More

    ಕೃಷಿ ಗಣತಿ ಹೊಣೆ ಈ ಬಾರಿ ಕಂದಾಯ ಇಲಾಖೆ ಹೆಗಲಿಗೆ

    ಚಿತ್ರದುರ್ಗ: ಇದೇ ಮೊದಲ ಬಾರಿಗೆ ಮೊಬೈಲ್ ಆ್ಯಪ್ ಮೂಲಕ ನಡೆಸುತ್ತಿರುವ 2021-22ನೇ ಸಾಲಿನ ಕೃಷಿ ಗಣತಿಯನ್ನು ಕಂದಾಯ ಇಲಾಖೆ ಗೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.

    ಜಿಪಂದಲ್ಲಿ ಗುರುವಾರ ಜಿಲ್ಲಾಡಳಿತ,ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಿಂದ ಕೃಷಿ ಗಣತಿ ಜಿಲ್ಲಾ ಮಟ್ಟದ ತರಬೇತಿ ಕಾ ರ‌್ಯಾಗಾರ ಉದ್ಘಾಟಿಸಿ ಮಾತನಾಡಿ,ಕೃಷಿ ಗಣತಿ ಕಾರ‌್ಯವನ್ನು ಕಂದಾಯ ಇಲಾಖೆ ವಹಿಸಲಾಗಿದೆ.

    ಮೊದಲ ಹಂತದ ಗಣತಿ ಒಂದು ತಿಂಗಳೊಳಗೆ ಪೂರ್ಣವಾಗಬೇಕು. ನಿಗದಿತ ಸಮಯದೊಳಗೆ ಗುರಿ ಸಾಧಿಸಬೇಕು. ಮೇಲುಸ್ತು ವಾರಿಯನ್ನು ಕಂದಾಯ ನಿರೀಕ್ಷಕರು, ತಹ ಸೀಲ್ದಾರ್‌ಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಅಧಿಕಾರಿ ಗಳ ಗಮನಕ್ಕೆ ತರಬೇಕು. ಮೊದಲ ಬಾರಿಗೆ ಆ್ಯಪ್ ಮೂಲಕ ಗಣತಿ ಮಾಡುವುದರಿಂದ ಸಣ್ಣ,ಪುಟ್ಟ ಸಮಸ್ಯೆಗಳೆದುರಾಗುವ ಸಾಧ್ಯತೆ ಗಳಿವೆ. ಕೃಷಿ,ತೋಟಗಾರಿಕೆ,ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಗಳ ಸಮನ್ವಯದೊಂದಿಗೆ ಗಣತಿ ಯಶಸ್ವಿಗೊಳಿಸ ಬೇಕೆಂದರು.

    ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜಂಟಿ ನಿರ್ದೇಶಕ ಎಂ.ರಾಜಣ್ಣ ಮಾತನಾಡಿ,ಪ್ರತಿ ಐದು ವರ್ಷಕೊಮ್ಮೆ ಕೃಷಿ ಗಣತಿ ನಡೆಸಲಾಗುತ್ತಿದ್ದು,ಪ್ರಸ್ತುತ 11ನೇ ಗಣತಿ ಇದಾಗಿದೆ. ಮೂರು ಹಂತಗಳಲ್ಲಿ ಗಣತಿ ನಡೆಯಲಿದೆ. ಮೊದಲ ಹಂತದಲ್ಲಿ ಹಿಡುವಳಿದಾರರ ಪಟ್ಟಿ,ಅವರು ಹೊಂದಿರುವ ಜಮೀನು ವಿಸ್ತೀರ್ಣ,ಸಾಮಾಜಿಕ ಗುಂಪು ಇತ್ಯಾದಿ ಮಾಹಿತಿ. ಎರಡನೇ ಹಂತದಲ್ಲಿ ಪ್ರತಿ ಗ್ರಾಮಗಳ ಪ್ರತಿ ಯೊಬ್ಬ ರೈತರ ಕೃಷಿ ಚಟುವಟಿಕೆ ಮಾಹಿತಿ ಸಂಗ್ರಹಿಸಲಾಗುವುದು. ಮೂರನೇ ಹಂತದಲ್ಲಿ ಕೃಷಿ ಇನ್‌ಪುಟ್ ಮಾದರಿಗೆ ಸಂಬಂಧಿಸಿದ ಅಂಕಿ,ಅಂಶಗಳ ಮಾಹಿತಿಯನ್ನು ಆಯ್ದ ಗ್ರಾಮಗಳ ಹಿಡುವಳಿದಾರರಿಂದ ಪಡೆಯಲಾಗುವುದು ಎಂದರು.

    ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ರಮೇಶ್‌ಕುಮಾರ್,ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ,ಜಿಲ್ಲಾ ಸಂಖ್ಯಾ ಸಂಗ್ರ ಹಣಾಧಿಕಾರಿ ಹನುಮನಾಯಕ್,ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ಅಶ್ವತ್ಥಾಮ,ಭೂದಾಖಲೆಗಳ ಉಪನಿರ್ದೇಶಕ ಬಿ.ರಾಮಾಂ ಜನೇಯ,ಎನ್‌ಐಸಿ ಅಧಿಕಾರಿಗಳು,ತಹಸೀಲ್ದಾರ್‌ಗಳು,ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳ ಹಿರಿಯ ಸಹಾಯಕ ನಿರ್ದೇಶಕರು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts