ಇದೇ ವೇಳೆ, ಸೆಪ್ಟೆಂಬರ್ 19 ರಂದು ಇಂದೋರ್‌ನಲ್ಲಿ ನಡೆಯಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಛಾತ್ರೋಂ ಕೀ ಗೂಂಜ್ ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮವನ್ನೂ ಠಾಕೂರ್ ವ್ಯಂಗ್ಯವಾಡಿದ್ದು, ರಾಹುಲ್ ಗಾಂಧಿ ಅವರು ದೇಶವನ್ನು ಅವಮಾನಿಸುವುದನ್ನು, ಸನಾತನ ಧರ್ಮವನ್ನು ಶಪಿಸುವುದನ್ನು ಮತ್ತು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವನ್ನು ಎಂದಿಗೆ ನಿಲ್ಲಿಸುತ್ತಾರೋ, ಅಂದಿನಿಂದ ದೇಶದ ಯುವಕರು ಅವರನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸುತ್ತಾರೆ ಎಂದಿದ್ದಾರೆ.