ಬೆಚ್ಚಿಬಿದ್ದ ಅಮೆರಿಕ, ಇಸ್ರೇಲ್: ಜಗತ್ತನ್ನೇ ಸ್ಮಶಾನ ಮಾಡಬಲ್ಲದೇ ಈ ಅಶುದ್ಧ ಅಸ್ತ್ರ! ಇರಾನ್ ಬಳಿ ಇರುವ ಕಿಲ್ಲರ್ ಬಾಂಬ್​ನ ಶಕ್ತಿ ಎಷ್ಟು..? Dirty Bomb

ಬೆಚ್ಚಿಬಿದ್ದ ಅಮೆರಿಕ, ಇಸ್ರೇಲ್: ಜಗತ್ತನ್ನೇ ಸ್ಮಶಾನ ಮಾಡಬಲ್ಲದೇ ಈ ಅಶುದ್ಧ ಅಸ್ತ್ರ! ಇರಾನ್ ಬಳಿ ಇರುವ ಕಿಲ್ಲರ್ ಬಾಂಬ್​ನ ಶಕ್ತಿ ಎಷ್ಟು..?
ಬೆಚ್ಚಿಬಿದ್ದ ಅಮೆರಿಕ, ಇಸ್ರೇಲ್: ಜಗತ್ತನ್ನೇ ಸ್ಮಶಾನ ಮಾಡಬಲ್ಲದೇ ಈ ಅಶುದ್ಧ ಅಸ್ತ್ರ! ಇರಾನ್ ಬಳಿ ಇರುವ ಕಿಲ್ಲರ್ ಬಾಂಬ್​ನ ಶಕ್ತಿ ಎಷ್ಟು..?
Published on
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಹೊತ್ತಿ ಉರಿಯುತ್ತಿರುವಾಗಲೇ, ಇರಾನ್‌ನ ಪರಮಾಣು ಚಟುವಟಿಕೆಗಳು ಇಡೀ ವಿಶ್ವದ ನಿದ್ದೆಗೆಡಿಸಿವೆ. ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ನೀಡಿರುವ ಇತ್ತೀಚಿನ ವರದಿಯ ಪ್ರಕಾರ, ಇರಾನ್ ಈಗ 440.9 ಕೆಜಿ ಯಷ್ಟು 60ರಷ್ಟು ಶುದ್ಧೀಕರಿಸಿದ ಯುರೇನಿಯಂ(Dirty Bomb) ಅನ್ನು ಹೊಂದಿದೆ. ಇದು ಅಣ್ವಸ್ತ್ರ ತಯಾರಿಕೆಗೆ ಬೇಕಾದ ಶೇ. 90 ರಷ್ಟು ಶುದ್ಧತೆಗಿಂತ ಸ್ವಲ್ಪ ಕಡಿಮೆ ಇದ್ದರೂ, ತಾಂತ್ರಿಕವಾಗಿ ಇರಾನ್ ಯಾವುದೇ ಕ್ಷಣದಲ್ಲಿ ಅಣ್ವಸ್ತ್ರ ತಯಾರಿಸುವ ಹಂತಕ್ಕೆ ತಲುಪಿದೆ ಎಂಬುದು ತಜ್ಞರ ಆತಂಕ ವ್ಯಕ್ತಪಡಿಸಿದ್ದಾರೆ.

ಏನಿದು ಡರ್ಟಿ ಬಾಂಬ್..?

ಸಾಮಾನ್ಯವಾಗಿ ಎಲ್ಲರೂ ಅಣುಬಾಂಬ್ ಮತ್ತು ಡರ್ಟಿ ಬಾಂಬ್ ಎರಡೂ ಒಂದೇ ಎಂದು ಭಾವಿಸುತ್ತಾರೆ. ಆದರೆ ಇವುಗಳ ನಡುವೆ ಆಕಾಶ ಭೂಮಿಯ ವ್ಯತ್ಯಾಸವಿದೆ.
ಡರ್ಟಿ ಬಾಂಬ್: ಇದು ಸಾಂಪ್ರದಾಯಿಕ ಸ್ಫೋಟಕಗಳು ಮತ್ತು ವಿಕಿರಣಶೀಲ ವಸ್ತುಗಳ ಮಿಶ್ರಣವಾಗಿದ್ದು. ಇದರ ಉದ್ದೇಶ ಅಣುಬಾಂಬ್‌ನಂತೆ ಲಕ್ಷಾಂತರ ಜನರನ್ನು ಕೊಲ್ಲುವುದಲ್ಲ, ಬದಲಾಗಿ ಸ್ಫೋಟದ ಮೂಲಕ ವಿಕಿರಣವನ್ನು ಹರಡಿ ಒಂದು ಪ್ರದೇಶವನ್ನು ದೀರ್ಘಕಾಲದವರೆಗೆ ವಾಸಕ್ಕೆ ಯೋಗ್ಯವಲ್ಲದಂತೆ ಮಾಡುವುದು.
ಪರಮಾಣು ಬಾಂಬ್: ಇದು ಪರಮಾಣು ವಿದಳನ ಕ್ರಿಯೆಯ ಮೂಲಕ ಮಿಲಿಯನ್ ಪಟ್ಟು ಹೆಚ್ಚಿನ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ಇಡೀ ನಗರವನ್ನೇ ಕ್ಷಣಮಾತ್ರದಲ್ಲಿ ಸುಟ್ಟು ಭಸ್ಮ ಮಾಡುತ್ತದೆ.

ಡರ್ಟಿ ಬಾಂಬ್ ಯಾಕೆ ಅಪಾಯಕಾರಿ..?

ಡರ್ಟಿ ಬಾಂಬ್ ಅನ್ನು ಸಾಮೂಹಿಕ ಅಸ್ತವ್ಯಸ್ತಗೊಳಿಸುವ ಆಯುಧ ಎಂದು ಕರೆಯಲಾಗುತ್ತದೆ. ಇದರ ಸ್ಫೋಟದಿಂದ ತಕ್ಷಣದ ಸಾವುನೋವುಗಳು ಕಡಿಮೆ ಇದ್ದರೂ, ಇದು ಸೃಷ್ಟಿಸುವ ಮಾನಸಿಕ ಭೀತಿ ಮತ್ತು ಆರ್ಥಿಕ ನಷ್ಟ ಅಪಾರವಾಗಿದೆ. ಒಂದು ನಗರದ ಮಧ್ಯಭಾಗದಲ್ಲಿ ಇದು ಸ್ಫೋಟಗೊಂಡರೆ, ಆ ಪ್ರದೇಶವನ್ನು ವಿಕಿರಣ ಮುಕ್ತಗೊಳಿಸಲು ಬಿಲಿಯನ್ ಗಟ್ಟಲೆ ಡಾಲರ್ ಖರ್ಚಾಗುತ್ತದೆ ಮತ್ತು ವರ್ಷಗಟ್ಟಲೆ ಆ ಪ್ರದೇಶವನ್ನು ಸೀಲ್ ಮಾಡಬೇಕಾಗುತ್ತದೆ. ಡ್ರೋನ್‌ಗಳು ಅಥವಾ ಕ್ಷಿಪಣಿಗಳ ಮೂಲಕ ಇವುಗಳನ್ನು ಸುಲಭವಾಗಿ ಸಾಗಿಸಬಹುದು ಎಂಬುದು ಮತ್ತೊಂದು ಆತಂಕಕಾರಿ ವಿಷಯವಾಗಿದೆ.

ಇರಾನ್ ಇದನ್ನು ಬಳಸಲಿದೆಯೇ..?

ಇರಾನ್ ಅಣ್ವಸ್ತ್ರ ಸಜ್ಜಿತ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಡರ್ಟಿ ಬಾಂಬ್ ಬಳಸುವ ಸಾಧ್ಯತೆ ತೀರಾ ಕಡಿಮೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಇಂತಹ ದಾಳಿಗೆ ಅಮೆರಿಕ ಭೀಕರವಾದ ಪ್ರತಿ-ದಾಳಿಯನ್ನು ನಡೆಸುತ್ತದೆ ಎಂಬುದು ಇರಾನ್‌ಗೆ ತಿಳಿದಿದೆ. ಆದರೆ, ಇರಾನ್ ಬಳಿ ಇರುವ ಯುರೇನಿಯಂ ದಾಸ್ತಾನು ಇಸ್ರೇಲ್ ಮೇಲೆ ಒತ್ತಡ ಹೇರಲು ಪ್ರಬಲ ಅಸ್ತ್ರವಾಗಿದೆ.

ಟ್ರಂಪ್‌ರ ಟ್ರೂತ್ ಸೋಶಿಯಲ್ ಸಂದೇಶ: ಯುದ್ಧದ ಬದಲಿಗೆ ಸಂಧಾನ..?

ಈ ಬಗ್ಗೆ ತಮ್ಮ ಟ್ರೂತ್ ಸೋಶಿಯಲ್' ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಕಳೆದ ಎರಡು ದಿನಗಳಿಂದ ಇರಾನ್ ಜೊತೆ ಅತ್ಯಂತ ಆಳವಾದ ಮತ್ತು ರಚನಾತ್ಮಕ ಚರ್ಚೆಗಳು ನಡೆದಿವೆ. ಈ ಮಾತುಕತೆಗಳ ಸಕಾರಾತ್ಮಕ ಧೋರಣೆಯನ್ನು ಗಮನಿಸಿ, ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲಾ ದಾಳಿಗಳನ್ನು 5 ದಿನಗಳ ಕಾಲ ಮುಂದೂಡುವಂತೆ ನಾನು ಯುದ್ಧ ಇಲಾಖೆಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಈ ಮಾತುಕತೆಗಳು ವಾರದ ಪೂರ್ತಿ ಮುಂದುವರಿಯಲಿವೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಟ್ರಂಪ್ ಎಚ್ಚರಿಕೆ ಮತ್ತು ಹಾರ್ಮುಜ್ ಜಲಸಂಧಿ ಬಂದ್ ಭೀತಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ನೀಡಿರುವ ಗಡುವಿನಿಂದಾಗಿ ಇರಾನ್ ಕಂಗೆಟ್ಟಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಜಗತ್ತಿನ ಪ್ರಮುಖ ತೈಲ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಬಂದ್ ಮಾಡುವುದಾಗಿ ಬೆದರಿಕೆ ಹಾಕಿದೆ.
ಒಂದು ವೇಳೆ ಈ ಜಲಸಂಧಿ ಬಂದ್ ಆದರೆ ಜಾಗತಿಕವಾಗಿ ತೈಲ ಪೂರೈಕೆ ಸ್ಥಗಿತಗೊಂಡು ಪೆಟ್ರೋಲ್ ಬೆಲೆ ಮುಗಿಲ ಮುಟ್ಟಲಿದೆ. ಇದು ಕೇವಲ ಯುದ್ಧವಲ್ಲ, ಜಾಗತಿಕ ಆರ್ಥಿಕತೆಯ ಮೇಲೆ ನಡೆಯಲಿರುವ ಅತಿದೊಡ್ಡ ಪ್ರಹಾರ ಎನ್ನಲಾಗುತ್ತಿದೆ. ಇಸ್ರೇಲ್‌ನ ಪ್ರಧಾನಿ ನೆತನ್ಯಾಹು ಇರಾನ್‌ನ ಕ್ಷಿಪಣಿ ಮತ್ತು ಪರಮಾಣು ಸಾಮರ್ಥ್ಯವನ್ನು ಕುಂಠಿತಗೊಳಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಘೋಷಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net