ಕೇಂದ್ರ ಸರ್ಕಾರದ ಸುಂಕ ಏರಿಕೆಯ ನಿರ್ಧಾರದಿಂದಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ತಕ್ಷಣವೇ ದುಬಾರಿಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಆಭರಣಗಳ ಬೆಲೆಯ ಮೇಲೆ ಇದು ನೇರ ಪರಿಣಾಮ ಬೀರಿದೆ. ಎಂಸಿಎಕ್ಸ್ (MCX) ಮಾರುಕಟ್ಟೆಯಲ್ಲಿ ಬೆಳಗ್ಗೆ 9:59ರ ಸುಮಾರಿಗೆ ಚಿನ್ನ ಮತ್ತು ಬೆಳ್ಳಿ ಎರಡೂ ಶೇ. 6ಕ್ಕಿಂತ ಹೆಚ್ಚು ಏರಿಕೆ ಕಂಡು ಕ್ರಮವಾಗಿ 1,63,000 ರೂ. ಹಾಗೂ 2,96,600 ರೂ.ನಲ್ಲಿ ವಹಿವಾಟು ನಡೆಸುತ್ತಿದ್ದವು. ಸದ್ಯದ ಮಾಹಿತಿ ಪ್ರಕಾರ, ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ ಸುಮಾರು 15,475 ರೂ. ತಲುಪಿದ್ದರೆ, ಬೆಳ್ಳಿಯು ಪ್ರತಿ ಕೆಜಿಗೆ 2,78,000 ರೂ. ನಿಂದ 2,90,000 ರೂ. ಆಸುಪಾಸಿನಲ್ಲಿ ಮಾರಾಟವಾಗುತ್ತಿದೆ.