ಇನ್ನೂ ಪ್ರತ್ಯೇಕವಾಗಿ ಪಂಜಾಬ್ ಪೊಲೀಸರು ಸಹ, ವೆಬ್ ಸರಣಿಯನ್ನು ನಿರ್ಬಂಧಿಸುವಂತೆ ಕೋರಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ. ಸೈಬರ್ ಅಪರಾಧ ವಿಭಾಗದ ವಿಶೇಷ ಡಿಜಿ ವಿ ನೀರಜಾ ಅವರು ಪತ್ರ ಬರೆದಿದ್ದು, ಈ ಸರಣಿ ಸಂಘಟಿತ ಅಪರಾಧವನ್ನು ವೈಭವೀಕರಿಸಬಹುದು ಮತ್ತು ಸರಳಗೊಳಿಸಬಹುದು. ಸಾರ್ವಜನಿಕ ಸುವ್ಯವಸ್ಥೆಯನ್ನು ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.