ಟಿಎಂಸಿ ತನ್ನ ಮೂಲ ತತ್ವವಾದ ‘ಮಾ, ಮಾತಿ, ಮಾನುಷ್’ (ತಾಯಿ, ಮಣ್ಣು, ಜನರು) ಎಂಬ ತತ್ವದಿಂದ ದೂರ ಸರಿದಿದ್ದು, ಮಮತಾ ಸೇರಿದಂತೆ ಉನ್ನತ ನಾಯಕರು ಯಾರಿಗೂ ಸಿಗುತ್ತಿಲ್ಲ ಎಂದು ಘೋಷ್ ಆರೋಪಿಸುತ್ತಿದ್ದಾರೆ. ಪ್ರಸ್ತುತ, ಪಕ್ಷದ ವಿರುದ್ಧ ಸಾರ್ವಜನಿಕವಾಗಿ ಟೀಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಟಿಎಂಸಿ ಐದು ಸದಸ್ಯರ ಸಮಿತಿಯನ್ನು ರಚಿಸಿದೆಯಾದರೂ, ಭಿನ್ನಮತದ ಜ್ವಾಲೆಯನ್ನು ತಣಿಸುವುದು ಸುಲಭದ ಮಾತಲ್ಲ(ಏಜೆನ್ಸೀಸ್).