ಲೇಹ್ನಲ್ಲಿ ಆರ್ಮಿ ಹೆಲಿಕಾಪ್ಟರ್ ಪತನ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿ ಸೆಲ್ಫಿ ತೆಗೆದುಕೊಂಡ ಮೂವರು ಅಧಿಕಾರಿಗಳು! | Army helicopter
ಘಟನೆಯ ಸ್ಥಳ
Published on:
Copied
Follow Us
ನವದೆಹಲಿ: ಲಡಾಖ್ನ ಲೇಹ್ ಬಳಿಯ ಪರ್ವತ ಟ್ಯಾಂಗ್ಸ್ಟೆ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್(Army helicopter) ಪತನಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಮೂವರು ಸೇನಾಧಿಕಾರಿಗಳು ಪಾರಾಗಿದ್ದು, ಪತನವಾದ ಹೆಲಿಕಾಪ್ಟರ್ ಅವಶೇಷಗಳ ಮುಂದೆ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ಬುಧವಾರ(ಮೇ 20) ಈ ಘಟನೆ ನಡೆದಿದೆ. ಚೀತಾ ಎಂಬ ಹೆಲಿಕಾಪ್ಟರ್ ಒಬ್ಬ ಲೆಫ್ಟಿನೆಂಟ್ ಕರ್ನಲ್ ಮತ್ತು ಇಬ್ಬರು ಮೇಜರ್ಗಳನ್ನು ಹೊತ್ತೊಯ್ಯುತ್ತಿತ್ತು ಎನ್ನಲಾಗಿದೆ. ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಸಿಂಗಲ್-ಎಂಜಿನ್ ಹೆಲಿಕಾಪ್ಟರ್ ಅನ್ನು ಚಲಾಯಿಸುತ್ತಿದ್ದರು. 3ನೇ ಪದಾತಿ ದಳದ ವಿಭಾಗದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಸಚಿನ್ ಮೆಹ್ತಾ ಪ್ರಯಾಣಿಕರಾಗಿ ಹೆಲಿಕಾಪ್ಟರ್ನಲ್ಲಿದ್ದರು.
ಅಪಘಾತದಲ್ಲಿ ಅದೃಷ್ಟವಶಾತ್ ಮೂವರು ಪಾರಾಗಿದ್ದು, ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಮೇಜರ್ ಜನರಲ್ ಮೆಹ್ತಾ ಅವರು ತಮ್ಮ ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಂಡಿದ್ದು, ಆ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೆಲಿಕಾಪ್ಟರ್ ಪತನದ ಕಾರಣ ಹುಡುಕಲು ತನಿಖೆಗೆ ಆದೇಶ ನೀಡಲಾಗಿದೆ. ಈ ಚೀತಾ ಎಂಬ ಹೆಲಿಕಾಪ್ಟರ್ಗಳು ಸಿಯಾಚಿನ್ ಹಿಮನದಿಯಲ್ಲಿ ಪಾಕಿಸ್ತಾನಿ ಸೈನಿಕರ ವಿರುದ್ಧ ಹೋರಾಡಲು ಏಪ್ರಿಲ್ 13, 1984 ರಂದು ಪ್ರಾರಂಭಿಸಲಾದ ಆಪರೇಷನ್ ಮೇಘದೂತ್ನ ಭಾಗವಾಗಿದ್ದವು ಎನ್ನಲಾಗಿದೆ (ಏಜೆನ್ಸೀಸ್).