ಕಾಣೆಯಾದ ಜಾನುವಾರು ಹುಡುಕಿ ಕಾಡಿಗೆ ಹೊರಟವರ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಕುಟುಂಬಸ್ಥರು, ಹೋರಾಟಗಾರರು ಹೇಳುತ್ತಿದ್ದರೆ, ಅರಣ್ಯ ಇಲಾಖೆ ಕಳ್ಳ ಬೇಟೆ ವಿರುದ್ಧ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಈ ಘಟನೆ ನಡೆದಿದೆ. ಕಳ್ಳಬೇಟೆಗಾರರಿಗೆ ಶರಣಾಗುವಂತೆ ಮನವಿ ಮಾಡಿಕೊಂಡರು ನಾಡ ಬಂದೂಕಿನಿಂದ ದಾಳಿ ನಡೆಸಿದರು. ಹೀಗಾಗಿ ಅರಣ್ಯ ಇಲಾಖೆ ಎನ್ಕೌಂಟರ್ ನಡೆಸಿದೆ ಎಂದು ಸಮರ್ಥಿಸಿಕೊಂಡಿದೆ. ಮುಂಗಾರು ಕಲಾಪದಲ್ಲಿಯೂ ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ, (ಏಜೆನ್ಸೀಸ್).