More

    ‘ಕಾಂಗ್ರೆಸ್​’ ಮೈತ್ರಿಕೂಟಕ್ಕೆ ಆರಂಭದಲ್ಲೇ ವಿಘ್ನ; ಮೊದಲ ಚುನಾವಣೆಯಲ್ಲಿ ಸೋಲು

    ಚಂಡೀಗಢ: ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವಂತೆಯೇ ‘ಇಂಡಿಯಾ’ ಮೈತ್ರಿಕೂಟಕ್ಕೆ ಸತತ ಮುಖಭಂಗ ಎದುರಾಗಿದೆ. ಲೋಕಸಭೆ ಚುನಾವಣೆಗೂ ಮುನ್ನ ಮೊದಲ ಪರೀಕ್ಷೆ ಎಂದೇ ಬಿಂಬಿತವಾಗಿದ್ದ ಚಂಡೀಗಢದ ಮೇಯರ್ ರೇಸ್ ನಲ್ಲಿ ಮೈತ್ರಿಕೂಟಕ್ಕೆ ಸೋಲಾಗಿದೆ. ಮಂಗಳವಾರ ನಡೆದ ಈ ಚುನಾವಣೆಯಲ್ಲಿ ಮನೋಜ್ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

    ಇದನ್ನೂ ಓದಿ:ಗೌಪ್ಯತೆ ಸೋರಿಕೆ ಪ್ರಕರಣ: ಇಮ್ರಾನ್​ಖಾನ್​ಗೆ 10 ವರ್ಷ ಜೈಲು ಶಿಕ್ಷೆ

    ಈ ಚುನಾವಣೆಗೆ ಆಪ್ ಮತ್ತು ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡಿರುವುದು ಗೊತ್ತೇ ಇದೆ. ಈ ನಿಟ್ಟಿನಲ್ಲಿ ಎಎಪಿ ಮೇಯರ್ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷ ಉಪಮೇಯರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶದಂತೆ ಇಂದು ಮತದಾನ ನಡೆದಿದೆ. ಭಾರೀ ಭದ್ರತೆಯ ನಡುವೆ ನಡೆದ ಈ ಚುನಾವಣೆಯಲ್ಲಿ ಮೇಯರ್ ಸ್ಥಾನ ಬಿಜೆಪಿ ಪಾಲಾಗಿದೆ.

    ಬಿಜೆಪಿ ನಾಯಕ ಮನೋಜ್ ಸೋಂಕರ್ ಅವರು ಎಎಪಿ ಅಭ್ಯರ್ಥಿ ಕುಲಸ್ತಪ್ ಕುಮಾರ್ ವಿರುದ್ಧ ಜಯಗಳಿಸಿದ್ದಾರೆ. ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಸ್ಪರ್ಧಿಸುತ್ತಿದ್ದು, ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.

    ಫಲಿತಾಂಶದಲ್ಲಿ ಬಿಜೆಪಿ ರಿಗ್ಗಿಂಗ್ ಮಾಡಿದೆ ಎಂದು ಎಎಪಿ ಆರೋಪಿಸಿದೆ. ಎಎಪಿ ಕೌನ್ಸಿಲರ್ ಕಮಲಪ್ರೀತ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಮತಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು. ಇದು ಮೋಸ. ಎಂಟು ಮತಗಳು ರದ್ದಾಗಿವೆ. ಮತಗಳನ್ನು ಏಕೆ ರದ್ದುಗೊಳಿಸಲಾಗಿದೆ ಎಂಬುದನ್ನು ತಿಳಿಸಿಲ್ಲ ಎಂದು ಹೇಳಿದರು.

    ಚಂಡೀಗಢ ಮೇಯರ್ ಮತ್ತು ಉಪಮೇಯರ್ ಆಯ್ಕೆಗೆ ಹೈಕೋರ್ಟ್ ಆದೇಶಿಸಿದರ ಹಿನ್ನೆಲೆ ಇಂದು ಜನವರಿ 30 ರಂದು ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಈ ಹಿಂದೆ ಜನವರಿ 18ರಂದು ಚುನಾವಣಾ ಪ್ರಕ್ರಿಯೆ ನಡೆಸಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಹೈಕೋರ್ಟ್ ಮೆಟ್ಟಿಲೇರಿ ಚುನಾವಣೆಗೆ ಆಗ್ರಹಿಸಿತ್ತು. ಆ ಬಳಿಕ ಜನವರಿ 30ರಂದು ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿತ್ತು. ಇಡೀ ಚುನಾವಣಾ ಪ್ರಕ್ರಿಯೆಯನ್ನು ಚಿತ್ರೀಕರಿಸಿ ನೇರಪ್ರಸಾರ ಮಾಡಲಾಯಿತು.

    ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ, ಮೇಯರ್ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಚಂಡೀಗಢ ಘಟಕಕ್ಕೆ ಅಭಿನಂದನೆಗಳು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಯುಟಿಗಳು ದಾಖಲೆಯ ಅಭಿವೃದ್ಧಿಯನ್ನು ಕಂಡಿವೆ. INDIA ಮೈತ್ರಿಕೂಟ ತಮ್ಮ ಮೊದಲ ಚುನಾವಣಾ ಯುದ್ಧದಲ್ಲಿ ಹೋರಾಡಿದರು ಮತ್ತು ಇನ್ನೂ ಬಿಜೆಪಿಗೆ ಸೋತಿರುವುದು ಅವರ ಅಂಕಗಣಿತ ಅಥವಾ ಅವರ ರಸಾಯನಶಾಸ್ತ್ರವು ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ತೋರಿಸುತ್ತದೆ ಎಂದರು.

    ಲೋಕಸಭೆ ಚುನಾವಣೆಗೂ ಮುನ್ನ ವಿಪಕ್ಷಗಳ ಮೈತ್ರಿಕೂಟಕ್ಕೆ ಈ ಸೋಲು ದೊಡ್ಡ ಹಿನ್ನಡೆಯಾಗಿದೆ. ಇದು ಆಪ್ ಮತ್ತು ಕಾಂಗ್ರೆಸ್ ನಡುವಿನ ಲೋಕಸಭಾ ಸ್ಥಾನ ಹಂಚಿಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಪಂಜಾಬ್‌ವರೆಗಿನ ಸಾರ್ವತ್ರಿಕ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಎಎಪಿ ನಾಯಕರು ಈಗಾಗಲೇ ಘೋಷಿಸಿದ್ದಾರೆ. ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ ಕೂಡ ಪಶ್ಚಿಮ ಬಂಗಾಳದಲ್ಲಿ ಮೈತ್ರಿ ಮಾಡಿಕೊಳ್ಳಲು ನಿರಾಕರಿಸಿತ್ತು. INDIA ಮೈತ್ರಿಕೂಟದಲ್ಲಿ ಎಲ್ಲವೂ ಸರಿ ಇರಲಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

    ಬಿಜೆಪಿ ನಾಯಕನ ಹತ್ಯೆ: 15 ಪಿಎಫ್‌ಐ ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts