More

    ಹೈನುಗಾರಿಕೆಯಿಂದ ರೈತರ ಬದುಕು ಹಸನು

    ಚನ್ನಗಿರಿ: ಹೈನುಗಾರಿಕೆಯಿಂದ ರೈತರ ಬದುಕು ಹಸನಾಗುತ್ತದೆ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಹೇಳಿದರು.

    ತಾಲೂಕು ಯರಗಟ್ಟಿಹಳ್ಳಿಯಲ್ಲಿ ಭಾನುವಾರ ರಾಷ್ಟ್ರೀಯ ಸುಸ್ಥಿರ ಕೃಷಿ ಮಳೆಯಾಶ್ರಿತ ಪ್ರದೇಶಗಳ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಹಮ್ಮಿಕೊಂಡಿದ್ದ ಸಹಾಯಧನದ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಭಾರತ ಕೃಷಿ ಪ್ರಧಾನ ದೇಶ. ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗಿದೆ. ಇವರು ಇತ್ತೀಚಿನ ದಿನಗಳಲ್ಲಿ ನಗರ, ಪಟ್ಟಣದತ್ತ ಹೆಚ್ಚು ಗಮನ ಹರಿಸಿದ ಕಾರಣ ಗ್ರಾಮಗಳಲ್ಲಿ ಜಾನುವಾರು ಸಾಕಾಣಿಕೆ ಕಡಿಮೆಯಾಗುತ್ತಿದೆ. ಮೊದಲು ಒಂದು ಮನೆಯಲ್ಲಿ ಐದರಿಂದ ಹತ್ತು ಹಸು, ಎಮ್ಮೆಗಳಿರುತ್ತಿದ್ದವು. ಇವುಗಳ ಹಾಲಿನಿಂದ ಕುಟುಂಬ ನಿರ್ವಹಣೆಯಷ್ಟೇ ಅಲ್ಲ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರ ಲಭ್ಯವಾಗುತ್ತಿತ್ತು ಎಂದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಹಕಾರಿಯಾಗಿ ಕೆಲಸ ಮಾಡುತ್ತಿವೆ. ಬಡತನ ರೇಖೆಗಿಂತ ಕೆಳಗಿನವರನ್ನು ಗುರುತಿಸಿ ಸರ್ಕಾರದಿಂದ ಒಬ್ಬರಿಗೆ 45 ಸಾವಿರ ರೂ. ಸಹಾಯಧನದಡಿ ಹಸು, 25 ಸಾವಿರ ಸಹಾಯಧನದಡಿ ಕುರಿಗಳನ್ನು ನೀಡುತ್ತಿದೆ ಎಂದರು.

    ರೈತರ ಸಾಲಮನ್ನಾ ಮಾಡುವುದನ್ನು ಸರ್ಕಾರ ದುರುಪಯೋಗಪಡಿಸಿಕೊಳ್ಳಬಾರದು. ಯರಗಟ್ಟಿಹಳ್ಳಿ ಗ್ರಾಮ ಏತ ನೀರಾವರಿ ಯೋಜನೆಯಲ್ಲಿ ಬಿಟ್ಟು ಹೋಗಿದೆ. ಮುಂದಿನ ದಿನದಲ್ಲಿ ಸೇರಿಸುವ ಮೂಲಕ ಕೆರೆಗೆ ನೀರು ಬರುವಂತೆ ಮಾಡುತ್ತೇನೆ. ತಾಲೂಕಿನ ದೇವರಹಳ್ಳಿಯಲ್ಲಿ ಕೃಷಿ ಉತ್ಪನ್ನ ಸಂಗ್ರಹಕ್ಕಾಗಿ 7.5 ಕೋಟಿ ರೂ. ಅನುದಾನದಲ್ಲಿ ಶಿಥಿಲೀಕರಣ ಘಟಕ ನಿರ್ಮಿಸಲಾಗುವುದೆಂದು ತಿಳಿಸಿದರು.

    ಕೃಷಿ ಇಲಾಖೆಯಿಂದ ಗ್ರಾಮದ 50 ಫಲಾನುಭವಿಗಳಿಗೆ ಹೈನುಗಾರಿಕೆಗಾಗಿ 40 ಸಾವಿರ ಹಾಗೂ 15 ಫಲಾನುಭವಿಗಳಿಗೆ ಕುರಿ ಸಾಗಾಣಿಕೆಗಾಗಿ 25 ಸಾವಿರ ರೂ. ಸಹಾಯಧನ ನೀಡಲಾಯಿತು.

    ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಶಿವಕುಮಾರ ಮಲ್ಲಾಡದ, ಕೃಷಿ ಅಧಿಕಾರಿ ಕುಮಾರ್, ಗ್ರಾಮದ ಮುಖಂಡರಾದ ಶಿವಕುಮಾರ್, ಅಶೋಕ್, ನಿ. ಶಿಕ್ಷಕ ಮಹೇಶ್ವರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts