More

    ಶ್ರೀರಾಮ ಮಂದಿರದಲ್ಲಿ ಅಷ್ಟೋತ್ತರ ಪಾರಾಯಣ

    ಚಾಮರಾಜನಗರ : ನಗರದ ಶಂಕರಪುರ ಶ್ರೀರಾಮ ಮಂದಿರದಲ್ಲಿ ಶ್ರೀ ಆದಿ ಗುರು ಶಂಕರಾಚಾರ್ಯ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಉಪನ್ಯಾಸ,ಅಭಿಷೇಕ, ಭಜನೆ, ಗಾಯನ, ಅಷ್ಟೋತ್ತರ ಪಾರಾಯಣ ನಡೆಯಿತು.

    ಶ್ರೀಶಂಕರ ತತ್ವ ಪ್ರಚಾರ ಅಭಿಯಾನದ ಉಸ್ತುವಾರಿ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಆದಿ ಶಂಕರಾಚಾರ್ಯರ ಜಯಂತಿಯನ್ನು ವಿಶ್ವ ತತ್ವಜ್ಞಾನಿಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಶಂಕರಾಚಾರ್ಯರು ಇಡೀ ವಿಶ್ವಕ್ಕೆ ಜಗದ್ಗುರು ಎಂದರು.

    ಗುರು ಪೂಜೆ, ಗುರು ದರ್ಶನ, ಗುರು ಭಾವದಿಂದ ನಮ್ಮ ಜೀವನ ಸಾಗಬೇಕು. ದೇವಾಲಯಗಳು, ಮಂದಿರಗಳು, ಮಠಗಳು ಸೇರಿದಂತೆ ಮನೆ-ಮನೆಯಲ್ಲೂ ಶ್ರೀಶಂಕರರ ಜಯಂತಿ ಆಚರಿಸುವ ಮೂಲಕ ಆಧ್ಯಾತ್ಮ ಭಾವ ಜಾಗೃತಗೊಳಿಸಬೇಕು. ಶ್ರೀಶಂಕರರು ಇಡೀ ಜಗತ್ತಿಗೆ ದರ್ಶನ, ಜ್ಞಾನದ ಮಾರ್ಗ ತೋರಿ ಮಾನವ ಜನ್ಮ ಸಾರ್ಥಕಗೊಳಿಸಿದ್ದಾರೆ ಎಂದು ತಿಳಿಸಿದರು.

    ಪುರೋಹಿತ ರಂಗನಾಥ್ ಪೂಜಾ ಕೈಂಕರ್ಯ ನೆರವೇರಿಸಿದರು. ಶಾರದಾ ಭಜನಾ ಮಂಡಳಿ ಸದಸ್ಯೆಯರಾದ ಮಾಲಾ, ವತ್ಸಲಾ ರಾಜಗೋಪಾಲ್, ಕುಸುಮಾ ಋಗ್ವೇದಿ, ವಾಣಿ ಶ್ರೀಮುರುಗೇಶ್, ಶೈಲಾ ನಾಗೇಂದ್ರ, ಮಣಿ, ಸತ್ಯನಾರಾಯಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts