More

    1800 ರೂ.ಗೆ ಕೋಳಿ ಸೇಲ್!

    ಹೆಗ್ಗೋಡು: ಸಾಗರ ತಾಲೂಕಿನ ಹೊನ್ನೇಸರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹೆಗ್ಗೋಡು ಕ್ಲಸ್ಟರ್ ವ್ಯಾಪ್ತಿಯ ಮಕ್ಕಳ ಸಂತೆ ಹಮ್ಮಿಕೊಳ್ಳಲಾಗಿತ್ತು. ಸಂತೆಯಲ್ಲಿ ವಿದ್ಯಾರ್ಥಿಗಳು ತರಹೇವಾರಿ ವಸ್ತುಗಳನ್ನು ಮಾರಾಟ ಮಾಡಿ ಗಮನಸೆಳೆದರು. ಈ ಸಂತೆಯಲ್ಲಿ ಹಳ್ಳಿಯ ವಿವಿಧ ರೀತಿಯ ತರಕಾರಿಗಳು, ಸೊಪ್ಪು, ಗೆಡ್ಡೆ ಗೆಣಸುಗಳು ರಾರಾಜಿಸುತ್ತಿದ್ದವು. ವಿಶೇಷವಾಗಿ ಮುಳ್ಳು ಹಣ್ಣು, ಪರಗಿ ಹಣ್ಣು, ಅಂಕೋಲೆ ಹಣ್ಣು ಹಲಗೆ ಹಣ್ಣು, ಚೀನಿಕಾಯಿ, ಕುಂಬಳಕಾಯಿ ಗ್ರಾಹಕರ ಸೆಳೆಯುತ್ತಿದ್ದವು. ಅದರಲ್ಲೂ ವಿಶೇಷವಾಗಿ ಸೊಪ್ಪಿನಮಲ್ಲೆ ಶಾಲೆಯ ವಿದ್ಯಾರ್ಥಿಗಳಿಂದ ನಾಟಿ ಕೋಳಿಯ ವ್ಯಾಪಾರ ವಿಶೇಷವಾಗಿತ್ತು. ಒಂದು ಕೋಳಿಯ ಬೆಲೆ ಒಂದು ಸಾವಿರದಿಂದ 1,800 ವರೆಗೂ ಹೋಗಿತ್ತು. ಜನರು ಮುಗಿಬಿದ್ದು ಖರೀಸಿದರು. ಅದೇ ರೀತಿ ನಾಟಿ ಕೋಳಿ ಮೊಟ್ಟೆಗಳನ್ನು ಸಹ ಮಾರಾಟ ಮಾಡಲಾಯಿತು. ಹೊನ್ನೆಸರ, ಚೆನ್ನಿಗನತೋಟ, ಹೈತೂರು, ಬಿಲಗೋಡಿ, ಹೆಬ್ಬರಿಗೆ, ಗಡಿಕಟ್ಟೆ, ಹೆನಗೆರೆ, ಶೆಡ್ತಿಕೆರೆ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts