More

    ಫೆಬ್ರವರಿ ನಂತರ ಸಿಬಿಎಸ್​ಇ ಬೋರ್ಡ್ ಪರೀಕ್ಷೆ

    ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ(ಸಿಬಿಎಸ್​ಇ) 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಆಫ್​ಲೈನ್​ನಲ್ಲೇ ನಡೆಯಲಿವೆ. ಆದರೆ, ಮುಂದಿನ ವರ್ಷ ಫೆಬ್ರವರಿಯೊಳಗೆ ಈ ಪರೀಕ್ಷೆಗಳು ನಡೆಯುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಮಂಗಳವಾರ ಹೇಳಿದರು.

    ಬೋರ್ಡ್ ಪರೀಕ್ಷೆಗಳ ಕುರಿತು ಶಿಕ್ಷಕಕರೊಂದಿಗೆ ನೇರ ಸಂವಾದ ನಡೆಸಿದ ಸಚಿವರು, ಅನೇಕ ಸಿಬಿಎಸ್​ಇ ಶಾಲೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇರುವುದರಿಂದ ಆನ್​ಲೈನ್ ಪರೀಕ್ಷೆ ಅಸಾಧ್ಯ. ಪರೀಕ್ಷೆಗಳ ದಿನಾಂಕವನ್ನು ನಂತರ ನಿಗದಿಪಡಿಸುವುದಾಗಿ ತಿಳಿಸಿದರು. ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಿಗೆ ತರಗತಿಗಳಲ್ಲಿ ಕುಳಿತುಕೊಳ್ಳಲು ಆಗದಿದ್ದರೆ ಪರ್ಯಾಯದ ಬಗ್ಗೆ ಚಿಂತಿಸಲಾಗುತ್ತದೆ ಎಂದು ಹೇಳಿದರು. 2021ರ ಬೋರ್ಡ್ ಪರೀಕ್ಷೆಗಳು ಲಿಖಿತ ರೂಪದಲ್ಲಿ ಮಾತ್ರವೇ ಇರುತ್ತವೆ. ಆನ್​ಲೈನ್ ಪರೀಕ್ಷೆ ನಡೆಯುವುದಿಲ್ಲ ಎಂದು ಸಿಬಿಎಸ್​ಇ ಅಧಿಕಾರಿಗಳು ಈ ಹಿಂದೆಯೇ ಹೇಳಿದ್ದರು. ಆದರೂ ಪ್ರಾಯೋಗಿಕ ಪರೀಕ್ಷೆ ಬಗ್ಗೆ ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಗೊಂದಲ ಇತ್ತು.

    ಕರೊನಾಘಾತ: ಕಳೆದ ವರ್ಷ ಮಾರ್ಚ್​ನಲ್ಲಿ ನಡೆಯುತ್ತಿದ್ದ ಸಿಬಿಎಸ್​ಇ ಬೋರ್ಡ್ ಪರೀಕ್ಷೆಗಳನ್ನು ಕರೊನಾ ಮಹಾಮಾರಿ ಕಾರಣ ಮುಂದೂಡಲಾಗಿತ್ತು. ನಂತರ ರದ್ದುಪಡಿಸಲಾಗಿತ್ತು. ಪರ್ಯಾಯ ಮೌಲ್ಯಮಾಪನ ಯೋಜನೆ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗಿತ್ತು.

    ಎರಡು ಬಾರಿ ಮುಂದೂಡಿಕೆ: ಜೆಇಇ ಮತ್ತು ನೀಟ್​ನಂಥ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೂಡ ಕರೊನಾ ಕಾರಣ ಈ ವರ್ಷ ಎರಡು ಬಾರಿ ಮುಂದೂಡಲಾಗಿತ್ತು. ನಿರಂತರವಾಗಿ ಶಾಲೆಗಳು ಮುಚ್ಚಿದ್ದರಿಂದ ಹಾಗೂ ಬೋಧನೆ-ಕಲಿಕೆ ಚಟುವಟಿಕೆಗಳು ಸಂಪೂರ್ಣವಾಗಿ ಆನ್​ಲೈನ್​ನಲ್ಲಿ ನಡೆದಿರುವುದರಿಂದ ಮಂಡಳಿ ಪರೀಕ್ಷೆಗಳನ್ನು ಕೂಡ ಮುಂದೂಡಬೇಕೆಂಬ ಒತ್ತಾಯ ಪ್ರಬಲವಾಗಿತ್ತು.

    ಮಾ.17ರಿಂದ ಕೇರಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ: ಕೇರಳದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಹೈಯರ್ ಸೆಕೆಂಡರಿ ಪರೀಕ್ಷೆಗಳನ್ನು 2021ರ ಮಾರ್ಚ್ 17ರಿಂದ 30ರವರೆಗೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಪ್ರತಿದಿನ ಬೆಳಗ್ಗೆ ಪ್ಲಸ್​ಟು ಪರೀಕ್ಷೆ ಹಾಗೂ ಮಧ್ಯಾಹ್ನ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ.

    ಗಂಗೆಯಲ್ಲಿ 12 ಗಂಟೆಗಳ ಕಾಲ ತೇಲುತ್ತಲೇ ಇದ್ದ ಮಹಿಳೆ! 10 ಕಿ.ಮೀ ತೇಲಿ ಬಂದ ಮಹಿಳೆಯನ್ನು ರಕ್ಷಿಸಿದ ಮೀನುಗಾರರು

    ವಾಟರ್​ ಟ್ಯಾಂಕ್​ನಲ್ಲಿದ್ದವು ನಾಲ್ಕು ಹೆಣ! ವೈರಿಗಳೇ ಇಲ್ಲದ ಕುಟುಂಬದ ನಿಗೂಢ ಸಾವು!

    70 ವರ್ಷದ ವೃದ್ಧನಿಗೆ ಮಹಿಳೆಯೊಂದಿಗೆ ಲಿವ್​ ಇನ್​ ರಿಲೇಷನ್​ಶಿಪ್​! ವಿಚಾರ ತಿಳಿದ ಮಕ್ಕಳು ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts