More

    ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ

    ಸಿಂಧನೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ರಾಜ್ಯ ಸಮಿತಿ ಕರೆ ಮೇರೆಗೆ ಶುಕ್ರವಾರ ತಾಲೂಕು ಸಮಿತಿ ಭಿತ್ತಿಪತ್ರ ಹಿಡಿದು ಪ್ರತಿಭಟಿಸಿತು.

    ಕಾರ್ಮಿಕ ಕಾನೂನು ತಿದ್ದುಪಡಿ ರದ್ದುಪಡಿಸಬೇಕು. 12 ಗಂಟೆ ಕೆಲಸದ ಆದೇಶ ಹಿಂಪಡೆಯಬೇಕು. ತಿಂಗಳಿಗೆ 25 ಸಾವಿರ ರೂ.ನಂತೆ ಎಲ್ಲ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು. ಕೆಲಸ ಸಿಗದವರಿಗೆ 15 ಸಾವಿರ ರೂ. ನಿರುದ್ಯೋಗ ಭತ್ಯೆ ಕೊಡಬೇಕು. ಲಾಕ್‌ಡೌನ್ ಪೂರ್ಣ ಅವಧಿಗೆ ಎಲ್ಲ ಕಾರ್ಮಿಕರಿಗೆ ಪೂರ್ಣ ವೇತನ ನೀಡಬೇಕು. ಉದ್ಯೋಗ ಕಳೆದುಕೊಂಡ ಎಲ್ಲರಿಗೆ ಲಾಕ್‌ಡೌನ್ ಸಮಯದಲ್ಲಿ ಇಡೀ ಅವಧಿಗೆ ತಿಂಗಳಿಗೆ 15 ಸಾವಿರ ಜೊತೆ ಉದ್ಯೋಗ ಖಾತ್ರಿಪಡಿಸಬೇಕು. ಎಪಿಎಂಸಿಯ ಹಮಾಲಿ ಕಾರ್ಮಿಕರಿಗೆ ಕರೋನ ಪರಿಹಾರವಾಗಿ ತಿಂಗಳಿಗೆ 10.000 ಸಾವಿರ ರೂ. ಅವರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿತು.

    ಕರೊನಾದ ನೆಪದಲ್ಲಿ ಕಂಪನಿಗಳ ಕೆಲಸ ಕಡಿತ ಮತ್ತು ವೇತನ ಕಡಿತವನ್ನು ತಕ್ಷಣ ನಿಲ್ಲಿಸಬೇಕು. ಮನೆಗೆ ಮರಳಿದ ವಲಸೆ ಕಾರ್ಮಿಕರಿಗೆ ಆರ್ಥಿಕ ಸಹಾಯದ ಜೊತೆಗೆ ಇತರೆ ಸೌಲಭ್ಯಗಳು ಮತ್ತು ಜೀವನೋಪಾಯಕ್ಕಾಗಿ ಅವರಿಗೆ ಅವಕಾಶ ಕಲ್ಪಿಸಬೇಕು. ಅವರನ್ನು ಎಂಎನಾರ್‌ಇಜಿಗೆ ಸೇರಿಸಬೇಕು. ಆಶಾ, ಅಂಗನವಾಡಿ, ಮದ್ಯಾಹ್ನದ ಊಟ, ಹಾಸ್ಟೇಲ್ ಅಡುಗೆ ಮಾಡುವ ಕಾರ್ಮಿಕರನ್ನು ಎಲ್ಲಾ ಸೌಲಭ್ಯಗಳೊಂದಿಗೆ ಕಾರ್ಮಿಕರು ಎಂದು ಪರಿಗಣಿಸಬೇಕು. ಪೆಟ್ರೋಲ್, ಡಿಸೇಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು. ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ, ಮಾಬುಸಾಬ ಬೆಳ್ಳಟ್ಟಿ, ನಾಗಪ್ಪ ಉಮಲೂಟಿ, ತಿಮ್ಮಣ್ಣ ಯಾದವ, ಹೆಚ್.ಆರ್.ಹೊಸಮನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts