ಕಡೂರು ಮೆಸ್ಕಾಂ ಜೆಇ ವರ್ಗಾವಣೆ ರದ್ದುಗೊಳಿಸಿ

1 Min Read
ಕಡೂರು ಮೆಸ್ಕಾಂ ಜೆಇ ವರ್ಗಾವಣೆ ರದ್ದುಗೊಳಿಸಿ

ಚಿಕ್ಕಮಗಳೂರು: ಕಡೂರು ಮೆಸ್ಕಾಂ ಜೂನಿಯರ್ ಇಂಜಿನಿಯರ್ ಲಕ್ಷ್ಮೀದೇವಿ ವರ್ಗಾವಣೆ ರದ್ದುಗೊಳಿಸುವಂತೆ ಆಗ್ರಹಿಸಿ ಡಿಎಸ್​ಎಸ್ (ಅಂಬೇಡ್ಕರ್ ವಾದ) ಜಿಲ್ಲಾ ಘಟಕದ ಪದಾಧಿಕಾರಿಗಳು ಅಧೀಕ್ಷಕ ಇಂಜಿನಿಯರ್ ಎಂ.ಎಸ್.ಮಂಜುನಾಥ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಲಕ್ಷ್ಮೀದೇವಿ ಅವರನ್ನು ಉದ್ದೇಶಪೂರ್ವಕವಾಗಿ ವರ್ಗಾವಣೆ ಮಾಡಲಾಗಿದೆ. ಸಲ್ಲದ ಕಾರಣಕ್ಕೆ ಅವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ವರ್ಗಾವಣೆ ಸ್ಥಳಕ್ಕೆ ತೆರಳದಿದ್ದಲ್ಲಿ ಕಿರುಕುಳ ನೀಡುವ ಬೆದರಿಕೆ ಹಾಕಲಾಗುತ್ತಿದೆ. ವರ್ಗಾವಣೆ ರದ್ದುಗೊಳಿಸದಿದ್ದರೆ ಮೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಅಧಿಕ್ಷಕ ಇಂಜಿನಿಯರ್ ಮಂಜುನಾಥ್ ಮಾತನಾಡಿ, ಕಡೂರು ಮೆಸ್ಕಾಂ ವೃತ್ತದಲ್ಲಿ ಕಾರ್ಯ ಒತ್ತಡ ಹೆಚ್ಚಿರುವುದರಿಂದ ಕಾರ್ಯಕ್ಷಮತೆ ಇರುವ ಅಧಿಕಾರಿಯನ್ನು ನಿಯುಕ್ತಿಗೊಳಿಸಲಾಗಿದೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಡಿಎಸ್​ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ತಾಲೂಕು ಸಂಚಾಲಕ ರಮೇಶ್, ಮುಖಂಡರಾದ ಮಂಜುನಾಥ್, ವೀರೇಶ್ ಇದ್ದರು.

See also  ನ.9 ರಂದು ಕಡಬಗೆರೆಯಲ್ಲಿ ಪರಿಸರ ಸೂಕ್ಷ್ಮ ವಲಯ ವಿರೋಧಿಸಿ ಪ್ರತಿಭಟನೆ
Share This Article