ಮುಂದುವರೆದ ಟಿಎಂಸಿಯಲ್ಲಿ ಬಿಕ್ಕಟ್ಟು; ಹೆಚ್ಚಾಗುತ್ತಿದೆ ಬಂಡಾಯ ಸಂಸದರ ಸಂಖ್ಯೆ: ಮಮತಾ ಟೀಂನಿಂದ ಮತ್ತಿಬ್ಬರು ಸಂಸದರು ಔಟ್ | TMC

ಮಮತಾ ಬ್ಯಾನರ್ಜಿ ಮತ್ತು ಕಾಕೋಲಿ ಘೋಷ್ ದಸ್ತಿದಾರ್
ಮಮತಾ ಬ್ಯಾನರ್ಜಿ ಮತ್ತು ಕಾಕೋಲಿ ಘೋಷ್ ದಸ್ತಿದಾರ್
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಸುಮಾರು 15 ವರ್ಷಗಳ ಕಾಲ ಆಡಳಿತ ನಡೆಸಿದ ತೃಣಮೂಲ ಕಾಂಗ್ರೆಸ್​ನಲ್ಲಿ(TMC) ಬಿಕ್ಕಟ್ಟು ಮುಂದುವರೆದಿದ್ದು, ಪಕ್ಷ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಕೈತಪ್ಪುವ ಸಾಧ್ಯತೆಯಿದ್ದು, ಬಂಡಾಯ ಸಂಸದರ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿದೆ.
ಮಮತಾ ಬ್ಯಾನರ್ಜಿ ನಾಯಕತ್ವದ ವಿರುದ್ಧ ಸಿಡಿದೆದ್ದು ತೃಣಮೂಲ ಕಾಂಗ್ರೆಸ್ ಅನ್ನು ವಿಭಜಿಸುವ ಬೆದರಿಕೆ ಹಾಕುತ್ತಿರುವ ಬಂಡಾಯ ಸಂಸದರ ಗುಂಪು ಭಾನುವಾರ(ಜೂ. 14) ನಮಗೆ 22 ಸಂಸದರ ಬೆಂಬಲವಿದೆ ಎಂದು ಹೇಳಿಕೊಂಡಿದೆ. ಈವರೆಗೂ ಆ ಗುಂಪಿನ ಸದಸ್ಯರ ಸಂಖ್ಯೆ 20 ಆಗಿತ್ತು.
ಕೋಲ್ಕತ್ತಾದಲ್ಲಿ ಬಂಡಾಯ ಸಂಸದರ ನೇತೃತ್ವ ವಹಿಸಿಕೊಂಡಿರುವ ಕಾಕೋಲಿ ಘೋಷ್ ದಸ್ತಿದಾರ್ ಮಾತನಾಡಿದ್ದು, ಪರಿಸ್ಥಿತಿಯ ಬಗ್ಗೆ ಇನ್ನು ಹಲವರೊಂದಿಗೆ ಮಾತನಾಡಿದ್ದೇವೆ. ಇನ್ನೂ ಒಬ್ಬರು ಅಥವಾ ಇಬ್ಬರು ನಮ್ಮೊಂದಿಗೆ ಸೇರುತ್ತಾರೆ. ಮೊದಲು, ನಾನು 20 ಎಂದು ಹೇಳಿದ್ದೆ, ಈಗ ಅದು 22 ಆಗಿದೆ. ಎಲ್ಲರ ಅಭಿಪ್ರಾಯವನ್ನು ಕೇಳಲಾಗುತ್ತದೆ ಎಂದಿದ್ದಾರೆ.
ಹೊಸದಾಗಿ ಬೆಂಬಲಿಸುವ ಇಬ್ಬರು ಹೊಸ ಸಂಸದರ ಹೆಸರನ್ನು ಈಗಲೇ ಹೇಳಲ್ಲ. ಅವರು ಅಧಿಕೃತವಾಗಿ ನಮ್ಮ ಗುಂಪು ಸೇರಿದ ಬಳಿಕ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೂ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ನಮ್ಮನ್ನು ಪ್ರತ್ಯೇಕವಾಗಿದ್ದು, ಸಂಸತ್​ನಲ್ಲಿ ನಮಗೆ ಪ್ರತ್ಯೇಕವಾಗಿ ಕೂರಿಸಬೇಕು. ನಾವು ಎನ್​ಡಿಎಗೆ ಬೆಂಬಲ ಕೊಡುತ್ತೇವೆ ಎಂದು ಲೋಕಸಭೆ ಸ್ಪೀಕರ್​ಗೆ ಪತ್ರ ಬರೆದಿದ್ದಾರೆ. ನಾಳೆ ಎಲ್ಲಾ ಬಂಡಾಯ ಸಂಸದರು ಸ್ಪೀಕರ್ ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ಸ್ಪೀಕರ್ ಅವರೊಂದಿಗಿನ ಸಭೆಗೂ ಮುನ್ನ, ನಾಲ್ವರು ಬಂಡಾಯ ಸಂಸದರಾದ ಶತಾಬ್ದಿ ರಾಯ್, ಮಾಲಾ ರಾಯ್, ಪ್ರಸೂನ್ ಬ್ಯಾನರ್ಜಿ ಮತ್ತು ಸಾಯೋನಿ ಘೋಷ್ ಇಂದು ದೆಹಲಿಯಲ್ಲಿರುವ ಬಿಜೆಪಿ ಸಂಸದ ಭೂಪೇಂದ್ರ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಟಿಎಂಸಿಯ ಆರು ಬಾರಿ ಸಂಸದ ಸುದೀಪ್ ಬಂಡೋಪಾಧ್ಯಾಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ.
ಇನ್ನೂ ಬಂಡಾಯ ಎದ್ದಿರುವ ಹಲವಾರು ಸಂಸದರು ನಾಯಕತ್ವವನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದ್ದು, ಸುದೀಪ್ಬಂ ಡೋಪಾಧ್ಯಾಯ ಅವರು ಅಧಿಕೃತವಾಗಿ ಟಿಎಂಸಿಯಿಂದ ಹೊರಬಂದ್ರೆ, ಅವರನ್ನೇ ನಾಯಕರನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net