ಉತ್ತರ ಪ್ರದೇಶದ ಲಖನೌದ ನಿರಾಲ ನಗರದ ಸರಸ್ವತಿ ಶಿಶು ಮಂದಿರದಲ್ಲಿ ಮಂಗಳವಾರ(ಫೆ. 17) ನಡೆದ ಸಾಮಾಜಿಕ ಸಾಮರಸ್ಯ ಸಭೆಯಲ್ಲಿ ಮಾತನಾಡಿರುವ ಅವರು, ಹಿಂದೂ ಸಮಾಜವು ಹೆಚ್ಚು ಜಾಗರೂಕರಾಗಿರಬೇಕು. ಹಿಂದೂ ಸಮುದಾಯವು ಹೆಚ್ಚು ಸಂಘಟಿತ ಮತ್ತು ಸಬಲೀಕರಣಗೊಳ್ಳುವ ಅಗತ್ಯವಿದೆ. ಸಮುದಾಯಕ್ಕೆ ಯಾವುದೇ ಬೆದರಿಕೆ ಇಲ್ಲದಿದ್ದರೂ, ಅದು ಜಾಗರೂಕರಾಗಿರಬೇಕು ಎಂದು ಭಾಗವತ್ ಪ್ರತಿಪಾದಿಸಿದ್ದಾರೆ.