ಜಗತ್ತಿಗೆ ನಡುಕ ಹುಟ್ಟಿಸಿದ ಕಿಮ್ : ಲಾಂಗ್ ರೇಂಜ್ ಕ್ರೂಸ್ ಕ್ಷಿಪಣಿ ಉಡಾವಣೆ ಮಾಡಿ ಅಮೆರಿಕಾಕ್ಕೆ ನೇರ ಎಚ್ಚರಿಕೆ | cruise missile

ಉತ್ತರ ಕೊರಿಯಾ ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಪರೀಕ್ಷಿಸಿದೆ.
ಉತ್ತರ ಕೊರಿಯಾ ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಪರೀಕ್ಷಿಸಿದೆ.
Published on
ಪ್ಯೊಂಗ್ಯಾಂಗ್: ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಭಾನುವಾರ ದೀರ್ಘ-ಶ್ರೇಣಿಯ ಕಾರ್ಯತಂತ್ರದ ಕ್ರೂಸ್ ಕ್ಷಿಪಣಿಗಳ(cruise missile) ಉಡಾವಣೆಯನ್ನು ಮೇಲ್ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಇದು ಭದ್ರತಾ ಸವಾಲುಗಳನ್ನು ಎದುರಿಸಲು ಮತ್ತು ಪರಮಾಣು ಶಕ್ತಿಯ ಸಮಗ್ರತೆಯೊಂದಿಗೆ ಪ್ರತಿದಾಳಿ ಸಿದ್ಧತೆಯನ್ನು ದೃಢಪಡಿಸಿತು ಎಂದು ರಾಜ್ಯ ಮಾಧ್ಯಮ ಸೋಮವಾರ ವರದಿ ಮಾಡಿದೆ.
ಹಳದಿ ಸಮುದ್ರದ ಮೇಲೆ ಭಾನುವಾರ ನಡೆದ ಈ ಸಮರಾಭ್ಯಾಸದ ಮೇಲ್ವಿಚಾರಣೆಯನ್ನು ನಾಯಕ ಕಿಮ್ ಜಾಂಗ್ ಉನ್ ವಹಿಸಿದ್ದರು. ಅಲ್ಲದೆ, ತಮ್ಮ ದೇಶದ ಪರಮಾಣು ಶಸ್ತ್ರಾಸ್ತ್ರ ಪಡೆಗಳ ಅನಿಯಮಿತ ಮತ್ತು ನಿರಂತರ ಅಭಿವೃದ್ಧಿಯನ್ನು ಒತ್ತಾಯಿಸಿದ್ದಾರೆ ಎಂದು ಕೆಸಿಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕ್ರೂಸ್ ಕ್ಷಿಪಣಿಗಳು ಏಕೆ?

ಈ ಕ್ಷೀಪಣಿಗಳು ಊಹಿಸಬಹುದಾದ ಚಾಪದಲ್ಲಿ ಹಾರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಗಿಂತ ಭಿನ್ನವಾಗಿ, ಕಾರ್ಯತಂತ್ರದ ಕ್ರೂಸ್ ಕ್ಷಿಪಣಿಗಳು ಕಡಿಮೆ ಎತ್ತರದಲ್ಲಿ ಹಾರುತ್ತವೆ ಮತ್ತು ಹಾರಾಟದ ಮಧ್ಯದಲ್ಲಿಯೇ ಕುಶಲತೆಯಿಂದ ವರ್ತಿಸಬಲ್ಲವು ಎಂದು ತಿಳಿದು ಬಂದಿದೆ.
ದಕ್ಷಿಣ ಕೊರಿಯಾ ಮತ್ತು ಜಪಾನ್‌ನಲ್ಲಿರುವಂತೆ ರಾಡಾರ್ ಮತ್ತು ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿಗೆ ಇವುಗಳನ್ನು ಅಡ್ಡಗಟ್ಟಲು ಕಷ್ಟವಾಗುತ್ತದೆ. ಈ ಬಗ್ಗೆ ಮಾಹಿತಿ ನೀಡಿರುವ ಉತ್ತರ ಕೊರಿಯಾ ಇವುಗಳನ್ನು ಕಾರ್ಯತಂತ್ರದ ಎಂದು ಉಲ್ಲೇಖಿಸುತ್ತದೆ. ಇದು ಚಿಕ್ಕದಾದ ಪರಮಾಣು ಸಿಡಿತಲೆಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿವೆ.
ಉತ್ತರ ಕೊರಿಯಾದ ಈ ಕ್ಷಿಪಣಿಗಳ ಹಿಂದಿನ ಆವೃತ್ತಿಗಳು 2,000 ಕಿ.ಮೀ ವ್ಯಾಪ್ತಿಯನ್ನು ಪ್ರದರ್ಶಿಸಿವೆ.

ಅಂತರಾಷ್ಟ್ರೀಯ ಪ್ರತಿಕ್ರಿಯೆ

ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರ ತಂಡ (ಜೆಸಿಎಸ್) ಈ ಉಡಾವಣೆಗಳನ್ನು ಶಾಂತಿ ಮತ್ತು ಸ್ಥಿರತೆಯನ್ನು ಹಾಳುಮಾಡುವ ಕೃತ್ಯ ಎಂದು ಖಂಡಿಸಿತು. ಸ್ಥಳೀಯ ಸಮಯ ಸುಮಾರು ಬೆಳಿಗ್ಗೆ 8 ಗಂಟೆಗೆ ಸುನಾನ್ ಪ್ರದೇಶದಿಂದ ಬಹು ಕ್ಷಿಪಣಿಗಳು ಪತ್ತೆಯಾಗಿವೆ ಎಂದು ದೃಢಪಡಿಸಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಪಾನ್, ಈ ಕಡಿಮೆ ಹಾರುವ ಕ್ಷಿಪಣಿಗಳನ್ನು ಏಜಿಸ್-ವರ್ಗದ ರಾಡಾರ್ ರಕ್ಷಣೆಗಳನ್ನು ಬೈಪಾಸ್ ಮಾಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವುದರಿಂದ ಟೋಕಿಯೊಗೆ ಹೆಚ್ಚಿನ ಕಳವಳ ವ್ಯಕ್ತಪಡಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net