More

    ‘ಚಂದ್ರ’ನಿಗೆ ಒಲಿದ ಅದೃಷ್ಟ’ ಆ.31, 2021ರಿಂದ ಪೂರ್ವಾನ್ವಯವಾಗುವಂತೆ ರಾಜೀನಾಮೆ ಅಂಗೀಕಾರ.

    ಶಿವಾನಂದ ಹಿರೇಮಠ ಗದಗ
    ಲೋಕಾ ಪ್ರಕರಣದ ಹಿನ್ನೆಲೆ ಬಿಫಾರ್ಮ ಕೈತಪ್ಪುವ ಭೀತಿ ಎದುರಾಗಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಘೋಷಿತ ಅಭ್ಯರ್ಥಿ ಚಂದ್ರು ಲಮಾಣಿಗೆ ಕೊನೆಗಳಿಗೆಯಲ್ಲಿ ಅದೃಷ್ಟ ಖುಲಾಯಿಸಿದೆ. ನಾಡದೊರೆ ಕೃಪಾಕಟಾಕ್ಷದಿಂದ ಕಾನೂನು ಸಮರ ಸಾಧಿಸಿ ಆರೋಗ್ಯ ಇಲಾಖೆಯಿಂದ ರಾಜೀನಾಮೆ ಅಂಗೀಕಾರ ಪತ್ರ ಪಡೆಯುವಲ್ಲಿ ಸಲರಾಗಿದ್ದಾರೆ. ಆ.31, 2021ರಿಂದ ಪೂರ್ವಾನ್ವಯವಾಗುವಂತೆ ರಾಜೀನಾಮೆ ಅಂಗೀಕಾರಗೊಂಡಿದ್ದು, ಏ.20(ಅಮವಾಸ್ಯೆ) ರಂದು ನಾಮಪತ್ರ ಸಲ್ಲಿಸಲಿದ್ದಾರೆ.
    ಬಿಜೆಪಿ ಮೊದಲ ಪಟ್ಟಿಯಲ್ಲೇ ಹೆಸರು ಘೋಷಣೆಯಾಗಿದ್ದರೂ ಲೋಕಾ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿ, ಬೆಳದಿಂಗಳಿನಂತಿದ್ದ “ಚಂದ್ರ’ನ ಮೊಗದಲ್ಲಿ ಕತ್ತಲೆ ಆವರಿಸಿತ್ತು. “ರಾಜೀನಾಮೆ ಅಂಗೀಕಾರ’ ಆಗದ ಹಿನ್ನೆಲೆ ವಿರೋಧಿ ಬಣದ ಅಸ್ತ್ರಕ್ಕೆ ಮೆತ್ತಗಾಗಿದ್ದರು. ಪಕ್ಷ ಘೋಷಿಸಿದ್ದ ಅಭ್ಯಥಿರ್ಗೆ ಬಿಫಾರ್ಮ ನೀಡಲು ರಾಜ್ಯ ಮುಖಂಡರಿಗೂ ಸವಾಲಿನ ಪ್ರಶ್ನೆ ಎದುರಾಗಿತ್ತು. ಅಭ್ಯರ್ಥಿ ಮತ್ತು ಪಕ್ಷಕ್ಕೂ ಪ್ರತಿಷ್ಠೆಯ ಪ್ರಶ್ನೆ ಎದುರಾಗಿತ್ತು. ಕೊನೆಗಳಿಗೆ ವರೆಗೂ ಬಿಫಾರ್ಮ ಪಡೆಯುವ ಯತ್ನಕ್ಕೆ ಕಾನೂನು ತೊಡುಕು ಒಡ್ಡಿದ್ದ ವಿರೋಧಿ ಬಣದ ವಿರುದ್ಧ ಹೋರಾಟ ನಡೆಸಿ, ಹಲವು ಮಜಲುಗಳ ನಡುವೆ, ಹಲವರ ಬೆಂಬಲದೊಂದಿಗೆ ರಾಜೀನಾಮೆ ಅಂಗೀಕಾರ ಗೊಳಿಸುವ ಪ್ರಯತ್ನದಲ್ಲಿ ಡಾ. ಚಂದ್ರು ಸಲರಾಗಿದ್ದಾರೆ. ಏ.20 ರಂದು ಕ್ಷೇತ್ರದಲ್ಲಿ ನಾಮ ಪತ್ರ ಸಲ್ಲಿಸಲಿದ್ದಾರೆ.

    ಪತ್ರ ಸಮರ:
    ರಾಜೀನಾಮೆ ಅಂಗೀಕಾರ ಪ್ರಕರಣ ಬುಗಿಲೇಳುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ವಿರುದ್ಧ ಇತರೆ ಆಕಾಂಕ್ಷಿಗಳು ಬೆಂಗಳೂರಿನಲ್ಲಿ ಕಾನೂನು ಸಮರ ಸಾರಿದ್ದರು. ಲೋಕಾ ಪ್ರಕರಣ ಹಿನ್ನೆಲೆ “ರಾಜೀನಾಮೆ ಅಂಗೀಕಾರ ಊಜಿರ್ತವೇ’ ಎಂಬುದನ್ನು ಆರೋಗ್ಯ ಇಲಾಖೆಗೆ ಪ್ರಶ್ನಿಸಿದ್ದರು. ವಿರೋಧಿಗಳ ಪ್ರಭಾವ ಹೆಚ್ಚುತ್ತಿದ್ದಂತೆ ಡಾ. ಚಂದ್ರು ಪಕ್ಷದ ಮೊರೆಹೋಗಿದ್ದರು. ಇತ್ತಕಡೆ ಆರೋಗ್ಯ ಆಯುಕ್ತಾಲಯವು ಡಾ. ಚಂದ್ರು ಲಮಾಣಿ ಮೇಲಿನ ಪ್ರಕರಣ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಸೂಚಿಸಿತ್ತು. ಅಂಗೀಕಾರ ಪ್ರಕ್ರಿಯೆ ವಿಳಂಬವಾಗುತ್ತಿದ್ದಂತೆ ಕೆಎಟಿ(ಕರ್ನಾಟಕ ಆಡಳಿತಾತ್ಮ ನ್ಯಾಯಾಧೀಕರಣ) ಮೂಲಕ ಏ.19ರ ಒಲಗಾಗಿ ರಾಜೀನಾಮೆ ಪ್ರಕರಣ ಇತ್ಯರ್ಥ ಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸುವಲ್ಲಿ ಸಲರಾದರು. ಜಿಲ್ಲಾಡಳಿತದ ಪತ್ರದ ಆಧಾರದಲ್ಲಿ ಕೆಎಟಿ ಆದೇಶವನ್ನು ಪರಿಗಣಿಸದಂತೆ ವಿರೋಧಿ ಬಣವು ಆರೋಗ್ಯ ಇಲಾಖೆಗೆ ಲೀಗಲ್​ ನೋಟಿಸ್​ ನೀಡಿತು. ಆದರೆ, ಕೆಎಟಿ ಆದೇಶದ ಅನ್ವಯ ಆರೋಗ್ಯ ಇಲಾಖೆ ಬುಧವಾರ ರಾಜೀನಾಮೆ ಅಂಗೀಕಾರಗೊಳಿಸಿದೆ. ಈ ಬಗ್ಗೆ ಕಾನೂನು ಅಭಿಪ್ರಾಯ ಪಡೆದು ಬಿಫಾರ್ಮ ನೀಡುವುದಾಗಿ ರಾಜ್ಯ ಶಿಸ್ತು ಸಮಿತಿ ವಿಜಯವಾಣಿಗೆ ತಿಳಿಸಿದೆ.

    ನಿರ್ಲಕ್ಷ್ಯದಿಂದ ಕಾನೂನು ಪಾಠ:
    ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಇಂತದೊಂದು ಪ್ರಕರಣ ಇದೇ ಪ್ರಥಮ ಬಾರಿ ಜರುಗಿ, ಚುನಾವಣೆಗೆ ಸ್ಪಧಿರ್ಸುವ ಆಕಾಂಗಳು ಕಾನೂನು ಪಾಠ ಕಲಿತಂತಾಗಿದೆ. ಡಾ. ಚಂದ್ರು ಲಮಾಣಿ ಮೇಲಿನ ಆರೋಪಗಳು ಗುರುತರ ಅಲ್ಲದಿದ್ದರೂ, ತಮ್ಮ ನಿರ್ಲಕ್ಷ್ಯದಿಂದ ಬಹುದೊಡ್ಡ ಬೆಲೆತೆತ್ತಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಜಗದೀಶ ಶೆಟ್ಟರ್​, ಲಕ್ಷ್ಮಣ ಸವದಿ, ಕೆ.ಎಸ್​. ಈಶ್ವರಪ್ಪ ಅಂತವರಿಗೇ ಟಿಕೆಟ್​ ಲಭಿಸದ ಸಂದರ್ಭದಲ್ಲಿ ಬಿಜೆಪಿ ನೀಡಿದ್ದ ಟಿಕೆಟ್​ ಪಡೆಯುವಲ್ಲಿ ಸಲರಾಗುವರೇ ಎಂಬ ಅನುಮಾನ ಕ್ಷೇತ್ರದಲ್ಲಿ ಮೂಡಿತ್ತು. ಕೊನೆಗಳಿಗೆಯಲ್ಲಿ ಅದೃಷ್ಟು ಒಲಿದು ಬಂದಿದೆ. ಈ ಪ್ರಕರಣದಿಂದ ಪ್ರಮುಖವಾಗಿ ಚಂದ್ರು ಲಮಾಣಿ ಸೇರಿದಂತೆ ಎಲ್ಲ ಆಕಾಂಕ್ಷಿಗಳು ಭವಿಷ್ಯದಲ್ಲಿ ಕಾನೂನು ತೋಡಕಾದಂತೆ ಎಚ್ಚರಿಕೆ ನಡೆ ಇಡುವ ಕಾನೂನು ಪಾಠ ಕಲಿತಿದ್ದಾರೆ.

    ಸವಾಲಿನ ಸಂಕಷ್ಟ:
    ಬಿಜೆಪಿ ಅಭ್ಯರ್ಥಿ ಚಂದ್ರುವಿಗೆ ರಾಜಕೀಯ ಅನುಭದ ಕೊರತೆ ಇದೆ. ಬಿಫಾರ್ಮ ಸಿಕ್ಕ ಆತ್ಮವಿಶ್ವಾಸದಲ್ಲಿರುವ ಅವರು ಎಲ್ಲರನ್ನು ಒಳಗೊಂಡು, ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಇದೆ. ಬಿಜೆಪಿಯಲ್ಲೇ ಬಲವಾದ ವಿರೋಧಿ ಬಣ ಸೃಷ್ಟಿಯಾಗಿದೆ. ಬಿಜೆಪಿ ಟಿಕೆಟ್ಆಕಾಂಕ್ಷಿ ಆಗಿದ್ದ ಗುರುನಾಥ ದಾನಪ್ಪನ್ನವರ ಈಗಾಗಲೇ ಪಕ್ಷೇತರ ನಾಮ ಪತ್ರ ಸಲ್ಲಿಸಿದ್ದಾರೆ. ರಾಮಣ್ಣ ಲಮಾಣಿ ಪಕ್ಷೇತರ ನಾಮಪತ್ರ ಸಲ್ಲಿಸುವ ಸೂಚನೆ ನೀಡಿದ್ದು, ಲಂಬಾಣಿ ಮತಬ್ಯಾಂಕ್​ ಇಬ್ಬಾಗ ಆಗುವ ಮುನ್ಸೂಚನೆ ಸಿಕ್ಕಿದೆ. ಈ ಅಸಮಧಾನವನ್ನು ಶಮನಗೊಳಿಸುವ ಪ್ರಯತ್ನ ನಡೆಸಬೇಕಿದೆ ಎಂದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.

    ಕೋಟ್​:
    ಡಾ. ಚಂದ್ರುವಿಗೆ ಬಿಫಾರ್ಮ ಸಿಕ್ಕಿದ್ದು, ಗುರುವಾರ ಬೆಳಗ್ಗೆ 11 ರಿಂದ 1 ಗಂಟೆ ಒಳಗಾಗಿ ನಾಮ ಪತ್ರ ಸಲ್ಲಿಸಲಿದ್ದಾರೆ.
    – ಗಂಗಣ್ಣ ಮಹಾಂತಶೆಟ್ಟರ, ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts