ಇಂಡಿಗೋ ಏರ್ಲೈನ್ಸ್ ಬಿಕ್ಕಟ್ಟಿನಿಂದ ಭಾರೀ ತೊಂದರೆಗೆ ಸಿಲುಕಿರುವ ಪ್ರಯಾಣಿಕರು, ತಮಗೆ ಇಂಥಾ ಪರಿಸ್ಥಿತಿ ತಂದಿಟ್ಟರಲ್ಲ ಎಂದು ಸಂಸ್ಥೆಗೆ ಛೀಮಾರಿ ಹಾಕುತ್ತಿದ್ದಾರೆ. ಈ ಮಧ್ಯೆ, ವಿಮಾನಯಾನ ಸಂಸ್ಥೆ ಈಗಾಗಲೇ ಭರವಸೆ ನೀಡಿದ್ದು, ಶೀಘ್ರವೇ ಪರಿಸ್ಥಿತಿ ಯಥಾಸ್ಥಿತಿಗೆ ಮರಳಲಿದೆ ಎಂದು ತಿಳಿಸಿದೆ. ಆದರೆ, ಡಿ.15ರವರೆಗೂ ಈ ಸಮಸ್ಯೆಯ ಬಿಸಿ ಕೊಂಚ ಕಾಡಲಿದೆ ಎಂಬುದನ್ನೂ ಒತ್ತಿ ಹೇಳಿದೆ. ಇತ್ತೀಚಿನ ವರದಿ ಪ್ರಕಾರ, ಡಿ.07ರ ಹೊತ್ತಿಗೆ, ದೇಶಾದ್ಯಂತ 2,000ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಲಾಗಿದೆ.