12 ಕೋಟಿ ಮೌಲ್ಯದ ಫೆರಾರಿ ಸಿಲಿಂಡ್ರಿ ಖರೀದಿಸಿದ ಹಾರ್ದಿಕ್: ಈ ಕಾರಿನ ವಿಶೇಷತೆ ಕೇಳಿದ್ರೆ ಬೆರಗಾಗ್ತೀರಾ! Hardik Pandya

12 ಕೋಟಿ ಮೌಲ್ಯದ ಫೆರಾರಿ ಸಿಲಿಂಡ್ರಿ ಖರೀದಿಸಿದ ಹಾರ್ದಿಕ್: ಈ ಕಾರಿನ ವಿಶೇಷತೆ ಕೇಳಿದ್ರೆ ಬೆರಗಾಗ್ತೀರಾ! Hardik Pandya
12 ಕೋಟಿ ಮೌಲ್ಯದ ಫೆರಾರಿ ಸಿಲಿಂಡ್ರಿ ಖರೀದಿಸಿದ ಹಾರ್ದಿಕ್: ಈ ಕಾರಿನ ವಿಶೇಷತೆ ಕೇಳಿದ್ರೆ ಬೆರಗಾಗ್ತೀರಾ! Hardik Pandya
Published on

ಪ್ರಮುಖ ಮುಖ್ಯಾಂಶಗಳು

  • 12 ಕೋಟಿ ಮೌಲ್ಯದ ಫೆರಾರಿ 12 ಸಿಲಿಂಡ್ರಿ ಕಾರನ್ನು ಖರೀದಿ ಮಾಡಿದ ಹಾರ್ದಿಕ್​ ಪಾಂಡ್ಯ
  • ಕಪ್ಪು ಬಣ್ಣದ ಫೆರಾರಿ ಕಾರನ್ನು ಸ್ವತಃ ತಾವೇ ತಮ್ಮ ಮನೆಗೆ ಡ್ರೈವ್​ ಮಾಡಿಕೊಂಡು ಬಂದ ಆಲ್​ರೌಂಡರ್​
  • ದುಬಾರಿ ಫೆರಾರಿ ಕಾರು ಚಾಲನೆ ವೇಳೆ ಹಾರ್ದಿಕ್​ ಪಾಂಡ್ಯ ಜತೆ ಕಾಣಿಸಿಕೊಂಡ ಗೆಳತಿ ಮಹಿಕಾ ಶರ್ಮಾ
Hardik Pandya : ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಟ್ರೋಫಿಯನ್ನು ಎತ್ತಿ ಹಿಡಿದಿದ್ದು ಎಲ್ಲರಿಗೂ ತಿಳಿದಿದೆ. ಈ ವಿಜೇತ ತಂಡದ ಭಾಗವಾಗಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಹೊಸ ಕಾರಿನೊಂದಿಗೆ ಕಾಣಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಹೌದು, ಹಾರ್ದಿಕ್​ ಅವರು 12 ಕೋಟಿ ಮೌಲ್ಯದ ಫೆರಾರಿ 12 ಸಿಲಿಂಡ್ರಿ ಕಾರನ್ನು ಖರೀದಿ ಮಾಡಿದ್ದು, ತಮ್ಮ ಗ್ಯಾರೇಜ್‌ಗೆ ಮತ್ತೊಂದು ದುಬಾರಿ ವಾಹನವನ್ನು ಸೇರಿಸಿದ್ದಾರೆ. ಕಪ್ಪು ಬಣ್ಣದ ಫೆರಾರಿ ಕಾರನ್ನು ಸ್ವತಃ ಹಾರ್ದಿಕ್​ ಅವರೇ ತಮ್ಮ ಮನೆಗೆ ಓಡಿಸಿಕೊಂಡು ಬಂದಿದ್ದಾರೆ. ಈ ವೇಳೆ ಕಾರಿನಲ್ಲಿ ಅವರ ಗೆಳತಿ ಮಹಿಕಾ ಶರ್ಮಾ ಕೂಡ ಇದ್ದರು.
ಇತ್ತೀಚೆಗೆ, ಕ್ರಿಕೆಟ್ ಅಭಿಮಾನಿಯೊಬ್ಬರು ತಮ್ಮ ಎಕ್ಸ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ತಕ್ಷಣವೇ ವೈರಲ್​ ಆಗಿ, ಭಾರಿ ಸುದ್ದಿಯಾಗುತ್ತಿದೆ. ಈಗಾಗಲೇ ಹಾರ್ದಿಕ್ ಅವರ ಗ್ಯಾರೆಜ್​ನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಹುರಾಕನ್ EVO, ಲಂಬೋರ್ಘಿನಿ ಉರಸ್, ಮರ್ಸಿಡಿಸ್-AMG G63, ರೇಂಜ್ ರೋವರ್ ಮತ್ತು ಆಡಿ A6 ಕಾರುಗಳಿವೆ. ಇದೀಗ ಹೊಸದಾಗಿ ದುಬಾರಿ ಫೆರಾರಿ ಕಾರು ಸೇರಿಕೊಂಡಿದೆ.
ಫೆರಾರಿ 12 ಸಿಲಿಂಡ್ರಿ ಕಾರಿನ ವಿಶೇಷತೆ ಏನು?
* ಫೆರಾರಿ ಸಂಸ್ಥೆಯು ತನ್ನ ಐಕಾನಿಕ್ V12 ಇಂಜಿನ್ ಪರಂಪರೆಯನ್ನು ಮುಂದುವರಿಸುತ್ತಾ ಬಿಡುಗಡೆ ಮಾಡಿರುವ 'ಫೆರಾರಿ 12 ಸಿಲಿಂಡ್ರಿ' ಕಾರು ಆಟೋಮೊಬೈಲ್ ಲೋಕದ ಒಂದು ಅದ್ಭುತವಾಗಿದೆ. ಸುಮಾರು 12 ಕೋಟಿ ರೂಪಾಯಿಗಳ ಆಸುಪಾಸಿನಲ್ಲಿರುವ ಈ ಕಾರು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ.

* ಈ ಕಾರಿನ ಹೆಸರೇ ಸೂಚಿಸುವಂತೆ, ಇದು 6.5-ಲೀಟರ್ ಸಾಮರ್ಥ್ಯದ ನೈಸರ್ಗಿಕವಾಗಿ ಆಸ್ಪಿರೇಟೆಡ್ (Naturally Aspirated) V12 ಇಂಜಿನ್ ಹೊಂದಿದೆ. ಇದು ಯಾವುದೇ ಟರ್ಬೋಚಾರ್ಜರ್ ಇಲ್ಲದೆ 819 BHP ಶಕ್ತಿ ಮತ್ತು 678 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

* ವೇಗದ ವಿಷಯದಲ್ಲಿ ಈ ಫೆರಾರಿ ಬಗ್ಗೆ ಮಾತುನಾಡುವಂತೆಯೇ ಇಲ್ಲ. ಇದು ಕೇವಲ 2.9 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ತಲುಪಬಲ್ಲದು. ಹಾಗೆಯೇ ಇದರ ಗರಿಷ್ಠ ವೇಗ ಗಂಟೆಗೆ 340 ಕಿ.ಮೀ ಗಿಂತಲೂ ಹೆಚ್ಚಿದೆ.

* ಇದರ ವಿನ್ಯಾಸವು 1960ರ ದಶಕದ ಫೆರಾರಿ 365 GTB/4 'ಡೇಟೋನಾ' ಕಾರಿನಿಂದ ಸ್ಫೂರ್ತಿ ಪಡೆದಿದೆ. ಉದ್ದವಾದ ಬಾನೆಟ್ ಮತ್ತು ಮುಂಭಾಗದ ಕಪ್ಪು ಪಟ್ಟಿಯು ಹಳೆಯ ಕಾಲದ ಸೌಂದರ್ಯ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಶ್ರಣದಂತೆ ಕಾಣುತ್ತದೆ.

* ಕಾರಿನ ಹಿಂಭಾಗದಲ್ಲಿ ಎರಡು ಸಕ್ರಿಯ ಫ್ಲಾಪ್‌ಗಳನ್ನು (Active Flaps) ನೀಡಲಾಗಿದೆ. ಇವು ಹೆಚ್ಚಿನ ವೇಗದಲ್ಲಿ ಚಲಿಸುವಾಗ ಗಾಳಿಯ ಒತ್ತಡವನ್ನು ನಿಯಂತ್ರಿಸಿ, ಕಾರು ರಸ್ತೆಗೆ ಅಂಟಿಕೊಂಡಂತೆ ಸ್ಥಿರವಾಗಿ ಸಾಗಲು (Downforce) ಸಹಾಯ ಮಾಡುತ್ತವೆ.

* ಕಾರಿನ ಒಳಭಾಗದಲ್ಲಿ ಚಾಲಕ ಮತ್ತು ಪ್ರಯಾಣಿಕರಿಗೆ ಪ್ರತ್ಯೇಕ ಅನುಭವ ನೀಡಲು ಮೂರು ಸ್ಕ್ರೀನ್‌ಗಳನ್ನು ನೀಡಲಾಗಿದೆ. 10.25-ಇಂಚಿನ ಸೆಂಟ್ರಲ್ ಡಿಸ್‌ಪ್ಲೇ, 15.6-ಇಂಚಿನ ಡ್ರೈವರ್ ಡಿಸ್‌ಪ್ಲೇ ಮತ್ತು ಪ್ರಯಾಣಿಕರಿಗಾಗಿ 8.8-ಇಂಚಿನ ಪ್ರತ್ಯೇಕ ಸ್ಕ್ರೀನ್ ಇದೆ.

* ಈ ಕಾರಿನಲ್ಲಿ 'ಫೋರ್-ವ್ಹೀಲ್ ಇಂಡಿಪೆಂಡೆಂಟ್ ಸ್ಟೀರಿಂಗ್' ತಂತ್ರಜ್ಞಾನವಿದೆ. ಇದು ತಿರುವುಗಳಲ್ಲಿ ಕಾರನ್ನು ಅತ್ಯಂತ ನಿಖರವಾಗಿ ಮತ್ತು ಸುಲಭವಾಗಿ ನಿಯಂತ್ರಿಸಲು ಚಾಲಕನಿಗೆ ನೆರವಾಗುತ್ತದೆ. ಇದರಿಂದ ಕಾರಿನ ಹ್ಯಾಂಡ್ಲಿಂಗ್ ತುಂಬಾ ಸುಲಭವಾಗಿರುತ್ತದೆ ಮತ್ತು ಅದ್ಭುತವಾಗಿರುತ್ತದೆ.

ವಿಶ್ವಕಪ್​ನಲ್ಲಿ ಹಾರ್ದಿಕ್​ ಪ್ರದರ್ಶನ

ಅಂದಹಾಗೆ, ಟಿ20 ವಿಶ್ವಕಪ್‌ನಲ್ಲಿ ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಲ್‌ರೌಂಡ್ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಒಂಬತ್ತು ಪಂದ್ಯಗಳಲ್ಲಿ 160 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಗಳಿಸಿದರು. ಇದರಲ್ಲಿ ಎರಡು ಅರ್ಧಶತಕಗಳು ಸೇರಿವೆ. ಬೌಲಿಂಗ್‌ನಲ್ಲಿಯೂ ತಮ್ಮ ಪ್ರತಿಭೆಯನ್ನು ತೋರಿಸಿದ್ದ ಹಾರ್ದಿಕ್, 9 ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದರು.
ಆದಾಗ್ಯೂ, ಟಿ20 ವಿಶ್ವಕಪ್ ಗೆದ್ದ ನಂತರ ಭಾರತ ತಂಡದ ವಿಜಯೋತ್ಸವದ ಸಂದರ್ಭದಲ್ಲಿ, ಹಾರ್ದಿಕ್ ಪಾಂಡ್ಯ ರಾಷ್ಟ್ರೀಯ ಧ್ವಜ ಧರಿಸಿ, ಗೆಳತಿ ಮಿಹಿಕಾ ಶರ್ಮಾ ಅವರ ಕೆನ್ನೆಗೆ ಮುತ್ತಿಟ್ಟರು. ಹೀಗಾಗಿ, ಪುಣೆ ಮೂಲದ ವಾಜಿದ್ ಖಾನ್ ಎಂಬ ವಕೀಲರು ಪಾಂಡ್ಯ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net