More

    ಮಕ್ಕಳೇ ಅವಕಾಶ ಸದ್ಬಳಕೆ ಮಾಡಿಕೊಳ್ಳಿ

    ಮಾಂಜರಿ: ಯಾಂತ್ರಿಕ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು, ಕಾಪಾಡುವ ಮಹತ್ತರ ಕಾರ್ಯ ಗ್ರಾಮೀಣ ವಿದ್ಯಾರ್ಥಿಗಳಿಂದ ಆಗುತ್ತಿದೆ ಎಂದು ಹಿರಿಯ ಸಾಹಿತಿ ಡಾ.ಪಿ.ಜಿ.ಕೆಂಪನ್ನವರ ಹೇಳಿದರು.

    ಸಮೀಪದ ಅಂಕಲಿಯ ಗೋಮಟೇಶ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎನ್.ಎ.ಮಗದುಮ್ಮ ಪಬ್ಲಿಕ್ ಶಾಲೆ ವಾರ್ಷಿಕೋತ್ಸವ ಮತ್ತು ಗೋಮಟ್ಟೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡು ಗುರುಗಳ ಮಾರ್ಗದರ್ಶನದಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

    ಸಂಸ್ಥಾಪಕ ಅಧ್ಯಕ್ಷ ಡಾ.ಎನ್.ಎ.ಮಗದುಮ್ಮ ಮಾತನಾಡಿ, ಹಳ್ಳಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಮುಂಬರುವ ವರ್ಷದಿಂದಲೇ ಪಿಯು ಕಾಲೇಜು ಆರಂಭಿಸಲಾಗುತ್ತದೆ. ಸಿಬಿಎಸ್‌ಇ ವಿದ್ಯಾರ್ಥಿಗಳಿಗೆ ಪ್ರೌಢಶಾಲೆ ಹಂತದಲ್ಲಿಯೇ ನೀಟ್, ಸಿಇಟಿ, ಜೆಇಇ ಮತ್ತು ಐಐಟಿ ತರಬೇತಿಗಾಗಿ ನೀಟ್ ತರಬೇತಿ ಆರಂಭಿಸಲಾಗುತ್ತಿದೆ ಎಂದರು.

    ಸಂಸ್ಥೆಯ ಕಾರ್ಯದರ್ಶಿ ಸುರೇಶ ಚೌಗುಲೆ ಮಾತನಾಡಿದರು. ಕೋಶಾಧ್ಯಕ್ಷೆ ಲಲಿತಾ ಮಗದುಮ್ಮ ಮಾತನಾಡಿದರು. ವೈಶಾಲಿ ಚೌಗುಲೆ, ಪ್ರಾಚಾರ್ಯ ಎನ್.ಎಸ್.ನಿಡಗುಂದೆ, ಪೃಥ್ವಿರಾಜ ಬೆನ್ನೂರಕರ, ಕ್ರಾಂತಿ ರೋಡೆ, ಪ್ರವೀಣ ಪಾಟೀಲ, ಸತೀಶ ಜಾಧವ, ಮಹಾವೀರ ಪಾಟೀಲ, ಸುನೀಲ ಜನಾಜ, ಯಾಕೂಬ್ ತಾಂಬಟ, ಎಸ್.ಎಸ್.ಮೋನೆ, ವೈಶಾಲಿ ಇಂಗಳೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts