ಈಗ ಪಕ್ಷ ಬದಲಾಯಿಸುತ್ತಿರುವವರೆಲ್ಲರೂ ಎನ್‌ಡಿಎ ವಿರುದ್ಧವಾಗಿ, ಎಂವಿಎ ಮತ್ತು ಇಂಡಿಯಾ ಮೈತ್ರಿಕೂಟದಡಿ ಗೆಲುವು ಸಾಧಿಸಿದ್ದಾರೆ. ಇವರೆಲ್ಲರಿಗೂ ಚುನಾವಣೆಯಲ್ಲಿ ಶಿವಸೇನೆ(ಯುಬಿಟಿ), ಕಾಂಗ್ರೆಸ್, ಎನ್ಸಿಪಿ(ಎಸ್ಪಿ) ಪಕ್ಷಗಳ ನಾಯಕರು ಪ್ರಚಾರ ಮಾಡಿದ್ದರು. ಈಗ ಸೈದ್ಧಾಂತಿಕ ವಾದಗಳ ಮೂಲಕ ತಮ್ಮ ಪಕ್ಷಾಂತರವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.