ಚೆನ್ನೈ: ತಮಿಳುನಾಡು ಸಚಿವ ಕೆ ಎನ್ ನೆಹರು ಪುತ್ರ, ಡಿಎಂಕೆ ಸಂಸದ ಅರುಣ್ ನೆಹರು ದೆಹಲಿಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ರನ್ನು ಭೇಟಿಯಾಗಿದ್ದು, ಇತ್ತ ಜಾರಿ ನಿರ್ದೇಶನಾಲಯ ಸಚಿವ ನೆಹರುಗೆ ಸಂಬಂಧಿಸಿದ 1,020 ಕೋಟಿ ರೂ.ಗಳ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಹಿತಿ ಕೋರಿದ ಕೆಲವೇ ದಿನಗಳಲ್ಲಿ ಈ ಭೇಟಿ ನಡೆದಿರುವುದು ರಾಜಕೀಯ ವಲಯದಲ್ಲಿ ಹೊಸದೊಂದು ಚರ್ಚೆ ಹುಟ್ಟು ಹಾಕಿದೆ.