ಸಿನಿಮಾ ರೀತಿ ಪಂಚ್ ಡೈಲಾಗ್ ಬೇಡ; ಭ್ರಷ್ಟಾಚಾರದ ಕಡತ ತೆರೆಯಲು ಜ್ಯೋತಿಷಿ ಸಮಯ ನೀಡಿಲ್ವಾ?: ಸಿಎಂ ವಿಜಯ್​​ಗೆ ಉದಯನಿಧಿ ಟಾಂಗ್ | Udhayanidhi

ಉದಯನಿಧಿ ಸ್ಟಾಲಿನ್ ಮತ್ತು ಸಿಎಂ ವಿಜಯ್
ಉದಯನಿಧಿ ಸ್ಟಾಲಿನ್ ಮತ್ತು ಸಿಎಂ ವಿಜಯ್
Published on
ಚೆನ್ನೈ: ಹಿಂದಿನ ಡಿಎಂಕೆ ಸರ್ಕಾರಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಕಡತಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗ ಪಡಿಸುತ್ತೇನೆ ಎಂಬ ಸಿಎಂ ವಿಜಯ್ ಹೇಳಿಕೆಗೆ ಶುಕ್ರವಾರ(ಆ. 21) ಟಾಂಗ್ ನೀಡಿರುವ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್(Udhayanidhi Stalin), ಸಿನಿಮಾಗಳಲ್ಲಿರುವಂತೆ ವಿಧಾನಸಭೆಯಲ್ಲಿ ಪಂಚ್ ಡೈಲಾಗ್‌ಗಳನ್ನು ನೀಡಬೇಡಿ, ಅದನ್ನು ಬಹಿರಂಗಪಡಿಸಿ ಎಂದು ಸವಾಲು ಹಾಕಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಉದಯನಿಧಿ, ರ್ಕಾರದ ಬಳಿ ತನ್ನ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿಲ್ಲ. ಒಂದು ವೇಳೆ ಭ್ರಷ್ಟಾಚಾರದ ದೃಢವಾದ ಪುರಾವೆಗಳಿದ್ದರೆ, ತಕ್ಷಣವೇ ಫೈಲ್‌ಗಳನ್ನು ತೆರೆದು ಕ್ರಮ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ. ಸಿಎಂ ಫೈಲ್‌ಗಳನ್ನು ಬಿಡುಗಡೆ ಮಾಡಲು ಏಕೆ ಹಿಂಜರಿಯುತ್ತಾರೆ? ಅವರು ತಮ್ಮ ಜ್ಯೋತಿಷಿ ದಿನಾಂಕವನ್ನು ನಿಗದಿಪಡಿಸಲು ಕಾಯುತ್ತಿದ್ದಾರೆಯೇ? ಎಂದು ಟಾಂಗ್ ನೀಡಿದ್ದಾರೆ.
ಉದಯನಿಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಸಚಿವ ರಾಜ್ ಮೋಹನ್, ಸಿಎಂ ಪಾರದರ್ಶಕತೆಗೆ ಬದ್ಧರಾಗಿದ್ದಾರೆ ಮತ್ತು ಭ್ರಷ್ಟಾಚಾರದ ಆರೋಪದ ಕಡತಗಳನ್ನು "ಸೂಕ್ತ ಸಮಯದಲ್ಲಿ ಸಾರ್ವಜನಿಕಗೊಳಿಸುತ್ತಾರೆ ಎಂದರು. ಈ ವೇಳೆ ಟಿವಿಕೆ ಮತ್ತು ಡಿಎಂಕೆ ಶಾಸಕರು ನಡುವೆ ವಾಗ್ವಾದ ನಡೆದಿದ್ದು, ಕಲಾಪವನ್ನು ಮುಂದೂಡಲಾಗಿದೆ.
ಬುಧವಾರ ಸದನದಲ್ಲಿ ಮಾತನಾಡಿದ್ದ ವಿಜಯ್ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಮೂರು ಇಲಾಖೆಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. ಸೂಕ್ತ ಸಮಯದಲ್ಲಿ ಅವುಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net