More

    ಮುಂದುವರೆದ ಸಚಿವಗಿರಿ ನಿರೀಕ್ಷೆ

    ಚಾಮರಾಜನಗರ: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಾರಥ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಮುಂದುವರೆದಿದೆ.

    ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ ಡಾ.ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ, ಕೆ.ಜೆ.ಜಾರ್ಜ್, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ರಾಮಲಿಂಗರೆಡ್ಡಿ, ಪ್ರಿಯಾಂಕ್ ಖರ್ಗೆ, ಜಮೀರ್ ಅಹಮದ್ ಪ್ರಮಾಣ ವಚನ ಸ್ವೀಕರಿಸಿದರು.

    ಅಳೆದು ತೂಗಿ ಮೊದಲ ಹಂತದಲ್ಲಿ 8 ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದ್ದು, ಎರಡನೇ ಹಂತದಲ್ಲಿ ಜಿಲ್ಲೆಯ ಶಾಸಕರು ಪರಿಗಣನೆಗೆ ಬರಲಿದ್ದಾರೆ. ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಗುಂಡ್ಲಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಜಿಲ್ಲೆಯಲ್ಲಿ ಗೆದ್ದಿರುವವರು. ಇವರಲ್ಲಿ ಸಿ.ಪುಟ್ಟರಂಗಶೆಟ್ಟಿಗೆ ಮಂತ್ರಿ ಭಾಗ್ಯ ದೊರೆಯುವ ನಿರೀಕ್ಷೆಗಳು ಹೆಚ್ಚಾಗಿವೆ.

    ಸಿದ್ದರಾಮಯ್ಯ ಆಪ್ತರಾಗಿರುವ ಕಾರಣ ಮತ್ತು ರಾಜ್ಯದ ಏಕೈಕ ಉಪ್ಪಾರ ಸಮಾಜದವರಿಗೆ ರಾಜಕೀಯ ಪ್ರಾತಿನಿಧ್ಯ ನೀಡಬಹುದೆಂದು ಅಂದಾಜಿಸಲಾಗಿದೆ. ಸಿದ್ದರಾಮಯ್ಯ ಕಳೆದ ಸಲ ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ಮಾನದಂಡದ ಮೇಲೆ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಸಚಿವ ಸ್ಥಾನ ಸಿಕ್ಕಿತ್ತು. ಈ ಸಲ ನಾಲ್ಕನೇ ಗೆಲುವು, ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣರಂತಹ ಘಟಾನುಘಟಿಯನ್ನು ಸೋಲಿಸಿರುವುದು ಸಿ.ಪುಟ್ಟರಂಗಶೆಟ್ಟಿ ಸಚಿವ ಸ್ಥಾನ ಕೇಳಲು ಸಹಕಾರಿ ಎನಿಸಿದೆ.
    ಕಾಯುವಿಕೆ, ಕುತೂಹಲ: ಶಾಸಕ ಸಿ.ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ದೊರೆಯವು ವಿಶ್ವಾಸದಲ್ಲಿ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಚಾಮರಾಜನಗರ ಕ್ಷೇತ್ರದ ಮತದಾರರ ಕುತೂಹಲ ಚುನಾವಣೆ ಸಂದರ್ಭದಲ್ಲಿ ಇದ್ದಂತೆಯೇ ಇದೆ. ಎಲೆಕ್ಷನ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿ.ಸೋಮಣ್ಣ ಸ್ಪರ್ಧೆ ಮಾಡಿದ್ದರು. ಹ್ಯಾಟ್ರಿಕ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಪ್ರತಿಸ್ಪರ್ಧೆ ನೀಡಿದರು. ಇಬ್ಬರ ನಡುವಿನ ಕದನ ಸಾಮಾನ್ಯ ಎನಿಸುತ್ತಿದ್ದ ಚಾಮರಾಜನಗರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಹೈವೋಲ್ಟೇಜ್ ಕಣವನ್ನಾಗಿ ಬದಲಾವಣೆ ಮಾಡಿತ್ತು. ಸೋಮಣ್ಣ ಗೆಲ್ಲುವ ವಿಶ್ವಾಸದಲ್ಲಿ ಇದ್ದರು. ಸಿ.ಪುಟ್ಟರಂಗಶೆಟ್ಟಿ ಸಹ ಗೆದ್ದೇ ಗೆಲ್ಲುತ್ತೇನೆ ಎಂದಿದ್ದರು. ಲಿತಾಂಶ ಹೊರಬಿದ್ದಾಗ ಪುಟ್ಟರಂಗಶೆಟ್ಟಿ ಮೇಲುಗೈ ಸಾಧಿಸಿದರು. ಚುನಾವಣೆ ನಂತರ ಕ್ಷೇತ್ರದಲ್ಲಿ ಚರ್ಚೆಯಲ್ಲಿರುವ ವಿಷಯ ಮಂತ್ರಿ ಪದವಿಯದ್ದಾಗಿದೆ. ಸಿದ್ದರಾಮಯ್ಯ ಆಪ್ತರಾಗಿರುವ ಕಾರಣಕ್ಕೆ ಸಿ.ಪುಟ್ಟರಂಗಶೆಟ್ಟಿಗೆ ಅವಕಾಶ ಸಿಗಲಿದೆ ಎಂದು ಎಲ್ಲರೂ ಭಾಗವಹಿಸಿದ್ದಾರೆ.

    ಅಭಿಮಾನಿಗಳ ಪ್ರಾರ್ಥನೆ:
    ಸಿ.ಪುಟ್ಟರಂಗಶೆಟ್ಟಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಆಶಿಸಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಚುನಾವಣೆ ಮುಗಿದು ಲಿತಾಂಶ ಹೊರಬಿದ್ದ ಬಳಿಕ ದೇಗುಲಗಳಿಗೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ದೇವಸ್ಥಾನಗಳ ಮುಂದೆ ನಿಂತು ಶೆಟ್ಟರ ಪೋಟೋ ಹಿಡಿದಿರುವ ಪೋಟೋಗಳು ವೈರಲ್ ಆಗಿವೆ. ಇದೇ ರೀತಿ ಸಚಿವರಾಗಬೇಕೆಂದು ಆಶಿಸಿ ಪ್ರಾರ್ಥನೆ ಸಲ್ಲಿಸಿರುವವರೂ ಇದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts