More

    23 ಮಂದಿ ಕಾರ್ಮಿಕರು ಚೇತರಿಕೆ

    ಚಳ್ಳಕೆರೆ: ಕರೊನಾದಿಂದ ಚೇತರಿಸಿಕೊಂಡ ಉತ್ತರ ಪ್ರದೇಶ ಮೂಲದ 23 ವಲಸೆ ಕಾರ್ಮಿಕರನ್ನು ನಗರದ ಹೊರವಲಯದ ಡಿ.ದೇವರಾಜ ಅರಸು ವಸತಿ ನಿಲಯದ ಸಾಂಸ್ಥಿಕ ಕ್ವಾರಂಟೈನ್‌ನಿಂದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸಮ್ಮುಖದಲ್ಲಿ ಬುಧವಾರ ಬಿಡುಗಡೆಗೊಳಿಸಲಾಯಿತು.

    ಕರೊನಾ ಸೋಂಕು ದೃಢಪಟ್ಟಿದ್ದ ವಲಸೆ ಕಾರ್ಮಿಕರನ್ನು ಮೇ 15ರಿಂದ ಕ್ವಾರಂಟೈನ್ ಮಾಡಲಾಗಿತ್ತು. ಎರಡು-ಮೂರು ಹಂತದ ಚಿಕಿತ್ಸೆ ಬಳಿಕ ಚೇತರಿಸಿಕೊಂಡ ಕಾರ್ಮಿಕರಿಗೆ ಪುಷ್ಪಾರ್ಚನೆ ಮಾಡಿ ಬೀಳ್ಕೊಡಲಾಯಿತು.

    ಮನೆಗೆ ಹೋದ ಬಳಿಕ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬೇಡಿ. ಸ್ವಚ್ಛತೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಎಚ್ಚರದಿಂದ ಇರಬೇಕು ಡಿಸಿ ಸಲಹೆ ನೀಡಿದರು.

    ನಮ್ಮ ಆರೋಗ್ಯ ಸುಧಾರಣೆಗೆ ವೈದ್ಯರು ಹಾಗೂ ಅಧಿಕಾರಿಗಳು ಶ್ರಮಿಸಿದ್ದಾರೆ ಎಂದು ಕಾರ್ಮಿಕರು ಸ್ಮರಿಸಿದರು. ತಾಲೂಕು ಆಡಳಿತ ಕಾರ್ಮಿಕರಿಗೆ ಸಾರಿಗೆ ಬಸ್ ವ್ಯವಸ್ಥೆ ಮಾಡಿದ್ದು, ಬೆಂಗಳೂರಿಗೆ ಹೋಗಿ ಅಲ್ಲಿಂದ ರೈಲು ಪ್ರಯಾಣದಲ್ಲಿ ಉತ್ತರ ಪ್ರದೇಶಕ್ಕೆ ತಲುಪುವಂತೆ ಸೂಚಿಸಲಾಯಿತು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಧಿಕಾ, ತಹಸೀಲ್ದಾರ್ ಎಂ.ಮಲ್ಲಿಕಾರ್ಜುನ, ಟಿಎಚ್‌ಒ ಡಾ.ಎನ್.ಪ್ರೇಮಸುಧಾ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜಣ್ಣ, ವೃತ್ತ ನಿರೀಕ್ಷಕ ಈ. ನಂದ್, ಪೊಲೀಸ್ ಉಪ ಅಧೀಕ್ಷಕ ಶ್ರೀಧರ್, ಡಾ. ಮಿತ್‌ಗುಪ್ತಾ, ಡಾ. ಾಗರಾಜ್, ಡಾ. ಸವರಾಜ್, ಆರೋಗ್ಯ ಇಲಾಖೆಯ ಎನ್.ಪ್ರೇಮಕುಮಾರ್, ಎಸ್.ಬಿ. ಪ್ಪೇಸ್ವಾಮಿ, ಗಂಗಾಧರ, ಚಂದ್ರಣ್ಣ, ಎಚ್. ಪ್ಪೇಸ್ವಾಮಿ, ಗ್ರಾಮಲೆಕ್ಕಿಗ ರಾಜೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts