ಕ್ಯಾಲಿಫೋರ್ನಿಯಾದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಮೂವರು ಭಾರತೀಯರು ಸಾವು, ಇಬ್ಬರಿಗೆ ಗಾಯ | California

ಘಟನೆಯ ಸ್ಥಳ
ಘಟನೆಯ ಸ್ಥಳ
Published on
California: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಎರಡೂ ಕಾರುಗಳು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಬುಧವಾರ(ಜು. 22) ವರದಿಯಾಗಿದೆ.
ಮಂಗಳವಾರ(ಜು. 21) ಮುಂಜಾನೆ ಈ ಅಪಘಾತ ನಡೆದಿದೆ. ಮೃತರನ್ನು ನಾಜಿಯಾ ಸಲ್ಮಾ (45), ಅವರ 19 ವರ್ಷದ ಮಗಳು ಹಫೀಜಾ ನೇಹಾ ಶೇಖ್ ಮತ್ತು 14 ವರ್ಷದ ಮಗ ಹಫೀಜ್ ಒಮರ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಹೈದರಾಬಾದ್‌ನ ಸೈದಾಬಾದ್‌ನ ವಾಣಿ ನಗರದ ನಿವಾಸಿಗಳು.
ಮೃತ ನಾಜಿಯಾ ಅವರ ಪತಿ ಶೇಖ್ ಅಬ್ದುಲ್ ನವೀದ್ ಮತ್ತಯ ಚಿಕ್ಕ ಮಗಳು ಖತೀಜಾ ಶೇಖ್ ಅಪಘಾತದಲ್ಲಿ ಬದುಕುಳಿದಿದ್ದು, ಕ್ಯಾಲಿಫೋರ್ನಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ. ಡಿಕ್ಕಿ ಹೊಡೆದ ಇನ್ನೊಂದು ಕಾರಿನ ಚಾಲಕ ಸಹ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇನ್ನೂ ಹೈದರಾಬಾದ್‌ನ ಹಳೆಯ ನಗರದವರಾದ ಅಬ್ದುಲ್ ನವೀದ್ ಸುಮಾರು 19 ವರ್ಷಗಳ ಹಿಂದೆ ವೃತ್ತಿಜೀವನಕ್ಕಾಗಿ ಅಮೆರಿಕಕ್ಕೆ ತೆರಳಿದ್ದ ಅವರು ಅಂತಿಮವಾಗಿ ತಮ್ಮ ಕುಟುಂಬದೊಂದಿಗೆ ಅಲ್ಲಿ ನೆಲೆಸಿದ್ದರು. ಪ್ರಸ್ತುತ ಅಮೆರಿಕದಲ್ಲಿ ಅವರು ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ.
ಇನ್ನೂ ಹೈದರಾಬಾದ್​ನಲ್ಲಿರುವ ಕುಟುಂಬಸ್ಥರು ಸರ್ಕಾರಕ್ಕೆ ಮೂವರ ಮೃತದೇಹಗಳ ಮತ್ತು ಚಿಕಿತ್ಸೆ ಪಡೆಯುತ್ತಿರುವವರನ್ನು ಸ್ವದೇಶಕ್ಕೆ ವಾಪಸ್ ತರಲು ಪ್ರಯಾಣ ಹಾಗೂ ಚಿಕಿತ್ಸಾ ನೆರವು ಕೋರಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net