2019 ರಿಂದ ಸತತ ಮೂರು ಚುನಾವಣೆಗಳನ್ನು ಗೆದ್ದು ಬೀಗುತ್ತಿದ್ದ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟವನ್ನು (SPA) ಸಿಎಂ ವಿಜಯ್ ಈಗ ಸಂಪೂರ್ಣವಾಗಿ ಮುರಿದು ಚೂರಾಗಿಸಿದ್ದಾರೆ. ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ, ಐಯುಎಂಎಲ್, ವಿಸಿಕೆ ಮತ್ತು ಎಂಡಿಎಂಕೆ ಪಕ್ಷಗಳ ಶಾಸಕರಿಗೆ ತಮ್ಮ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಈ ಮೂಲಕ ಮಿತ್ರಪಕ್ಷಗಳು ತಮ್ಮನ್ನು ಬಿಟ್ಟು ಮರಳಿ ಡಿಎಂಕೆ ಕಡೆ ನಡೆಯದಂತೆ ಜಾಗರೂಕತೆಯನ್ನು ವಹಿಸಿದ್ದಾರೆ ಎನ್ನಬಹುದು (ಏಜೆನ್ಸೀಸ್).