More

    ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕರಿಂದ ಗುದ್ದಲಿಪೂಜೆ

    ಚಾಮರಾಜನಗರ: ಚಾ.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಸ್ತೆ, ಚರಂಡಿ ಹಾಗೂ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಮತ್ತು ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು.

    ತಾಲೂಕಿನ ಬೋಗಾಪುರ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 1.50 ಕೋಟಿ, ರಾ.ಹೆ.209 ಮುಖ್ಯ ರಸ್ತೆಯಿಂದ ಚಿಕ್ಕಹೊಳೆ ಚೆಕ್ ಪೋಸ್ಟ್ ಮತ್ತು ಎಲೆಕಟ್ಟೆ ಮಾರ್ಗದಿಂದ ತಾಳವಾಡಿಗೆ ಸೇರುವ ಸಂಪರ್ಕ ರಸ್ತೆ ಅಭಿವೃದ್ದಿಗೆ 2.50ಕೋಟಿ.ರೂ, ಜ್ಯೋತಿಗೌಡನಪುರ ಗ್ರಾಮದಿಂದ ಕುರುಬರಹುಂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ 3 ಕೋಟಿ, ಹೊಂಡರಬಾಳು ನವೋದಯ ಶಾಲೆಯಿಂದ ಕುಂಟಗುಡಿ ಕಾಲೋನಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ 18 ಲಕ್ಷ ರೂ., ಒಳಗೊಂಡಂತೆ ಒಟ್ಟು 7.18 ಕೋಟಿ ರೂ., ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಗ್ರಾಮೀಣ ಭಾಗದ ಜೀವನಾಡಿನಾಡಿಯಾಗಿದ್ದು, ಸಂಚಾರಕ್ಕೆ ರಸ್ತೆಗಳ ಅಭಿವೃದ್ದಿ ಅಗತ್ಯವಾಗಿದೆ.ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚು ಶ್ರಮಿಸುತ್ತಿದೆ. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲೆಂದು ಗುಣಮಟ್ಟದ ರಸ್ತೆ ನಿರ್ಮಾಣವನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಇಂಜಿನಿಯರ್ ಗಳಿಗೆ ಸೂಚಿಸಿದರು. ಇದಕ್ಕೆ ನಾಗರೀಕರ ಸಹಕಾರ ಅಗತ್ಯವಾಗಿದ್ದು, ಗ್ರಾಮಗಳ ಉತ್ತಮ ರಸ್ತೆ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿತ್ಯಾ, ಬೇಬಿ, ಉಪಾಧ್ಯಕ್ಷರಾದ ಮಹದೇವಗೌಡ, ಶ್ರೀನಾಥ್, ಸದಸ್ಯರಾದ ನಂಜುಂಡೇಗೌಡ, ನಾಗು, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ನಾಗೇಂದ್ರ, ತಾ.ಪಂ ಮಾಜಿ ಸದಸ್ಯ ಮಹಾಲಿಂಗು, ಎಇಇ ರಮೇಶ್, ಇಂಜಿನಿಯರ್ ಶಾಂತ, ಮುಖಂಡರಾದ ನಾಗವಳ್ಳಿ ನಾಗಯ್ಯ, ದೊರೆಸ್ವಾಮಿ, ಸಿದ್ದರಾಜು, ಮಧುಚಾರ್, ಸೋಮು ಕೆಲ್ಲಂಬಳ್ಳಿ, ರವಿ, ಪಿ.ಮಹದೇವೇಗೌಡ, ಜಯಶಂಕರ್, ರಾಜೇಶ್, ಸ್ಟಾಲಿನ್, ದೊರೆ, ಮಹೇಶ್, ಲಿಂಗರಾಜು, ಶಿವಕುಮಾರ್ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts