More

    ಕರನಾ ಸೋಂಕು ಪತ್ತೆ ಕಾರ್ಯ

    ಚಳ್ಳಕೆರೆ: ಕರೊನಾ ಸೋಂಕು ಪತ್ತೆಯಾಗಿದ್ದ ತಾಲೂಕಿನ ಕೋಡಿಹಳ್ಳಿ ಮತ್ತು ಚಿಕ್ಕಹಳ್ಳಿ ಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಮತ್ತು ಅಗತ್ಯ ವಸ್ತುಗಳ ವಿತರಣಾ ಕಾರ್ಯ ಸೋಮವಾರವೂ ಮುಂದುವರಿದಿದೆ.

    ಸೋಂಕಿತರ ಸಂಪರ್ಕದಲ್ಲಿದ್ದರು ಎನ್ನಲಾದ ಕೋಡಿಹಳ್ಳಿ ಗ್ರಾಮದ ಎರಡು ಏರಿಯಾದ ಎಲ್ಲ ಕುಟುಂಬ ಸದಸ್ಯರನ್ನೆಲ್ಲ ಖುದ್ದು ವೈದ್ಯರೇ ಆರೋಗ್ಯ ತಪಾಸಣೆ ಮಾಡಿದ್ದಾರೆ. ಇನ್ನುಳಿದ ಮನೆಗಳಿಗೆ ಭೇಟಿ ನೀಡಿದ ದಾದಿಯರು, ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕ್ರೀನಿಂಗ್ ನಡೆಸಿದರು.

    ಸಚಿವರ ಸಹಾಯ ಹಸ್ತ: ಕರೊನಾ ಸೋಂಕು ಪತ್ತೆಯಿಂದ ಸೀಲ್‌ಡೌನ್ ಆಗಿದ್ದ ಕೋಡಿಹಳ್ಳಿ ಮತ್ತು ಚಿಕ್ಕಹಳ್ಳಿ ಗ್ರಾಮಗಳ 700 ಕುಟುಂಬಗಳಿಗೆ ಸಚಿವ ಬಿ.ಶ್ರೀರಾಮುಲು ಅವರು ಕಳುಹಿಸಿಕೊಡಲಾಗಿದ್ದ ತರಕಾರಿ ಪ್ಯಾಕೆಟ್‌ಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಸೋಮವಾರ ಪ್ರತಿ ಕುಟುಂಬಕ್ಕೂ ವಿತರಿಸಲಾಯಿತು.

    ನೀರು ಕೊಡಲು ನಿರಾಕರಣೆ: ಇನ್ನು ಸಮಸ್ಯೆಯಾಗಿದ್ದ ಗ್ಯಾಸ್ ವಿತರಣೆ ಕಾರ್ಯವನ್ನೂ ತಾಲೂಕು ಆಡಳಿತ ಸುಗಮಗೊಳಿಸಿದೆ. ಟ್ಯಾಂಕರ್ ಮೂಲಕ ಕುಡಿವ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಲಾಗಿದೆ. ತಳಕು ಗ್ರಾಮಸ್ಥರು ವೈರಸ್ ಸೋಂಕಿತ ಗ್ರಾಮಕ್ಕೆ ನೀರು ಕೊಡುವುದಿಲ್ಲ ಎಂದು ನಿರಾಕರಣೆ ಮಾಡಿದ್ದಾರೆ ಎನ್ನಲಾಗಿದೆ.

    ಗ್ರಾಮಸ್ಥರ ಅಳಲು: ಸೀಲ್‌ಡೌನ್‌ನಿಂದ ಕೂಲಿಕೆಲಸ ಇಲ್ಲದೆ ಜೀವನ ನಿರ್ವಹಣೆ ಕಷ್ಟವಾಗಿದೆ. ಬರಿ ತರಕಾರಿ, ಒಂದಷ್ಟು ಆಹಾರ ಪದಾರ್ಥದಿಂದ ಹೊಟ್ಟೆ ತುಂಬುವುದಿಲ್ಲ. ತಿಂಗಳಾನುಗಟ್ಟಲೆ ಆಗುವಷ್ಟು ಆಹಾರ ಪದಾರ್ಥಗಳ ಪ್ಯಾಕೇಜ್ ಮಾಡಿ ಎರಡೂ ಗ್ರಾಮಗಳಿಗೆ ಉಚಿತವಾಗಿ ನೀಡಬೇಕು ಎಂದು ಅಧಿಕಾರಿಗಳ ಬಳಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

    ಆಹಾರ ಪದಾರ್ಥ ವಿತರಣೆಗೆ ಸರ್ಕಾರದ ವ್ಯವಸ್ಥೆಯಲ್ಲಿ ಅನುದಾನ ಇಲ್ಲ. ಯಾರಾದರೂ ದಾನಿಗಳು ಮುಂದಾದರೆ ವಿತರಣೆ ವ್ಯವಸ್ಥೆ ಮಾಡಲಾಗುವುದು ಎಂದು ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ತಾಪಂ ಇಒ ಶ್ರೀಧರ್ ಬಾರಿಕರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts