ತಮಿಳುನಾಡಿನಲ್ಲಿ ದಳಪತಿ ವಿಜಯ್ ಟಿವಿಕೆ ಎಂಬ ಪಕ್ಷ ಕಟ್ಟಿ ದ್ರಾವಿಡ ಪಕ್ಷಗಳ ಕೋಟೆಯನ್ನು ಭೇದಿಸಿ ಅಧಿಕಾರಕ್ಕೇರಿದ್ದು, ಇಲ್ಲಿಯವರೆಗೂ ಅಲ್ಲಿ ನಡೆದುಕೊಂಡು ಬರುತ್ತಿದ್ದ ದ್ರಾವಿಡ ರಾಜಕಾರಣವನ್ನು ಬದಲಾಯಿಸಿದ್ದಾರೆ. ಆರಂಭದಲ್ಲಿ ವಿಜಯ್ ಸಮ್ಮಿಶ್ರ ಸರ್ಕಾರಕ್ಕೆ ಡಿಎಂಕೆ ಮೈತ್ರಿಕೂಟದಲ್ಲಿದ್ದ ಕಾಂಗ್ರೆಸ್, ಎಡಪಕ್ಷಗಳು, ವಿಸಿಕೆ ಹಾಗೂ ಮುಸ್ಲಿಂ ಲೀಗ್ ಪಕ್ಷಗಳು ಬೆಂಬಲಿಸಿದವು. ಕೊನೆಯದಾಗಿ ಇಂದು ಕೂಟದ ಪ್ರಬಲ ಮತ್ತು ಏಕೈಕ ಪಕ್ಷವಾಗಿದ್ದ ಎಂಡಿಎಂಕೆ ಕೂಡ ಹೊರ ಬಂದಿದ್ದು, ಈಗ ಡಿಎಂಕೆ ಏಕಾಂಗಿಯಾಗಿ ಟಿವಿಕೆ ವಿರುದ್ಧ ಹೋರಾಟ ಮಾಡಬೇಕಿದೆ.