More

    ಚೆಕ್‌ಪೋಸ್ಟ್‌ಗೆ ನಿಯೋಜಿಸದಂತೆ ಆಗ್ರಹ

    ಖಾನಾಪುರ: ಕೋವಿಡ್-19 ಕರ್ತವ್ಯಕ್ಕಾಗಿ ಕರ್ನಾಟಕ-ಗೋವಾ ಗಡಿಯ ಕಣಕುಂಬಿ ಮತ್ತು ಚೋರ್ಲಾ ಗ್ರಾಮಗಳಲ್ಲಿರುವ ಚೆಕ್‌ಪೋಸ್ಟ್ ಕರ್ತವ್ಯಕ್ಕೆ ತಮ್ಮನ್ನು ನಿಯೋಜಿಸದಂತೆ ತಾಲೂಕಿನ ಎಲ್ಲ ಗ್ರಾಪಂಗಳ ಗಣಕಯಂತ್ರ ನಿರ್ವಾಹಕರು ಶನಿವಾರ ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

    ಉಭಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ 51 ಗ್ರಾಪಂಗಳ ಗಣಕಯಂತ್ರ ನಿರ್ವಾಹಕರು, ನರೇಗಾ ಯೋಜನೆಗಳ ಕಡತ ನಿರ್ವಹಣೆ, 15ನೇ ಹಣಕಾಸು ಯೋಜನೆ, ಸ್ವಚ್ಛ ಭಾರತ ಮಿಷನ್, ಪಂಚತಂತ್ರ, ಇ-ಸ್ವತ್ತು ಮತ್ತಿತರ ಗ್ರಾಮ ಪಂಚಾಯಿತಿಯ ದೈನಂದಿನ ಕೆಲಸಗಳನ್ನು ಆನ್‌ಲೈನ್ ಮೂಲಕ ನಿಗದಿತ ಅವಧಿಯಲ್ಲಿ ಮುಗಿಸುವ ಜವಾಬ್ದಾರಿ ತಮ್ಮ ಮೇಲಿರುವ ಕಾರಣ ಗ್ರಾಪಂ ಕರ್ತವ್ಯದೊಂದಿಗೆ ಚೆಕ್‌ಪೋಸ್ಟ್ ಕೆಲಸ ನಿರ್ವಹಿಸಲು ತೊಂದರೆಯಾಗುತ್ತಿದೆ. ಹೀಗಾಗಿ ಕರ್ತವ್ಯದಿಂದ ವಿಮುಕ್ತಿಗೊಳಿಸಲು ಕೋರಿದ್ದಾರೆ. ಗಣಕಯಂತ್ರ ನಿರ್ವಾಹಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿಠ್ಠಲ ಕೊನಸಕುಂಪಿ, ಪದಾಧಿಕಾರಿಗಳಾದ ನೀಲೇಶ ಮಾದಾರ, ಬಾಬುರಾವ್ ಗಾಂವಕರ, ಮಿಥುನ ಸಾಬಳೆ, ಪ್ರಶಾಂತ ಕುಲಕರ್ಣಿ, ಪಿಡಿಒಗಳಾದ ಪ್ರಭಾಕರ ಭಟ್, ಸಂತೋಷ ಚೌಗುಲೆ, ವೀಣಾ ಪಿ.ಎನ್ ಗೌಡ, ಸಂಜೀವ ಉಪ್ಪಿನ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts