ಮಹಿಳಾ ಪತ್ರಕರ್ತೆ ಪ್ರಶ್ನೆಗೆ ಉರಿದುಕೊಂಡ ಡೊನಾಲ್ಡ್ ಟ್ರಂಪ್; ಅಶ್ಲೀಲ ಪದ ಬಳಸಿ ಟೀಕಿಸಿದ್ರಾ ಅಮೆರಿಕಾ ಅಧ್ಯಕ್ಷ? | Donald Trump

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
Published on
ವಾಷಿಂಗ್ಟನ್​: ಇರಾನ್ ವಿರುದ್ಧದ ಅನಿರೀಕ್ಷಿತ ಯುದ್ಧದಿಂದಾದ ಇಂಧನ ಬೆಲೆ ಏರಿಕೆಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಹಿಳಾ ಪತ್ರಕರ್ತೆಯ ಪ್ರಶ್ನೆಗೆ ಉರಿದುಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ವಿರುದ್ಧ ಆಶ್ಲೀಲ ಪದ ಬಳಸಿ, ಅವಹೇಳನಕಾರಿಯಾಗಿ ಮಾತನಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ವಾರ್ಷಿಕೋತ್ಸವದ ಆಚರಣೆಗೆ ಮುನ್ನ ರಿಫ್ಲೆಕ್ಟಿಂಗ್ ಪೂಲ್‌ನಲ್ಲಿ ಪುನಃಸ್ಥಾಪನೆ ಕಾರ್ಯ ನಡೆಯುತ್ತಿರುವ ನ್ಯಾಷನಲ್ ಮಾಲ್‌ಗೆ ಗುರುವಾರ(ಮೇ 07) ಟ್ರಂಪ್ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿನೆ ನಡೆಸಿದರು. ಸ್ಥಳದಲ್ಲಿ ಕೆಲಸ ಮಾಡುತ್ತಿರುವ ನಿರ್ಮಾಣ ಸಿಬ್ಬಂದಿಯನ್ನು ಶ್ಲಾಘಿಸಿದರು.
ಈ ವೇಳೆ ಸ್ಥಳದಲ್ಲಿ ಸ್ಥಳದಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ಆಗ ಸ್ಥಳದಲ್ಲಿದ್ದ ಎಬಿಸಿ ನ್ಯೂಸ್​ನ ಹಿರಿಯ ವರದಿಗಾರ್ತಿ ರಾಚೆಲ್ ಸ್ಕಾಟ್, ಟ್ರಂಪ್​ ಅವರಿಗೆ ಅಧ್ಯಕ್ಷರೇ ಇರಾನ್​ ವಿರುದ್ಧ ಯುದ್ಧ ನಡೆಯುವಾಗ ನೀವು ಇಲ್ಲಿದ್ದೀರಿ, ಇಂಧನ ಬೆಲೆಗಳು ಏರಿಕೆಯಾಗುತ್ತಿದ್ದು, ಸರ್ಕಾರ ಸೌಂದರ್ಯೀಕರಣ ಮಾಡುವ ಯೋಜನೆಗಳ ಮೇಲೆ ಯಾಕೆ ಗಮನಹರಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ತಕ್ಷಣ ಪತ್ರಕರ್ತೆ ಪ್ರಶ್ನೆಯನ್ನು ತಡೆದ ಟ್ರಂಪ್, ಯಾಕಂದ್ರೆ ನಾನು ನಮ್ಮ ದೇಶವನ್ನು ಸುಂದರವಾಗಿ ಮತ್ತು ಸುರಕ್ಷಿತವಾಗಿಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಮುಂದುವರೆದು, ಸಿಟ್ಟಿನಿಂದ ಇದೆಂಥಾ ಮೂರ್ಖ ಪ್ರಶ್ನೆ, ಏನೂ ಕೇಳುತ್ತಿದ್ದೀಯಾ? ಎಂದು ಕಿಡಿಕಾರಿದ್ದಾರೆ. ಬಳಿಕ ಕಾರ್ಮಿಕರ ಕಡೆ ತಿರುಗಿ ಅವಳು ಎಬಿಸಿ ನಕಲಿ ಸುದ್ದಿಗಳೊಂದಿಗೆ ಇದ್ದಾಳೆ, ಮತ್ತು ಅವಳು ಹಾರರ್ ಶೋ, ಅಂತಹ ಪ್ರಶ್ನೆ ನಮ್ಮ ದೇಶಕ್ಕೆ ಅವಮಾನ ಎಂದು ಕೂಗಾಡಿದ್ದಾರೆ.
ಬಳಿಕ ತಮ್ಮ ಅಧ್ಯಕ್ಷೀಯ ಲಿಮೋಸಿನ್ ಕಡೆಗೆ ಹಿಂತಿರುಗಿ ಹೋಗುತ್ತಿದ್ದಾಗ, ಅವರು ಸ್ಕಾಟ್ ಕಡೆಗೆ ಸನ್ನೆ ಮಾಡುವುದನ್ನು ವಿಡಿಯೋದಲ್ಲಿ ದಾಖಲಾಗಿದ್ದು, ಅಲ್ಲಿ ಅವರು ಪತ್ರಕರ್ತೆಗೆ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎನ್ನಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರೆಲ್ ಆಗಿದ್ದು, ಬಳಕೆದಾರರು b***h ಎಂಬ ಪದ ಬಳಸಿದ್ದಾರೆ ಊಹಿಸುತ್ತಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net