗೆ ಮದ್ಯ ಸೇವಿಸಿ ಬೈಕ್ ಓಡಿಸಿದ್ದಕ್ಕೆ 10 ಸಾವಿರ ರೂ., ವಾಹನ ಚಾಲನೆ ಪರವಾನಗಿ ಪತ್ರ ಇಲ್ಲದ್ದಕ್ಕೆ 5 ಸಾವಿರ ರೂ., ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ 2 ಸಾವಿರ ರೂ., ಹೆಲ್ಮೆಟ್ ಧರಿಸದೇ ಇರುವುದಕ್ಕೆ 500 ರೂ. ಹಾಗೂ ತ್ರಿಬಲ್ ರೈಡಿಂಗ್‌ಗೆ 500 ರೂ. ಹೀಗೆ ಒಟ್ಟು 18000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts