More

    ದೀಪಿಕಾ ನಟನೆಯ ಚಪಾಕ್​ಗೆ ಎದುರಾಯ್ತು ಸಂಕಷ್ಟ: ಜ.15ರಿಂದ ಪ್ರದರ್ಶನಕ್ಕೆ ತಡೆನೀಡಿ ದೆಹಲಿ ಹೈಕೋರ್ಟ್​ ಆದೇಶ

    ನವದೆಹಲಿ: ನಟಿ ದೀಪಿಕಾ ಪಡುಕೋಣೆ ಅವರ “ಚಪಾಕ್​” ಚಿತ್ರ ಶುಕ್ರವಾರ ಬಿಡುಗಡೆಯಾಗಿ ಎರಡನೇ ದಿನ ಮುನ್ನುಗ್ಗುತ್ತಿದೆ. ಈಗ ಅದಕ್ಕೆ ಕಾನೂನು ಸಂಕಷ್ಟ ಎದುರಾಗಿದ್ದು, ಜನವರಿ 15ರಿಂದ ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ದೆಹಲಿ ಹೈಕೋರ್ಟ್​ ಶನಿವಾರ ಆದೇಶಿಸಿದೆ.

    ಚಪಾಕ್​ ಚಿತ್ರವು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಆಸಿಡ್​ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್​ವಾಲ್​ ಜೀವನ ಭಾಗವಾಗಿ ಚಿತ್ರ ಮೂಡಿಬಂದಿದ್ದು, ಲಕ್ಷ್ಮೀ ಅಗರ್​ವಾಲ್​ ಪಾತ್ರಕ್ಕೆ ದೀಪಿಕಾ ಬಣ್ಣ ಹಚ್ಚಿದ್ದಾರೆ. ಆದರೆ, ಆಸಿಡ್​ ದಾಳಿ ವಿರುದ್ಧ ಹೋರಾಡಲು ಲಕ್ಷ್ಮೀ ಅಗರ್​ವಾಲ್​ ಪರ ವಕಾಲತ್ತು ವಹಿಸಿದ ವಕೀಲೆ ಅಪರ್ಣಾ ಭಟ್​ಗೆ ಚಿತ್ರದಲ್ಲಿ ಯಾವುದೇ ಕ್ರೆಡಿಟ್​ ನೀಡದಿರುವುದು ಇದೀಗ ಚಿತ್ರತಂಡವನ್ನು ಸಂಕಷ್ಟಕ್ಕೆ ದೂಡಿದೆ.

    ಕ್ರೆಡಿಟ್​ ನೀಡುವಂತೆ ಕೋರಿ ವಕೀಲೆ ಅಪರ್ಣಾ ಭಟ್ ಟ್ರಯಲ್​ ಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಟ್ರಯಲ್​ ಕೋರ್ಟ್​​ ಕ್ರೆಡಿಟ್​ ನೀಡುವಂತೆ ಗುರುವಾರ ಆದೇಶ ನೀಡಿತ್ತು.​ ಆದರೆ, ಟ್ರಯಲ್​ ಕೋರ್ಟ್​ ಆದೇಶ ಪ್ರಶ್ನಿಸಿ ಫಾಕ್ಸ್​ ಸ್ಟಾರ್​ ಸ್ಟುಡಿಯೋ ಹಾಗೂ ನಿರ್ದೇಶಕಿ ಮೇಘನಾ ಗುಲ್ಜಾರ್​ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್​, ಜನವರಿ 15ರಿಂದ ಎಲ್ಲ ಮಲ್ಟಿಫ್ಲೆಕ್ಸ್​ ಹಾಗೂ ಲೈವ್​ ಸ್ಟ್ರೀಮಿಂಗ್​ ಆ್ಯಪ್​ಗಳಲ್ಲಿ ಹಾಗೂ ಜನವರಿ 17ರಿಂದ ಇತರೆ ವೇದಿಕೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ನಿರ್ದೇಶನ ನೀಡಿದೆ.

    ಹೈಕೋರ್ಟ್​ನಲ್ಲಿ ಶುಕ್ರವಾರ ನಡೆದ ವಿಚಾರಣೆ ವೇಳೆ, ಸಮಾಲೋಚನೆ ಹಾಗೂ ದಾಖಲೆ ರೂಪದಲ್ಲಿ ಭಟ್​ ಅವರ ಕಾಣಿಕೆಯನ್ನು ಚಿತ್ರದಲ್ಲಿ ನಮೂದಿಸುವಂತೆ ಕೋರಲು ಅವರಿಗೆ ಯಾವುದೇ ಶಾಸನಬದ್ಧ ಹಕ್ಕು ಇಲ್ಲ ಎಂದು ಫಾಕ್ಸ್​ ಸ್ಟಾರ್​ ಸ್ಟುಡಿಯೋ ಪರ ವಕೀಲ ರಾಜೀವ್​ ನಾಯರ್​ ವಾದಿಸಿದ್ದರು. ಆದರೆ ಹೈಕೋರ್ಟ್​ ವಾದವನ್ನು ತಿರಸ್ಕರಿಸಿ ಅಪರ್ಣಾ ಭಟ್​ ಪರ ಆದೇಶ ಹೊರಡಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts