ಅಧಿವೇಶನ ಮುಗಿಯುತ್ತಿದ್ದಂತೆ ವಿಪಕ್ಷಗಳ ನಾಯಕರ ಜೊತೆ ಪ್ರಧಾನಿ ಮೋದಿ ಟೀ ಪಾರ್ಟಿ; ಪ್ರಿಯಾಂಕಾ ಸೇರಿ ಅನೇಕ ನಾಯಕರು ಭಾಗಿ | PM Modi

ಟೀ ಪಾರ್ಟಿ
ಟೀ ಪಾರ್ಟಿ
Published on
ನವದೆಹಲಿ: ಲೋಕಸಭೆ ಅಧಿವೇಶನ ಇಂದು(ಡಿ. 19) ಮುಕ್ತಾಯಗೊಂಡಿದ್ದು, ಉದ್ರಿಕ್ತ ಭಾಷಣ, ಆರೋಪ ಪ್ರತ್ಯಾರೋಪಗಳು, ಪ್ರತಿಭಟನೆಗಳಿಗೆ ತೆರೆ ಬಿದ್ದಿದೆ. ಜೊತೆಗೆ ಸ್ಪೀಕರ್ ಓಂ ಬಿರ್ಲಾ ಅವರು ಮಧ್ಯಾಹ್ನ ಚಹಾ ಕೂಟ ಆಯೋಜಿಸಿದ್ದು, ಅದರಲ್ಲಿ ಪ್ರಧಾನಿ ಮೋದಿ(PM Modi), ಪ್ರಿಯಾಂಕಾ ಗಾಂಧಿ ಸೇರಿ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಭಾಗವಹಿಸಿದ್ದರು.
ಪ್ರತಿ ಅಧಿವೇಶನ ಬಳಿಕ ಸ್ಪೀಕರ್ ಎಲ್ಲಾ ನಾಯಕರನ್ನು ಕರೆದು ಟೀ ಕೂಟ ಆಯೋಜಿಸುವುದು ಸಂಪ್ರದಾಯ. ನಾಯಕರ ನಡುವೆ ಸೌಹಾರ್ದತೆ ಮತ್ತು ಸದ್ಭಾವನೆಯ ವಾತಾವರಣವನ್ನು ತರಲು ಆಯೋಜಿಸಲಾಗುತ್ತಿತ್ತು. ಆದರೆ 2024ರ ಮಳೆಗಾಲದ ಅಧಿವೇಶನ ಬಳಿಕ ವಿಪಕ್ಷಗಳು ಈ ಪಾರ್ಟಿಯನ್ನು ಬಹಿಷ್ಕರಿಸಿದ್ದವು. ಸದನದಲ್ಲಿ ವಿಪಕ್ಷಗಳ ಸದಸ್ಯರಿಗೆ ಮಾತನಾಡಲು ಅವಕಾಶ ನೀಡಲಾಗ್ತಿಲ್ಲ ಎಂದು ಆರೋಪಿಸಿ ಸಭೆಯಿಂದ ದೂರ ಉಳಿದಿದ್ದವು.
ಆದರೆ ಈ ಬಾರಿ ವಿರೋಧ ಪಕ್ಷಗಳು ಮಸೂದೆಗಳನ್ನು ವಿರೋಧಿಸುತ್ತಲೇ ಇದ್ದರೂ, ಅಧಿವೇಶನದಲ್ಲಿ ಸಭಾಪತಿಗಳು ತುಲನಾತ್ಮಕವಾಗಿ ನ್ಯಾಯಯುತವಾಗಿದ್ದಾರೆಂದು ಭಾವಿಸಿವೆ ಎನ್ನಲಾಗಿದೆ. ಸಮನಾಗಿ ಎಲ್ಲರಿಗೂ ಮಾತನಾಡಲು ಅವಕಾಶ ನೀಡಿದ್ದಕ್ಕೆ ಸ್ಪೀಕರ್ ಆಯೋಜಿಸಿದ್ದ ಟೀ ಔತಣಕೂಟದಲ್ಲಿ ಭಾಗವಹಿಸಿವೆ. ಸುಮಾರು ಅರ್ಧ ಗಂಟೆಗಳ ಕಾಲ ಔತಣಕೂಟ ನಡೆದಿದೆ.
ಕುತೂಹಲಕಾರಿಯಾಗಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷದ ಸಂಸದರೊಂದಿಗೆ ಕಪ್ ಚಹಾ ಸೇವಿಸುತ್ತಾ ಸಭೆಯಲ್ಲಿ ಜೋಕ್ ಮಾಡುತ್ತಾ ಕ್ಷಣಗಳನ್ನು ಕಳೆದಿದ್ದಾರೆ. ಜೊತೆಗೆ ಹಲವು ವಿಪಕ್ಷಗಳ ಸಂಸದರನ್ನು ಹೊಗಳಿದ್ದಾರೆ. ಆರ್‌ಎಸ್‌ಪಿ ಸಂಸದ ಎನ್‌ಕೆ ಪ್ರೇಮಚಂದ್ರನ್ ಅವರನ್ನು ಹೊಗಳಿದ್ದು, ಅವರನ್ನು ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ಒಬ್ಬರು ಎಂದು ಕರೆದಿದ್ದಾರೆ ಎಂದು ವರದಿಗಳು ಉಲ್ಲೇಖಿಸಿವೆ.
ಈ ವೇಳೆ ವಿಪಕ್ಷಗಳ ಕೆಲವು ನಾಯಕರು ಅಧಿವೇಶನವೂ ಇನ್ನು ಹೆಚ್ಚಿನ ಸಮಯ ಇರಬೇಕಿತ್ತು ಎಂದು ವಾದಿಸಿದ್ದು, ಅದಕ್ಕೆ ಪ್ರಧಾನಿ ಮೋದಿ ನಿಮ್ಮ ಧ್ವನಿಯನ್ನು ಅಷ್ಟೊಂದು ಬಿಗಿಗೊಳಿಸಲು ನಾನು ಬಯಸಲಿಲ್ಲ ಎಂದು ತಮಾಷೆ ಮಾಡಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net