More

    ಯುಗಾದಿಗೆ ಎಪಿಎಂಸಿ ವಹಿವಾಟು ಚುರುಕು

    ಹುಬ್ಬಳ್ಳಿ: ಇಲ್ಲಿಯ ಎಪಿಎಂಸಿಯಲ್ಲಿ ಮೆಣಸಿನಕಾಯಿ ವಹಿವಾಟು ಶನಿವಾರ ಉತ್ತಮವಾಗಿ ನಡೆದಿದೆ.

    ಆದರೆ, ದರ ಕಡಿಮೆಯಾಗಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಕಳೆದೊಂದು ವಾರದಿಂದ ಮೆಣಸಿನಕಾಯಿ ದರದಲ್ಲಿ ಇಳಿಕೆ ಕಂಡು ಬಂದಿದೆ.
    ಹೊಸ ವರ್ಷ ಯುಗಾದಿ ನಂತರ ಒಂದಿಷ್ಟು ಉತ್ತಮ ವಹಿವಾಟಿನ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

    ಶನಿವಾರದ ಟೆಂಡರ್ನಲ್ಲಿ ಒಣ ಮೆಣಸಿನಕಾಯಿ ಕ್ವಿಂಟಾಲ್ಗೆ ಕನಿಷ್ಠ 2501 ರೂ. ನಿಗದಿಯಾಗಿತ್ತು. ಸರಾಸರಿ ಕ್ವಿಂಟಾಲ್ಗೆ 15 ಸಾವಿರದಿಂದ 20 ಸಾವಿರ ರೂ. ವರೆಗೆ ಮಾರಾಟವಾಗಿದೆ. ಶನಿವಾರ ಸುಮಾರು 28ಸಾವಿರ ಚೀಲ ಅಂದರೆ 10,007 ಕ್ವಿಂಟಾಲ್ ಮೆಣಸಿನಕಾಯಿ ಆವಕವಾಗಿತ್ತು.

    ಹುಬ್ಬಳ್ಳಿ, ಗದಗ, ಬ್ಯಾಡಗಿ ಎಪಿಎಂಸಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮೆಣಸಿನಕಾಯಿ ವಹಿವಾಟು ನಡೆಯುತ್ತದೆ. ಹುಬ್ಬಳ್ಳಿಗೆ ಸದ್ಯ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಹೊಸ ವರ್ಷ ಯುಗಾದಿ ಎಲ್ಲೆಡೆ ಹೊಸತನ ತರುವಂತೆ ಎಪಿಎಂಸಿ ವಹಿವಾಟು ಕೂಡ ಹೆಚ್ಚಳವಾಗುವ ನಿರೀಕ್ಷೆ ಮೂಡಿದೆ.

    ಏ. 8, ಸೋಮವಾರ ಅಮಾವಾಸ್ಯೆ, ಮರುದಿನ ಪಾಢ್ಯ ಇರುವುದರಿಂದ ಹೆಚ್ಚಿನ ರೈತರು ಎಪಿಎಂಸಿಗೆ ಬರುವುದಿಲ್ಲ. ಅಲ್ಲದೇ ಏ. 9ರಂದು ಯುಗಾದಿ ನಿಮಿತ್ತ ರಜೆ ಇದೆ. ಹಾಗಾಗಿ ಬುಧವಾರದ (ಏ. 10) ಟೆಂಡರ್ಗೆ ಹೆಚ್ಚು ಆವಕವಾಗುವ ಸಾಧ್ಯತೆ ಇದೆ ಎಂದು ವರ್ತಕರು ತಿಳಿಸಿದ್ದಾರೆ.

    ಹುಬ್ಬಳ್ಳಿ, ಗದಗ, ಬ್ಯಾಡಗಿ ಸೇರಿ ಅಕ್ಕಪಕ್ಕದ ಜಿಲ್ಲೆಯ ಎಪಿಎಂಸಿಗಳಲ್ಲಿ ಯುಗಾದಿ ಪಾಢ್ಯ ನಂತರ ವಹಿವಾಟು ಚುರುಕುಗೊಳ್ಳುವ ಸಾಧ್ಯತೆ ಹೆಚ್ಚಿದೆ.

    ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಏ. 8ರಂದು ಟೆಂಡರ್ ನಡೆಯಲಿದೆ. ಏ. 11ರಂದು ಗುರುವಾರ ಸಾರ್ವತ್ರಿಕ ರಜೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts