More

    ಸೌಲಭ್ಯ ನೀಡಿದರೂ ಫಲಿತಾಂಶ ಶೂನ್ಯ

    ಚಳ್ಳಕೆರೆ: ನಗರದ ಪಿಯು ಕಾಲೇಜಿಗೆ 4 ಕೋಟಿ ರೂ. ಅನುದಾನದಲ್ಲಿ ಮೂಲ ಸೌಕರ್ಯದ ಜತೆಗೆ ಹೆಚ್ಚುವರಿ ಕಟ್ಟಡ ನಿರ್ಮಿಸಿಕೊಟ್ಟರೂ ನಿರೀಕ್ಷಿತ ಫಲಿತಾಂಶ ಬಂದಿಲ್ಲವೆಂದು ಶಾಸಕ ಟಿ.ರಘುಮೂರ್ತಿ ಬೇಸರ ವ್ಯಕ್ತಪಡಿಸಿದರು.

    ನಗರದ ಸೋಮಗುದ್ದು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸ್ಕೃತಿಕ, ಎನ್ನೆಸ್ಸೆಸ್ ಮತ್ತು ರೋವರ್ಸ್ ಘಟಕದ ಸಮಾರೋಪ ಉದ್ಘಾಟಿಸಿ ಮಾತನಾಡಿದರು.

    ಕಾಲೇಜು ಶಿಕ್ಷಣ ಜೀವನದ ಅಂತಿಮ ಘಟ್ಟ. ಈ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಶ್ರದ್ಧೆಯಿಂದ ಅಭ್ಯಾಸ ಮಾಡಿ ಪಾಲಕರಿಗೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು.

    ಕಾಲೇಜಿಗೆ ನಿರಂತರ ಗೈರಾಗುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸಬೇಡಿ ಎಂದು ಉಪನ್ಯಾಸಕರಿಗೆ ಸೂಚಿಸಿದರು.

    ಜಿಪಂ ಸದಸ್ಯೆ ಎಸ್.ಎಲ್.ಶಶಿಕಲಾ ಮಾತನಾಡಿ, ಮೊಬೈಲ್ ಬಳಕೆಯಿಂದ ಜೀವನ ಮೌಲ್ಯ, ಮಹತ್ವ ಕಳೆದುಕೊಳ್ಳಲಾಗುತ್ತಿದೆ. ಜನಪದ ಸಂಸ್ಕೃತಿ ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದರು.

    ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆಂಜನೇಯ, ಸದಸ್ಯ ಜಿ.ವೀರೇಶ್, ಮಾಜಿ ಸದಸ್ಯ ಸಿ.ಟಿ.ಶ್ರೀನಿವಾಸ್, ನಗರಸಭೆ ಸದಸ್ಯರಾದ ವೈ.ಪ್ರಕಾಶ್, ಎಂ.ಜೆ.ರಾಘವೇಂದ್ರ, ಕವಿತಾ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಎಸ್. ಕೋಣಪ್ಪ, ಉಪನ್ಯಾಸಕರಾದ ಎಸ್. ಲಕ್ಷ್ಮಣ್, ವಸಂತಕುಮಾರ್, ಎನ್.ಈರಣ್ಣ, ಎಂ.ರವೀಶ್, ಚಂದ್ರಶೇಖರ್ ಇತರರಿದ್ದರು.

    ಛಲ, ಶ್ರದ್ಧೆ ಇದ್ದವರಿಗೆ ಉನ್ನತ ಸ್ಥಾನ: ಇಂದಿಗೂ ಕಂದಾಯ ಗ್ರಾಮವಾಗಿಲ್ಲದ ಕಡಬನಕಟ್ಟೆ ಕುಗ್ರಾಮದಲ್ಲಿ ಜನಿಸಿ ಇಂಜಿನಿಯರ್ ಪದವಿ ಪಡೆದ ನಾನು, ರಾಜಕಾರಣಕ್ಕೆ ಪ್ರವೇಶ ಮಾಡಿ ಎರಡು ಬಾರಿ ಶಾಸಕನಾಗಿದ್ದೇನೆ. ನನ್ನ ಕುಟುಂಬಕ್ಕೆ ರಾಜಕೀಯ ಮತ್ತು ನೌಕರಸ್ಥರ ಹಿನ್ನೆಲೆಯಿಲ್ಲ. ಆದರೂ ಶ್ರಮಪಟ್ಟು ಈ ಸ್ಥಾನಕ್ಕೆ ಬಂದಿದ್ದೇನೆ. ನೀವುಗಳು ಕೂಡ ಛಲದಿಂದ ಅಭ್ಯಾಸಸಿದರೆ ದೇಶದ ಉನ್ನತ ಹುದ್ದೆಯನ್ನೇ ನಿಮ್ಮದಾಗಿಸಿ ಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಶಾಸಕ ರಘುಮೂರ್ತಿ ಕಿವಿಮಾತು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts