More

    ಹಾಸನೂರು ರಸ್ತೆಯಲ್ಲಿ ಉರುಳಿದ ಮರ..

    ಚಾಮರಾಜನಗರ: ಕರ್ನಾಟಕ ತಮಿಳುನಾಡು ಗಡಿ ಚಾಮರಾಜನಗರ ಜಿಲ್ಲೆಗೆ ಹೊಂದಿರುವ ತಮಿಳುನಾಡಿನ ತಾಳವಾಡಿ ಬಳಿ ಹಾಸನೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಿದ ಮಳೆಯಿಂದಾಗಿ ಮರಗಳು ಮುರಿದು ಬಿದ್ದು ತಮಿಳುನಾಡು- ಕರ್ನಾಟಕ ರಾಜ್ಯಗಳ ನಡುವೆ ಸಾರಿಗೆ ಸಂಚಾರಕ್ಕೆ ತೊಂದರೆಯಾಗಿದೆ.

    ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ಈರೋಡು ಜಿಲ್ಲೆ ತಾಳವಾಡಿ ಬಳಿ ಹಾಸನೂರು, ಅರೇಪಪಾಳ್ಯ, ದಿಂಬಂ ಸೇರಿದಂತೆ ಹಲವು ದಿನಗಳಿಂದ ಮಳೆ ಸುರಿದಿದೆ. ಅದರಂತೆ ಬುಧವಾರ ಹಾಸನೂರು ಪ್ರದೇಶದಲ್ಲಿ ಗಾಳಿ ಮಳೆ ಸುರಿದಿದೆ. ಈ ಸ್ಥಿತಿಯಲ್ಲಿ ಆಸನೂರಿನಿಂದ ದಿಂಬಂ ಸಾಗುವ ರಸ್ತೆಯಲ್ಲಿ ಮೂರು ಕಡೆ ರಸ್ತೆಯಲ್ಲಿದ್ದ ಮೂಂಗಿನ ಮರಗಳು ರಸ್ತೆಯಲ್ಲಿ ಮುರಿದು ಬಿದ್ದವು.ಹೀಗಾಗಿ ತಮಿಳುನಾಡು ಕರ್ನಾಟಕ ರಾಜ್ಯಗಳ ನಡುವೆ ಸಾರಿಗೆ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಘಟನೆಯ ಸ್ಥಳಕ್ಕೆ ಬಂದ ತಮಿಳುನಾಡಿನ ಅಗ್ನಿಶಾಮಕ ಮತ್ತು ರಕ್ಷಣಾ ದಳದವರು ರಸ್ತೆಯಲ್ಲಿ ಬಿದ್ದ ಬಿದಿರಿನ ಮರಗಳನ್ನು ತೆಗೆದುಹಾಕಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts